Mind Sharing?

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ (1991)
ಗಾಯಕರು: ಕೆ.ಎಸ್. ಚಿತ್ರ
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ

**********************************************************************************************************************************

ಶರಣು ……….
ಶರಣೆಂದೆ
ಶರಣೆಂದೆ
ಓ……ಪ್ರಭುವೇ
ಶರಣೆಂದೆ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ
ಆನಂದ ನಿನ್ನಿಂದ ಕರುಣಾಮಯ
ಮೋಡ ಮಳೆಯಾಗಲು
ನೀರು ಭುವಿ ಸೇರಲು
ಭೂಮಿ ಹಸಿರಾಗಲು
ಲೋಕ ಗೆಲುವಾಗಲು
(ಕೋರಸ್: ಓಂ ಓಂ ಓಂ ಓಂ ಓಂ ಓಂ)
ನೀ ಕಾರಣನು ದೇವ
ಆ ಆ ಆ ……ಆಆಆ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
ಈ ಲತೆ ನೀನೆ…….
ಆ..ಆ….ಆ….ಆ…
ಈ ಲತೆ ನೀನೆ
ಈ ಸುಮ ನೀನೆ
ಈ ಸುಮ ತಂದ ಗಂಧವೂ ನೀನೆ
ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯು
ಗಿರಿಯಲ್ಲಿ ಗುಹೆಯಲ್ಲಿ ಬನದಲ್ಲಿಯು
ಬಾನಾಡಿ ಕೊರಳಲ್ಲಿ ಇಂಪಾಗಿಯು
ತಂಗಾಳಿ ಸುಳಿದಾಗ ತಂಪಾಗಿಯು
ತಂಗಾಳಿ ಸುಳಿದಾಗ ತಂಪಾಗಿಯು
ಹಣ್ಣ ರುಚಿಯಲ್ಲಿಯು
ಜೇನ ಸಿಹಿಯಲ್ಲಿಯು
ಹಾಲ ಬೆಳಕಲ್ಲಿಯೂ
ರಾತ್ರಿ ಇರುಳಲ್ಲಿಯು…..
(ಕೋರಸ್: ಓಂ ಓಂ ಓಂ ಓಂ ಓಂ ಓಂ)
ನೀನೇ ಇರುವೆ ದೇವ
ಆ ಆ ಆ ……ಆಆಆ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
ಈಶ್ವರ ನೀನೇ……..
ಆ ಆ ಆ ……ಆಆಆ
ಈಶ್ವರ ನೀನೇ ಶಾಶ್ವತ ನೀನೇ
ಎಲ್ಲವೂ ನೀನೇ ಎಲ್ಲೆಡೆ ನೀನೇ
ಸಂತೋಷ ಕೊಡುವಂತ ನಗೆಯಲ್ಲಿಯು
ಕಂದಂಗೆ ತಾಯ್ಕೊಡುವ ಮುತ್ತಲ್ಲಿಯು
ಹಿತವಾದ ಸಂಗೀತ ಸ್ವರದಲ್ಲಿಯು
ಕವಿಯಾಡೊ ಸವಿಯಾದ ಮಾತಲ್ಲಿಯು
ಕವಿಯಾಡೊ ಸವಿಯಾದ ಮಾತಲ್ಲಿಯು
ಬೆಂಕಿ ಕಿಡಿಯಲ್ಲಿಯ
ನೀರ ಹನಿಯಲ್ಲಿಯು
ಕಡಲ ಒಡಲಲ್ಲಿಯು
ಸಿಡಿವ ಸಿಡಿಲಲ್ಲಿಯು
(ಕೋರಸ್: ಓಂ ಓಂ ಓಂ ಓಂ ಓಂ ಓಂ)
ನೀನೇ ಇರುವೆ ದೇವ
ಆ ಆ ಆ ……ಆಆಆ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
Mind Sharing?