ಚಿತ್ರ: ಕಿಟ್ಟು ಪುಟ್ಟು (1977)
ಗಾಯಕರು: ಕೆ.ಜೆ. ಯೇಸುದಾಸ್, ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಗಂಡು: ಆಹಾ.. ಏಹೇ
ಹೆಣ್ಣು: ಏಹೇ.. ಹಾ ಹಾ…..
ಗಂಡು: ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲ
ನಿನ್ನಿಂದ ನನ್ನ
ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಹೆಣ್ಣು: ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲ
ನಿನ್ನಿಂದ ನನ್ನ
ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಂಡು: ಊರೊಂದೂ ಏತಕೆ ಬೇಕು
ಮನೆಯೊಂದೂ ಏಕಿರಬೇಕು
ಎಲ್ಲಿರಲಿ ನಮ್ಮ ಊರದೆ
ನಮಗಿನ್ನು ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ಹೆಣ್ಣು: ನೂರೆಂಟು ಮಾತುಗಳೇಕೇ
ನೂರಾರು ಆಸೆಗಳೇಕೆ
ಎದುರಲ್ಲಿ ನೀನು ನಿಂತಿರೆ
ಕಣ್ಣಲ್ಲಿ ಕಣ್ಣು ಬೆರೆತಿರೆ
ನಾನಿಂದು ಹೊಸ ಲೋಕ ಕಂಡೆ
ಗಂಡು: ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲ
ನಿನ್ನಿಂದ ನನ್ನಾ
ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲಾ
ಹೆಣ್ಣು: ಏನೊಂದೂ ಕೇಳದು ನಮಗೆ
ಬೇರೇನೂ ಬೇಡವು ನಮಗೆ
ಒಲವೊಂದೆ ನಮಗೆ ದೇವರು
ಇನ್ಯಾರು ನಮಗೆ ಕಾಣರು
ನಮಗಿನ್ನು ಸರಿ ಸಾಟಿ ಯಾರೂ
ಗಂಡು: ಎಂದೆಂದೂ ಮುಗಿಯದೆ ಇರಲಿ
ಈ ಪಯಣಾ ಸಾಗುತಲಿರಲಿ
ನಗುನಗುತ ಹೀಗೆ ಬಾಳುವ
ಒಂದಾಗಿ ಮುಂದೆ ಹೋಗುವ
ಹಾಯಾಗಿ ಜೊತೆಯಾಗಿ ನಾವು…ಉಉಉ
ಹೆಣ್ಣು: ಕಾಲವನ್ನು ತಡೆಯೋರು ಯಾರು ಇಲ್ಲಾ
ಗಂಡು: ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ
ಗಂಡು+ಹೆಣ್ಣು: ನಿನ್ನಿಂದ ನನ್ನ
ನನ್ನಿಂದ ನಿನ್ನ
ದೂರ ಮಾಡಲು ಎಂದೂ ಆಗೋಲ್ಲಾ ಆ ಆ
ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲಾ