Mind Sharing?

ಚಿತ್ರ: ಸಂಯುಕ್ತ (1988)
ಗಾಯಕ: ಎಸ್.ಪಿ. ಬಾಲಸುಬ್ರಮಣ್ಯಂ, ಮನೊ, ರಮೇಶ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್

**********************************************************************************************************************************

ಈ ನಮ್ಮ ನಾಡೆ ಚಂದವು
ಈ ನಮ್ಮ ನುಡಿಯೆ ಚಂದವು
ಈ ನಮ್ಮ ನಾಡೆ ಚಂದವು
ಈ ನಮ್ಮ ನುಡಿಯೆ ಚಂದವು
ಗಿರಿಗಿರಿಯಲಿ ಬಳು ಬಳುಕುತ
ಹರಿಯುವ ನದಿ ಚೆನ್ನ
ಹಸು ಹಸಿರಿನ ಲತೆ ಲತೆಯಲಿ
ಅರಳಿದ ಸುಮ ಚೆನ್ನ
ಗಿಡ ಮರದಲಿ ಅರಗಿಣಿಗಳ
ಚಿಲಿಪಿಲಿ ಧನಿ ಚೆನ್ನ
ಓಹೊ ಹೊ ಹೊ…..ಓಹೊ ಹೊ ಹೊ
ಓಹೊ ಹೊ ಹೊ ಹೊ ಹೊ
ಈ ನಮ್ಮ ನಾಡೆ ಚಂದವು
ಈ ನಮ್ಮ ನುಡಿಯೆ ಚಂದವು
ಗಾಳಿಯು
ಸುಮಗಳ ಪರಿಮಳ ತರುತಿದೆ ಬೀಸುತ
ಪಯಣಕೆ
ಹುರುಪನು ಕೊಡೊ ಹೊಸತನವನು ತುಂಬುತ
ಗಾಳಿಯು
ಸುಮಗಳ ಪರಿಮಳ ತರುತಿದೆ ಬೀಸುತ
ಪಯಣಕೆ
ಹುರುಪನ್ನು ಕೊಡೊ ಹೊಸತನವನು ತುಂಬುತ
ಸಂತೋಷ ಮನಕೆ ತಂದಿದೆ
ಉಲ್ಲಾಸ ಬದುಕು ಕಂಡಿದೆ
ಈ ಹಾದಿ ಸುಂದರ
ಈ ನೋಟ ಸುಂದರ
ಓಹೊ ಹೊ ಹೊ…..ಓಹೊ ಹೊ ಹೊ
ಓಹೊ ಹೊ ಹೊ ಹೊ ಹೊ
ಈ ನಮ್ಮ ನಾಡೆ ಚಂದವು
ಈ ನಮ್ಮ ನುಡಿಯೆ ಚಂದವು
ಹೆ ಹೆ ಹೆ….ಏ ಹೆ ಹೆ
ಆಹಾಹ….ಅಹಹ(ಅಹಹ ಅಹಹ)
ನೋಡದೊ
ನಯನವ ಸೆಳೆಯುವ ಹುಡುಗಿಯರಂದವ
ಬಿಡದೆಲೆ
ಹುಡುಕಿಕೊ ಜೊತೆ ನಿನ ಮನಸಿಗೆ ಹಿಡಿಸುವ….ಆ ಆ ಆ
ನೋಡದೊ
ನಯನವ ಸೆಳೆಯುವ ಹುಡುಗಿಯರಂದವ
ಬಿಡದೆಲೆ
ಹುಡುಕಿಕೊ ಜೊತೆ ನಿನ ಮನಸಿಗೆ ಹಿಡಿಸುವ
ಸಂಗಾತಿ ಈಗ ಬಂದರೆ
ಸಂಸಾರ ಎಂಬ ತೊಂದರೆ
ಹತ್ತಾರು ಮಕ್ಕಳು
ಗೋಳಾಡೋ ಧನಿಗಳು
ಓಹೊ ಹೊ ಹೊ…..ಓಹೊ ಹೊ ಹೊ
ಓಹೊ ಹೊ ಹೊ ಹೊ ಹೊ
ಈ ನಮ್ಮ ನಾಡೆ ಚಂದವು
ಈ ನಮ್ಮ ನುಡಿಯೆ ಚಂದವು
ಗಿರಿಗಿರಿಯಲಿ ಬಳು ಬಳುಕುತಾ
ಹರಿಯುವ ನದಿ ಚೆನ್ನ
ಹಸುಹಸಿರಿನ ಲತೆ ಲತೆಯಲಿ
ಅರಳಿದ ಸುಮ ಚೆನ್ನ
ಗಿಡ ಮರದಲಿ ಅರಗಿಣಿಗಳ
ಚಿಲಿಪಿಲಿ ಧನಿ ಚೆನ್ನ
ಓಹೊ ಹೊ ಹೊ…..ಓಹೊ ಹೊ ಹೊ
ಓಹೊ ಹೊ ಹೊ ಹೊ ಹೊ
ಈ ನಮ್ಮ ನಾಡೆ ಚಂದವು
ಈ ನಮ್ಮ ನುಡಿಯೆ ಚಂದವು
Mind Sharing?