ಹಾಡು: ವಿಶ್ವ ವಿನೂತನ ವಿದ್ಯಾ ಚೇತನ
ಪ್ರಕಾರ: ಭಾವಗೀತೆ
ಸಂಗೀತ: ಜಿಕೆ.ವೆಂಕಟೇಶ್
ರಚನೆ: ಚೆನ್ನವೀರ ಕಣವಿ
ವಿಶ್ವ ವಿನೂತನ ಹಾಡನ್ನು ಕೇಳಿ:
ವಿಶ್ವ ವಿನೂತನ ವಿದ್ಯಾ ಚೇತನ ಸಾಹಿತ್ಯ:
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ
ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ
ಗಂಗಾ ಕದoಬ ರಾಷ್ಟ್ರಕೂಟ ಬಲ
ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ
ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವೊಲ ಮಲೆ ಕರೆ ಸುಂದರ ಸೃಷ್ಟಿ
ಜ್ಞಾನದ ವಿಜ್ಞಾನದ ಕಲೆಯೈಸಿರಿ
ಸಾರೋದಯ ಧಾರಾ ನಗರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ
ಅರಿವೆ ಗುರುನುಡಿಜ್ಯೋತಿರ್ಲಿಂಗ
ದಯವೇ ಧರ್ಮದ ಮೂಲ ತರಂಗ
ವಿಶ್ವ ಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಲ ಜಯಭೇರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ
ಜಯ ಭಾರತಿ
ಜಯ ಭಾರತಿ
ಜಯ ಭಾರತಿ
ಸಾಹಿತ್ಯ ಹಾಡಿಕೊಳ್ಳಿ: ಹಿಂದುಸ್ಥಾನವು ಎಂದು ಮರೆಯದ ಹಾಡಿನ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ: ಒಳಿತು ಮಾಡು ಮನುಸ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ: ಧರಣಿ ಮಂಡಲ ಮಧ್ಯದೊಳಗೆ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ: ತರವಲ್ಲ ತಗಿ ನಿನ್ನ ತಂಬೂರಿ ಸಾಹಿತ್ಯ