Mind Sharing?

ಚಿತ್ರ : ಮುಗುಳುನಗೆ (2017)
ಗಾಯನ : ಸೋನು ನಿಗಮ್
ಸಂಗೀತ: ವಿ.ಹರಿಕೃಷ್ಣ
ಸಾಹಿತ್ಯ : ಜಯಂತ್ ಕಾಯ್ಕಿಣಿ

**********************************************************************************************************************************

ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನೆ ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು..
ಇಶಾರೆಯ ನೀ ನೀಡೂ
ಹುಷಾರಾಗುವೆ
ನನಗಾಗುವ
ಕನಸೆಲ್ಲವೂ
ಬರಿ ಇಂಥವೇ..ಏಏಏ
ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನು ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು
ನಾಚಿವೆ ನಿನ್ನನು
ನೋಡಿ ಹೂವಿನ ಅಂಗಡಿ
ಮೆಲ್ಲಗೆ ಕಣ್ಣಲೇ
ಗೀಚು ಮುತ್ತಿನ ಮುನ್ನುಡಿ
ಮಂದಹಾಸವೇ ನನ್ನ ಆಸ್ತಿಯು
ಈಗ ನಿನ್ನ ಪಾಲು
ತಮಾಷೆಗೂ ಕೈ ಚಾಚು
ತಯಾರಾಗುವೆ
ಬಡಪಾಯಿಯ
ಮನರಂಜನೆ
ಬರೀ ಇಂಥದೇ…ಏಏಏ
ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನು ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ
ಮರೆತರೆ ಮುಂದಿನ ಮಾತು
ನಿನ್ನನು ಕಾಣುವ
ಜಾಗ ಖಾಸಗಿ ಸ್ಮಾರಕ
ನನ್ನನು ಆಪ್ತನೂ
ಎಂದು ಮಾಡಿಕೊ ನೇಮಕ
ಎಲ್ಲೇ ಎಸೆದರು ನಿನ್ನ ಕಣ್ಣಲೇ
ಬಂದು ಬೀಳುವಾಸೆ
ನಿನ್ನಾ ಜೀವದಲ್ಲೀಗ
ಜಮಾ ಆಗುವೆ
ನಡು ಬೀದಿಯ
ಜ್ಞಾನೋದಯ
ಬರೀ ಇಂಥವೇ…ಏಏಏ
ರೂಪಸಿ ಸುಮ್ಮನೆ ಹೇಗಿರಲಿ
ನಿನ್ನನು ನೋಡುತ ಕೂತು
ಕೋಪಿಸಿಕೊಳ್ಳದೆ ಜ್ಞಾಪಿಸು ನೀ,
ಮರೆತರೆ ಮುಂದಿನ ಮಾ…ತು
Mind Sharing?