Mind Sharing?

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ (1991)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್. ಚಿತ್ರ
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ

**********************************************************************************************************************************

ಗಂಡು: ಬಾರೆ ರುಕ್ಕಮ್ಮ
ಕೈಗೆ ಸಿಕ್ಕಮ್ಮ
ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಲಾಲಿ ಹಾಡಮ್ಮಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ
ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮ
ರುಕ್ಕಮ್ಮಾ……..
ಕೈಗೆ ಸಿಕ್ಕಮ್ಮ
ಹೆಣ್ಣು: ಒಯ್ ಬೇಡ ಸುಬ್ಬಯ್ಯ
ನೀ ದಾರಿ ತಪ್ಪಯ್ಯ
ಇಂತ ಹಾಡು ಹಾಡಬೇಡಯ್ಯಾ
ಆಸೆ ಕುದುರೆ ಏರ ಬೇಡಯ್ಯಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ
ಎಂದು ನೀನು
ನನ್ನ ಬಿಟ್ಟಿ ಜೇನು ಕೇಳಲೆಂದು
ಬಂದೆ ಏನು
ಸುಬ್ಬಯ್ಯಾ……..
ದಾರಿ ತಪ್ಪಯ್ಯ
ಗಂಡು: ನನ್ನ ಮಾತು ಒಮ್ಮೆ ನಿಂತು ಕೇಳಮ್ಮ
ನನ್ನ ಆಸೆಗೊಂದು ದಾರಿ ತೋರಮ್ಮ
ಹೆಣ್ಣು: ನನ್ನ ಮಾತು ಒಮ್ಮೆ ನಿಂತು ಕೇಳಯ್ಯ
ನಿನ್ನ ಆಸೆಗಿಲ್ಲಿ ದಾರಿ ಇಲ್ಲಯ್ಯ
ಗಂಡು: ಎಂತ ಕಣ್ಣಮ್ಮ
ನಿಂದೆಂತ ತುಟಿಯಮ್ಮ…..ಆ ಆ ಆ
ಎಂತ ನಡುವಮ್ಮ
ನಿಂದೆಂತ ನಡೆಯಮ್ಮ
ನಿನ್ನ ಅಂದ ಯಾರಿಗುಂಟಮ್ಮ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ
ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮ
ರುಕ್ಕಮ್ಮಾ……….
ಕೈಗೆ ಸಿಕ್ಕಮ್ಮ
ಹೆಣ್ಣು: ಹಾ ಬೇಡ ಸುಬ್ಬಯ್ಯ
ನೀ ದಾರಿ ತಪ್ಪಯ್ಯ
ಇಂತ ಹಾಡು ಹಾಡಬೇಡಯ್ಯಾ
ಆಸೆ ಕುದುರೆ ಏರ ಬೇಡಯ್ಯಾ
ಗಂಡು: ಮೆತ್ತೆ ಹಾಗೆ ನಿಂತ ಹುಲ್ಲು ನೋಡಮ್ಮ
ಅತ್ತ ಇತ್ತ ಒಮ್ಮೆ ಉರುಳಿ ಆಡಮ್ಮ
ಹೆಣ್ಣು: ನೆನ್ನೆ ಹಾಗೆ ನಾನು ಚಿಕ್ಕವಳಲ್ಲಯ್ಯ
ಉಕ್ಕೋ ಪ್ರಾಯ ನಂದು ದೂರ ನಿಲ್ಲಯ್ಯ
ಗಂಡು: ಅಯ್ಯೋ ಅಮ್ಮಮ್ಮ
ನಿನ್ ಮಾತು ನಿಜವಮ್ಮ
ಪ್ರಾಯ ಹರಿದಾಗ
ಅದು ಎಂತ ಸೊಗಸಮ್ಮ
ಬಿಟ್ಟೋರುಂಟೆ ನಿನ್ನ ಬಾರಮ್ಮ
ಹೆಣ್ಣು: ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ
ಎಂದು ನೀನು
ನನ್ನ ಬಿಟ್ಟಿ ಜೇನು ಕೇಳಲೆಂದು
ಬಂದೆ ಏನು
ಸುಬ್ಬಯ್ಯಾ……..
ದಾರಿ ತಪ್ಪಯ್ಯ
ಗಂಡು: ಬಾರೆ ರುಕ್ಕಮ್ಮ
ಕೈಗೆ ಸಿಕ್ಕಮ್ಮ
ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಳುಳುಳುಳು ಹಾಡಮ್ಮಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ
ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮರುಕ್ಕಮ್ಮಾ……..
ಕೈಗೆ ಸಿಕ್ಕಮ್ಮ
ಬಾರೆ ರುಕ್ಕಮ್ಮ
ಹೆಣ್ಣು: ಹೇ ಬೇಡ ಸುಬ್ಬಯ್ಯ
ಗಂಡು: ಈಗ ನನ್ನ ಆಟ ನೋಡಮ್ಮ
ತರತೂರು ರರತೂರು ರು
ಹೆಣ್ಣು: ಆಸೆ ಕುದುರೆ ಏರ ಬೇಡಯ್ಯಾ
ಗಂಡು: ಹಾ
Mind Sharing?