Mind Sharing?

ಚಿತ್ರ: ಸ್ವಾಭಿಮಾನ (1985)
ಗಾಯಕರು : ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಶಂಕರ್-ಗಣೇಶ್

**********************************************************************************************************************************

ಹೆಣ್ಣು: ದೂರದ ಊರಿಂದ ಹಮ್ಮೀರ ಬಂದ
ಜರತಾರಿ ಸೀರೆ ತಂದ
ಅದರಲ್ಲಿ ಇಟ್ಟೀನಿ ಈ ನನ್ನ ಮನಸನ್ನ
ಜೋಪಾನ ಜಾಣೆ ಎಂದ
ಉಟ್ಟಾಗ ನನಗಂತು ಮೈಯೆಲ್ಲ ಝುಮ್ಮಂತು
ಆ ಒಂದು ಕ್ಷಣ ನನ್ನ ಮನ ಎಲ್ಲೋ ತೇಲೋಯ್ತು
ಗಂಡು: ನೀ ಮುಡಿದ ಮಲ್ಲಿಗೆ ಹೂವಿನ ಗಂಧ
ಕರೆ ತಂತು ಊರಿಂದ
ಕಣ್ತುಂಬ ನೋಡ್ದಾಗ ಈ ನಿನ್ನ ಅಂದ
ಶುರುವಾಯ್ತು ಹೊಸ ಬಂಧ
ಎದೆ ತಾಳ ತಪ್ಪೋಯ್ತು
ನನಗೆಲ್ಲಾ ಮರ್ತೋಯ್ತು
ಆ ಒಂದು ಕ್ಷಣ ನನ್ನ ಮನ
ಎಲ್ಲೋ ತೇಲೋಯ್ತು
ಗಂಡು: ಲ ಲ ಲ ಲ ಲ
ಲ ರ ಲ ಲ ಲ
ಲ ಲ ಲ ಲ ಲ
ಲ ಲಾ ಲ ಲಾ
ಗಂಡು: ನೀ ಹೆಜ್ಜೆ ಇಟ್ಟಲ್ಲಿ ಚೆಲುವೆ
ಎಲ್ಲೆಲ್ಲು ಅರಳಾವೆ ಹೂವೆ
ಮಿಂಚಂಗೆ ನಗುವಂತೆ ಗೊತ್ತು
ಮಳೆ ಹಂಗೆ ಸುರಿದಾವೆ ಮುತ್ತು
ಹೆಣ್ಣು: ಈ ಮಾತಿನ ಬಲೆಯನು ನೀ ಬೀಸಿದೆ
ಈ ಮೀನಿದು ಅದರಲಿ ವಶವಾಗಿದೆ
ಗಂಡು: ತುಟಿಯಿದು ಸೊಗಸು
ಇದರ ರುಚಿಯಿನ್ನು ಸೊಗಸು
ತುಟಿಯೇ ಸಿಗದೆ
ಇನ್ನು ಬಯಸಿದೆ ಮನಸು
ಹೆಣ್ಣು: ಹಸಿವು ನಿದ್ದೆ ಹಾಳಾಗೊಯ್ತು
ಎಲ್ಲಾ ನಿನ್ನಿಂದಾ
ಗಂಡು: ನೀ ಮುಡಿದ ಮಲ್ಲಿಗೆ ಹೂವಿನ ಗಂಧ
ಕರೆ ತಂತು ಊರಿಂದ
ಕಣ್ತುಂಬ ನೋಡ್ದಾಗ ಈ ನಿನ್ನ ಅಂದ
ಶುರುವಾಯ್ತು ಹೊಸ ಬಂಧ
ಎದೆ ತಾಳ ತಪ್ಪೋಯ್ತು
ನನಗೆಲ್ಲಾ ಮರ್ತೋಯ್ತು
ಆ ಒಂದು ಕ್ಷಣ ನನ್ನ ಮನ
ಎಲ್ಲೋ ತೇಲೋಯ್ತು…ಉಉಉ
ಹೆಣ್ಣು: ಮುಂಜಾನೆ ಕನಸಿನ ವೇಳೆ
ನೀ ಬಂದೆ ಅಂಬಾರಿ ಮೇಲೆ
ನಂಗಾಗಿ ನೀ ಆಗ ತಂದೆ
ಸುಗಂಧರಾಜದ ಮಾಲೆ
ಗಂಡು: ಆ ತಾವರೆ ಚೆಲುವೆಯ ಕಣ್ಣಾಯಿತೋ
ಆ ಮೋಡವೇ ಕಂಗಳ ಕಪ್ಪಾಯಿತೋ
ಹೆಣ್ಣು: ಉಸಿರಿದು ಭಾರ ನೀನು ಹೋದರೆ ದೂರ
ಆಸರೆಯಾಗಿ ತೋಳಾ ಸೆರೆ ಹಿಡಿ ಬಾರ
ಗಂಡು: ನೀನೆ ನನ್ನ ಪ್ರಾಣ ಇನ್ನ ಕೇಳೆ ನನ್ ಚಿನ್ನಾ
ಹೆಣ್ಣು: ದೂರದ ಊರಿಂದ ಹಮ್ಮೀರ ಬಂದ
ಜರತಾರಿ ಸೀರೆ ತಂದ(ಗಂಡು: ಆಹಾಹಾ)
ಅದರಲ್ಲಿ ಇಟ್ಟೀನಿ ಈ ನನ್ನ ಮನಸನ್ನ
ಜೋಪಾನ ಜಾಣೆ ಎಂದ(ಗಂಡು: ಏಹೇ ಹೇ)
ಉಟ್ಟಾಗ ನನಗಂತು ಮೈಯೆಲ್ಲ ಝುಮ್ಮಂತು
ಆ ಒಂದು ಕ್ಷಣ ನನ್ನ ಮನ ಎಲ್ಲೋ ತೇಲೋಯ್ತು
ಗಂಡು: ಆ……ನೀ ಮುಡಿದ ಮಲ್ಲಿಗೆ ಹೂವಿನ ಗಂಧ
ಕರೆ ತಂತು ಊರಿಂದ
ಕಣ್ತುಂಬ ನೋಡ್ದಾಗ ಈ ನಿನ್ನ ಅಂದ
ಶುರುವಾಯ್ತು ಹೊಸ ಬಂಧ
ಎದೆ ತಾಳ ತಪ್ಪೋಯ್ತು
ನನಗೆಲ್ಲಾ ಮರ್ತೋಯ್ತು
ಆ ಒಂದು ಕ್ಷಣ ನನ್ನ ಮನ
ಎಲ್ಲೋ ತೇಲೋಯ್ತು
Mind Sharing?