Mind Sharing?

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ (1991)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ

**********************************************************************************************************************************

ಹೆಣ್ಣು: ಓ…. ಗೆಳೆಯನೇ
ಬಯಕೆಯ
ಅರಿತೆಯ
ಕೊಡುವೆಯ
ಗಂಡು: ಓ….. ಗೆಳತಿಯೇ
ಬಯಕೆಯ
ಅರಿತೆಯ
ಕೊಡುವೆಯ
ಹೆಣ್ಣು: ಕೆಣಕಿ ಯೌವ್ವನ
ತನುಮನ ಕೆರಳಿ ಕೂಗಿದೆ
ಬಳಿಗೆ ಬಾ ಬಾ…..ಬಾ
ಗಂಡು: ಕೆಣಕಿ ಯೌವ್ವನ
ತನುಮನ ಕೆರಳಿ ಕೂಗಿದೆ
ಬಳಿಗೆ ಬಾ ಬಾ….ಬಾ
ಹೆಣ್ಣು: ಓ…. ಗೆಳೆಯನೇ
ಬಯಕೆಯ
ಅರಿತೆಯ
ಕೊಡುವೆಯ
ಗಂಡು: ಈ ಚಿನ್ನದ
ಮೈ ಬಣ್ಣವ
ಕಂಡಾಗ ನನ್ನಲ್ಲಿ ಚಳಿ ಚಳಿ
ಹೆಣ್ಣು: ಈ ವೇದನೆ
ನಾ ತಾಳೆನು
ಸಂಗಾತಿ ಬಾ ಬೇಗ ಬಳಿ ಬಳಿ
ಗಂಡು: ಸಂತೋಷವ
ನೀ ತುಂಬುತ
ಬಂಗಾರಿ ನನ್ನಾಸೆ ಕಳಿ ಕಳಿ
ಹೆಣ್ಣು: ನನ್ನೊಲವಿನ
ಸಾಗರದಲ್ಲಿ
ನೀ ಹೊನ್ನ ಮೀನಾಗಿ ಇಳಿ ಇಳಿ
ಗಂಡು: ಎದೆಯ ತಾಳಕೆ(ಹೆಣ್ಣು: ಹಾ)
ಮಿಲನದ ಕವಿತೆ ಹಾಡುತ (ಹೆಣ್ಣು: ಹ್ಮ್..)
ಕುಣಿಯುವಾಸೆ…ಏ….ಏ….ಏ…
ಹೆಣ್ಣು: ಕೆಣಕಿ ಯೌವ್ವನ
ತನುಮನ ಕೆರಳಿ ಕೂಗಿದೆ
ಬಳಿಗೆ ಬಾ ಬಾ…..ಬಾ….
ಗಂಡು: ಓ….. ಗೆಳತಿಯೇ
ಬಯಕೆಯ
ಅರಿತೆಯ
ಕೊಡುವೆಯ(ಹೆಣ್ಣು: ಹಾ…ಹ್ಹ.ಹ್ಹ)
ಹೆಣ್ಣು: ಬಿಸಿ ಏರಿದೆ
ಹಿತವಾಗಿದೆ
ದಿನವೆಲ್ಲ ಇರುವಾಸೆ ತೋಳಲಿ
ಗಂಡು: ಹ್ಹ ಹ್ಹ..ಹೊಸ ಆಟವ
ನಾ ಆಡಲೇ
ಹಗಲೆಲ್ಲ ಹಾಯಾಗಿ ಜೊತೆಯಲಿ
ಹೆಣ್ಣು: ಹೋ ಇನ್ನೇತಕೆ ಮಾತಾಡುವೆ
ಬಾ ತುಂಬು ಆನಂದವ…ಆ ಆ ಆ
ಗಂಡು: ಆ….ಹೂ ಮಂಚವು
ಬಾ ಎಂದಿದೆ
ನಾವಿಲ್ಲಿ ಒಂದಾಗುವ ……ಆ ಆ ಆ
ಹೆಣ್ಣು: ಎದೆಯ ತಾಳಕೆ(ಗಂಡು: ಹ ಹ)
ಪ್ರಣಯದ ಕವಿತೆ ಹಾಡುತ
ಕುಣಿಯುವಾಸೆ…ಏ ಏ ಏ
ಗಂಡು: ಕೆಣಕಿ ಯೌವ್ವನ (ಹೆಣ್ಣು: ಹ)
ತನುಮನ ಕೆರಳಿ ಕೂಗಿದೆ(ಹೆಣ್ಣು: ಹ್ಹ.ಹ್ಹ.ಹ್ಹ)
ಬಳಿಗೆ ಬಾ ಬಾ…… ಬಾ
ಹೆಣ್ಣು: ಓ…. ಗೆಳೆಯನೇ
ಬಯಕೆಯ
ಅರಿತೆಯ
ಕೊಡುವೆಯ
ಗಂಡು: ಓ….. ಗೆಳತಿಯೇ(ಹೆಣ್ಣು: ಹ)
ಬಯಕೆಯ
ಅರಿತೆಯ
ಕೊಡುವೆಯ
Mind Sharing?