ಚಿತ್ರ : ಮುಗುಳುನಗೆ (2017)
ಗಾಯನ : ವಿಜಯ್ ಪ್ರಕಾಶ್
ಸಂಗೀತ: ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
**********************************************************************************************************************************
ಅಮರ ಹಳೆ ನೆನಪು
ಅಮರ ಹಳೆ ನೆನಪು….ಉಉಉಉ
ಹೃದಯ ಆಚೆ ತೆಗೆದು…ಉಉಉಉ
ಹಾಕು ಹಮಾಮು ಸೋಪು
ತಿಳ್ಕೊಬಹುದಾ ಯಾವ್ ಕಡೆ ನಿಮ್ದು
ಬಂದಂಗಿದೆ ಮಳೆಯಲಿ ನೆಂದು
ಕೂತ್ಕಬೇಡಿ ತಲೆ ಕೆರ್ಕೊಂಡು
ಮಾಡ್ಕಬೇಡಿ ನೆನಪು ರಿವೈನ್ಡು
ಪ್ರತಿಯೊಂದು ನೆನಪು ಮರೆಯೋಕೆ ಇರೋದು
ಅಮರ ಹಳೆ ನೆನಪು
ಅಮರ ಹಳೆ ನೆನಪ…ಉಉಉಉ
ಹೃದಯ ಆಚೆ ತೆಗೆದು
ಹಾಕು ಹಮಾಮು ಸೋಪು….ಉಉಉಉ
ನೆನ್ನೆಗೊಂದು ಮೊನ್ನೆಯಿದೆ
ನಾಳೆಗೊಂದು ನಾಳಿದ್ದಿದೆ
ಕ್ಯಾಲೆಂಡರು ಕಳ್ ನನ್ಮಗಂದು
ಎಂದೆಂದಿಗೂ ನಿನ್ನ ಬಿಟ್ಟು ಬಾಳೋದಿಲ್ಲ ಅಂತಿರಲ್ಲ
ಇದನೆ ನಾವು ಬ್ಯಾಡ ಅನ್ನೋದು
ತಂಪು ಪ್ರೀತಿ ತೊಪೆ ಆಗೋದು
ಅಷ್ಟಕ್ಕೆಲ್ಲಾ ಗಡ್ಡ ಬಿಡಬಾರದು
A ಆದ್ಮೇಲೆ B ನೇ ಬರೋದು
ಜಮಾನದಿಂದ ಹಿಂಗೇ ಇರೋದು
ಪ್ರತಿ ಹೊಸದು ಹಳೇದಾಗೋಕೆನೆ ಬರೋದು
ಅಮರ ಹಳೆ ನೆನಪು
ಅಮರ ಹಳೆ ನೆನಪು…ಉಉಉಉ
ಬದುಕು ನೆನ್ನೆಯ ಸಾರು
ಬೆರೆಸು ಕೊತ್ತಂಬ್ರಿ ಸೊಪ್ಪು….ಉಉಉಉ
ಮದುವೆ ದಿನ ಮಾಜಿ ಹುಡ್ಗಿರೆಲ್ಲ
ಸೀರೆ ಉಟ್ಕೊಂಡ್ ಬಂದ್ರೆ
ಅಕ್ಕಿ ಕಾಳು ಯಾರಿಗಾಕುವ
ಲವ್ವು ದಬ್ಬಾಕ್ಕೊಂಡ ಮೇಲೂ
ಬ್ಯಾರೆ ಯಾರನೋ ಕಟ್ಟಿಕೊಂಡ್ರೆ
ಚೆನ್ ಚೆನ್ನಾಗೇ ಮಕ್ಳು ಹುಟ್ಟಲ್ವಾ
ಎಂಥಾ ಲವ್ವು ಮ್ಯಾರೇಜ್ ಆದ್ರೂನೂ
ಯಾ… ಮದುವೆ ಡೇಟು ಮರ್ತೇ ಹೋಗ್ತದೆ
ಕೇಳೊದ್ದಕ್ಕೆ ಕಷ್ಟ ಆದ್ರೂನು
ನಾವು ಕೆಲವು ಹೇಳ್ಬೇಕಾಗ್ತದೆ
ಪ್ರತಿಯೊಂದು ನಗುವು ಅಳಿಸೋಕೆ ಬರೋದು
ಬದುಕು ನೆನ್ನೆಯ ಸಾರು
ಬೆರೆಸು ಕೊತ್ತಂಬ್ರಿ ಸೊಪ್ಪು…..ಉಉಉಉ
ಬೆರಸಲೇ…
ಹೃದಯ ಆಚೆ ತೆಗೆದು
ಹಾಕು ಹಮಾಮು ಸೋಪು…ಉಉಉಉ
ಅಮರ ಹಳೆ ನೆನಪು
ಅಮರ ಹಳೆ ನೆನಪು….ಉಉಉಉ