ಚಿತ್ರ: ಬಡವರ ಬಂಧು (1976)
ಗಾಯಕರು: ಡಾ. ರಾಜಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
**********************************************************************************************************************************
ಹ್ಮ್………ಹ್ಮ್ ಹ್ಮ್ ಹ್ಮ್
ಆ… ಆಆಆ….
ಆ ಆ ಆ………..
ಆ……….. ಆ ಆ ಆ ಆ….
ಆ…… ಆ ಆ ಆ ಆ..
ನಿನ್ನ ನುಡಿಯು ಹೊನ್ನ ನುಡಿಯು
ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ
ಮೀಟಿ ಓಡಿದೇ ಏತಕೆ
ನಿನ್ನ ನುಡಿಯು ಹೊನ್ನ ನುಡಿಯು
ಜೇನ ಹನಿಯು ಹೃದಯಕೆ
ನಡೆವ ಹಾದಿಗೆ ನಗೆಯ ಹೂವನು
ಚೆಲ್ಲಿದಾಗಲು ಕಾಣದೇ
ನಡೆವ ಹಾದಿಗೆ ನಗೆಯ ಹೂ…ವನು
ಚೆಲ್ಲಿದಾಗಲು ಕಾಣದೇ
ಕಂಗಳಿಂದಲೆ ಪ್ರಣಯ ಕಾವ್ಯವ
ಹಾಡಿದಾಗಲು ಕೇಳದೇ
ನಿನ್ನರಿಯದೇ ಹೋದೆನು
ಮನಸ ತಿಳಿಯದೆ ಸೋತೆನು
ಕನಸಿನಲ್ಲಿ ಕಂಡ ಹಣ್ಣಿಗೆ
ಆಸೆಪಡುವ೦ತಾದೆನು
ನಿನ್ನ ನುಡಿಯು ಹೊನ್ನ ನುಡಿಯು
ಜೇನ ಹನಿಯು ಹೃದಯಕೆ
ಕಂಡು ಕಾಣದ ಮಿಂಚಿನಂತೆ
ಸುಳಿದು ಓಡಿದೆ ದೂರಕೆ
ಕಂಡು ಕಾಣದ ಮಿಂಚಿನಂತೆ
ಸುಳಿದು ಓಡಿದೆ ದೂರಕೆ
ತಂದು ಬಯಕೆಯ ತುಂಬಿ ನನ್ನಲಿ
ಇಂದು ಕೆಣಕಿದೆ ಏತಕೆ
ನೀನು ಗಗನದ ಕುಸುಮವು
ನಾನು ಭೂಮಿಯ ಭ್ರಮರವು
ಮಧುವಿನಾಸೆಯು ಸಹಜವಾದರು
ಸೇರಲೆಲ್ಲಿದೆ ಹಾದಿಯು
ನಿನ್ನ ನುಡಿಯು ಹೊನ್ನ ನುಡಿಯು
ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ
ಮೀಟಿ ಓಡಿದೇ ಏತಕೆ
ನಿನ್ನ ನುಡಿಯು ಹೊನ್ನ ನುಡಿಯು
ಜೇನ ಹನಿಯು ಹೃದಯಕೆ
ಅಹ ಹಾ ಆ ಆ ಆ….
ಆಹಾ ಆ ಆ ಆ….
ಹಾ.. ಆ ಆ ಆ….