Mind Sharing?

ಚಿತ್ರ: ನೀ ಬರೆದ ಕಾದಂಬರಿ (1985)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯ್ ಆನಂದ್

**********************************************************************************************************************************

ಗಂಡು: ನೀ ಮೀಟಿದ
ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಹೆಣ್ಣು: ಇಂದೇತಕೊ
ನಾ ನಿನ್ನಲಿ
ಬೆರೆವಂತ ಮನಸಾಗಿದೆ
ಗಂಡು: ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ…ಓ ಓ ಓ
ಹೆಣ್ಣು: ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ
ಗಂಡು: ನೀ ಮೀಟಿದ (ಹೆಣ್ಣು: ಆ ಆ ಆ)
ನೆನಪೆಲ್ಲವೂ(ಹೆಣ್ಣು: ಆ ಆ ಆ)
ಎದೆ ತುಂಬಿ ಹಾಡಾಗಿದೆ
ಹೆಣ್ಣು: ಬಾಳಲ್ಲಿ ನೀ ಬರೆದೆ
ಹೊಸ ಪ್ರೇಮ ಕಾದಂಬರಿ….ಓ ಓ ಓ
ಗಂಡು: ಧರೆಗಿಂದು ಬಂದಂತ
ಸೌಂದರ್ಯ ಸುರಸುಂದರಿ
ಹೆಣ್ಣು: ಶ್ರುತಿ ಸೇರಿದೆ ಬಾಳು ಹಿತವಾಗಿದೆ
ಗಂಡು: ಸುರಲೋಕದ ಸುಖ ನಮದಾಗಿದೆ
ಹೆಣ್ಣು: ತನು ಕೂಗಿದೆ ಮನ ಹಾಡಿದೆ
ಗಂಡು: ಎದೆ ಕೋಗಿಲೆ ಇದೋ ಹಾಡಿದೆ
ಹೆಣ್ಣು: ಮನಸು
ಮನಸು
ಬೆರೆಯೆ ಬಾಳೆ ಸೊಗಸು
ಗಂಡು: ನೀ ಮೀಟಿದ
ನೆನಪೆಲ್ಲವು
ಎದೆ ತುಂಬಿ ಹಾಡಾಗಿದೆ
ಗಂಡು: ಆ ಭಾನು ಈ ಭೂಮಿ
ನೋಡಲ್ಲಿ ಒಂದಾಗಿದೆ….ಆ ಆ ಆ
ಹೆಣ್ಣು: ನಮ್ಮಂತೆ ನೀವೆಂದು
ಒಂದಾಗಿ ಇರಿಯೆಂದಿದೆ
ಗಂಡು: ಸಂಗಾತಿ ನಾ ನಿನ್ನ ಜೊತೆಯಾಗುವೆ
ಹೆಣ್ಣು: ಎಂದೆಂದಿಗೂ ನಿನ್ನ ಉಸಿರಾಗುವೆ
ಗಂಡು: ನೀನಿಲ್ಲದೆ ಇರಲಾರೆನು
ಹೆಣ್ಣು: ನಿನ್ನಿಂದ ನಾ ದೂರಾಗೇನು
ಗಂಡು: ನಗುವ
ನಲಿವ
ಜಗವ ಮರೆತು ಮೆರೆವ
ಹೆಣ್ಣು: ನೀ ಮೀಟಿದ (ಗಂಡು: ಆ ಆ ಆ)
ನೆನಪೆಲ್ಲವೂ(ಗಂಡು: ಆ ಆ ಆ)
ಎದೆ ತುಂಬಿ ಹಾಡಾಗಿದೆ
ಗಂಡು: ಇಂದೇತಕೊ ನಾ ನಿನ್ನಲಿ
ಬೆರೆವಂತ ಮನಸಾಗಿದೆ
ಹೆಣ್ಣು: ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ…ಏ ಏ ಏ
ಗಂಡು: ಈ ಬಂಧನ ಬಹು ಜನ್ಮದ
ಕಥೆ ಎಂದು ಮನ ಹೇಳಿದೆ
Mind Sharing?