Mind Sharing?

ಚಿತ್ರ: ಮತ್ತೆ ಹಾಡಿತು ಕೋಗಿಲೆ (1990)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್. ಚಿತ್ರ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್

**********************************************************************************************************************************

ಗಂಡು: ಆ ಆ…………….
ಆಆಆಆ..ಆ ಆ..ಆ ಆ ಆ
ಆಆಆಆಆ ಆಆಆಆಆ ಆ..
ಗಂಡು: ಹಾಡುವ ಆಸೆ
ಹಾಡದು ಏಕೋ
ಹಾರುವ ಆಸೆ
ಹಾರದು ಏಕೋ
ಎಲೆಗಳಲಿ ಮರೆಯಾಗಿ
ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ ಓಹೋಹೋ
ಹೆಣ್ಣು: ಹಾಡುವ ಆಸೆ
ಹಾಡದು ಏಕೋ
ಹಾರುವ ಆಸೆ
ಹಾರದು ಏಕೋ
ಎಲೆಗಳಲಿ ಮರೆಯಾಗಿ
ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ ಓಹೋಹೋ
ಗಂಡು: ಹಾಡುವ ಆಸೆ
ಹಾಡದು ಏಕೋ
ಹಾರುವ ಆಸೆ
ಹಾರದು ಏಕೋ
ಎಲೆಗಳಲಿ ಮರೆಯಾಗಿ
ಎಲ್ಲೋ ಅಡಗಿದೆ
ಗಂಡು: ಚಳಿಯನು ತಾಳದೇ
ನೆಮ್ಮದಿ ಇಲ್ಲದೇ
ಬಾಳುವ ದಾರಿಯು
ಕಣ್ಣಿಗೆ ಕಾಣದೆ
ಹಾಡಲು ತೋರದೆ
ಸೊರಗಿದೆ..
ಹೆಣ್ಣು: ಇರುಳು ಜಾರದೆ
ಹಗಲು ಮೂಡದೆ
ಬಯಸಿದ ಶಾಂತಿಯು
ಬದುಕಲಿ ಬಾರದೆ
ಮತ್ತೆ ವಸಂತವು
ಕುಣಿಸಿದೆ..
ಗಂಡು: ಚೆಲುವೆ ನೀನೇಕೆ
ಬರಿ ಕನಸು ಕಾಣುತಲಿರುವೆ
ಹಾಡುವ ಆಸೆ
ಹಾಡದು ಏಕೋ
ಹಾರುವ ಆಸೆ
ಹಾರದು ಏಕೋ
ಎಲೆಗಳಲಿ ಮರೆಯಾಗಿ
ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ ಓಹೋಹೋ
ಹೆಣ್ಣು: ಹಾಡುವ ಆಸೆ
ಹಾಡದು ಏಕೋ
ಹಾರುವ ಆಸೆ
ಹಾರದು ಏಕೋ
ಎಲೆಗಳಲಿ ಮರೆಯಾಗಿ
ಎಲ್ಲೋ ಅಡಗಿದೆ
ಹೆಣ್ಣು: ಬಯಕೆಯ ಹೂಗಳು
ಬಾಡುತ ಹೋದರು
ವರವನು ದೇವರು
ನೀಡದೆ ಹೋದರು
ನಗುತಾ ಬದುಕುವ
ಜಾಣನು…
ಗಂಡು: ಬಾನಲಿ ಹಾರುತಾ
ಕನಸನು ಕಾಣುತಾ
ಹೂವಿನ ಹಾಸಿಗೆ
ಬಾಳಿದು ಎನ್ನುತಾ
ನಲಿದು ಕೋಗಿಲೆ
ಹಾಡಿದೇ…
ಹೆಣ್ಣು: ಸೊರಗಿ
ದಿನ ಕೊರಗಿ
ಉರಿ ಬಿಸಿಲಲಿ ಬೇಯಲೇ ಬೆಂಕಿ..
ಹಾಡುವ ಆಸೆ
ಹಾಡದು ಏಕೋ
ಗಂಡು: ಹಾರುವ ಆಸೆ
ಹಾರದು ಏಕೋ
ಹೆಣ್ಣು: ಎಲೆಗಳಲಿ ಮರೆಯಾಗಿ
ಎಲ್ಲೋ ಅಡಗಿದೆ
ಗಂಡು: ಕೋಗಿಲೆ…
ಮೂಕಾಗಿದೆ.. ಏ…
Mind Sharing?