ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ (1991)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್. ಚಿತ್ರ
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ
*********************************************************************************************************************************
ಗಂಡು: ನೂರು ಹೆಣ್ಣು ಕಂಡು ನಾನು
ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ಹೆಣ್ಣು: ನೂರು ಕಣ್ಣು ಸಾಲದಯ್ಯ
ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ಗಂಡು: ನನ್ನಾಸೆಯು ಪೂರೈಸಿತು
ನಿನ್ನನ್ನು ಕಂಡಾಗಲೇ……
ಹೆಣ್ಣು: ಆನಂದದಿ ತೇಲಾಡಿದೆ
ನೀನಿಲ್ಲಿ ಬಂದಾಗಲೇ
ಗಂಡು: ನೂರು ಹೆಣ್ಣು ಕಂಡು ನಾನು
ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ಹೆಣ್ಣು: ನೂರು ಕಣ್ಣು ಸಾಲದಯ್ಯ
ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ಗಂಡು: ನನ್ನಾಸೆಯು ಪೂರೈಸಿತು
ನಿನ್ನನ್ನು ಕಂಡಾಗಲೇ……
ಹೆಣ್ಣು: ಆನಂದದಿ ತೇಲಾಡಿದೆ
ನೀನಿಲ್ಲಿ ಬಂದಾಗಲೇ
ಗಂಡು: ಈ…..ಬೊಂಬೆಯ
ರಂಭೆಯ
ನಿಂಬೆಯ
ಬಣ್ಣದ ಹೆಣ್ಣ ನೋಡುತಾ
ಕಂಗಳು ಮೋಹ ತುಂಬಲು
ಒಲವ ಕವಿತೆ ಬರೆದೆ…..
ಹಾಡಿ ಹಾಡಿ ನಲಿದೆ
ಹೆಣ್ಣು: ಓ….. ಗೆಳೆಯನೇ
ರಸಿಕನೇ
ಚೆಲುವನೇ
ನಿನ್ನನು ನೋಡಿದಾಗಲೇ
ನನ್ನೆದೆ ಹಾಡಿತಾಗಲೇ
ಇವನೇ ಇನಿಯನೆಂದು …..
ಸೇರು ಬೇಗ ಎಂದು
ಗಂಡು: ಮೊದಲು ನಿನ್ನನು ನೋಡಿದಾಗಲೇ
ಕೂಗುವಾಸೆ ಬಂತು
ಹೆಣ್ಣು: ನಿನ್ನ ನನ್ನೋರು ಎಂದು ಆಗಲೇ
ಹೇಳುವಾಸೆ ಆಯ್ತು
ಗಂಡು: ಓ.. ನನ್ನಾಸೆಯು ಪೂರೈಸಿತು
ನಿನ್ನನು ಕಂಡಾಗಲೇ.. ಏ ಏ ಏ ಏ
ಹೆಣ್ಣು: ಆನಂದದಿ ತೇಲಾಡಿದೇ
ನೀನಿಲ್ಲಿ ಬಂದಾಗಲೇ
ಗಂಡು: ನೂರು ಹೆಣ್ಣು ಕಂಡು ನಾನು
ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕ..ರೆ
ಹೆಣ್ಣು: ನೂರು ಕಣ್ಣು ಸಾಲದಯ್ಯ
ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ಹೆಣ್ಣು: ಆ… ಬೆಳ್ಳಿಯ
ಅಂಚಿನ
ಮುಗಿಲಿನ
ಮೆತ್ತೆಯ ಮೇಲೆ ತೇಲುತಾ
ಲೋಕವ ನೋಡುವಾಸೆಯು
ಇನಿಯಾ ಬರುವೆಯೇನು ……
ತನುವ ಬಳಸಿ ನೀನು
ಗಂಡು: ಓ.. ಪ್ರಿಯ ಸುಮ
ನಿರುಪಮ
ಅನುಪಮ
ಸೋತೆನು ನಿನ್ನ ಮೋಹಕೆ
ಜೇನಿನ ಸಿಹಿಯ ಮಾತಿಗೆ
ನೆರಳಿನಂತೆ ಹಿಂದೆ ..ಏ ಏ ಏ ಏ
ಸೇರಿ ಬಂದೆ ಎಂದು
ಹೆಣ್ಣು: ಇಂದು ನೀನಂದ ಮಾತು ಕೇಳಲು
ತನುವು ಅರಳಿ ಹೋಯ್ತು
ಗಂಡು: ಚಿನ್ನ ನಿನ್ನಂದ ನೋಡಿದಾಗಲೇ
ಮನವು ಕೆರಳಿ ಹೋಯ್ತು
ಹೆಣ್ಣು: ಓ…. ಆನಂದದಿ ತೇಲಾಡಿದೆ
ನೀನಿಲ್ಲಿ ಬಂದಾಗಲೇ
ಗಂಡು: ನನ್ನಾಸೆಯು ಪೂರೈಸಿತು
ನಿನ್ನನ್ನು ಕಂಡಾಗಲೇ
ಗಂಡು: ನೂರು ಹೆಣ್ಣು ಕಂಡು ನಾನು
ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ಹೆಣ್ಣು: ನೂರು ಕಣ್ಣು ಸಾಲದಯ್ಯ
ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ