Mind Sharing?

ಚಿತ್ರ: ನೀ ಬರೆದ ಕಾದಂಬರಿ (1985)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯ್ ಆನಂದ್

*********************************************************************************************************************************

ಹೆಣ್ಣು: ಆ…ಆ…ಅ..ಅ…
ಆ…ಆ…ಅ..ಅ…
ಆ…ಆ…ಅ..ಅ…
ಆ…ಆ…ಅ..ಅ….
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗಾತಿಯೇ
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ…..ಏಏಏ
ಗಂಡು: ಚಿನ್ನದ ಉಯ್ಯಾಲೆ ನಾ ತರೆನು
ಈ ಬಗೆ ಆನಂದ ನಾ ಕೊಡೆನು
ಇರುವ ಸುಖವ ಮರೆಯುವೆಯಾ
ನನ್ನ ಬಾಳಲಿ ಅ.ಅ..ಅ..ಅ..ಆ.ಆ..ಅ…ಆ..
ಒಲವೇ ಸಿರಿಯು
ನಗುವೇ ನಿಧಿಯು
ಬೇರೆಯೇನಿಲ್ಲ ಸರಿಯೇನು
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗಾತಿಯೇ
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ…ಏಏಏ
ಹೆಣ್ಣು: ಬೀಸುತ ಬಿರುಗಾಳಿ ಬಂದಿರಲಿ
ಲೋಕವೆ ಎದುರಾಗಿ ನಿಂತಿರಲಿ
ಭಯವಾ ಪಡದೆ ಎದುರಿಸುವೆ
ನಿನ್ನ ಪ್ರೇಮದ ಅ.ಅ..ಅ..ಅ..ಆ.ಆ..ಅ…ಆ..
ನುಡಿಯೇ ನಿಧಿಯು
ನೆರಳೇ ಮನೆಯು
ನೀನೇ ನನಗೆಲ್ಲ ಇನ್ನೇನು
ಗಂಡು: ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ
ಹೆಣ್ಣು: ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗಾತಿಯೇ
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ.ಏಏಏಏಏ

Mind Sharing?