Mind Sharing?

ಚಿತ್ರ: ಚಿಕ್ಕೆಜಮಾನ್ರು(1992)
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ

**********************************************************************************************************************************

ಪ್ರೇಮದ ಹೂಗಾರ
ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ
ಬೆಲ್ಲದ ಬಣಗಾರ ಈ ಹಾಡುಗಾರ
ಸಿಹಿ ನೀಡುತಾನೆ ಕಹಿ ಕೇಳುತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿಹಾರ ಹೊಂದಿರುವ ಆ ಆ ಆ ಆ
ಈ ಭಾವ ಜೀವ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ
ಗಂಧದ ಕೊರಡಾಗಿ ಸ್ವಂತಕೆ ಬರಡಾಗಿ
ನೋವಿನಲ್ಲೂ ತೇಯುವುದು ಈ ಒಡಲು ಊ ಊ ಊ ಊ
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು ಊ ಊ ಊ ಊ
ಕರುಣೆಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತಾನೆ ಕೊಡ ನೀಡುತಾನೆ
ಮಮತೆಯ ಕಲೆಗಾರ ಈ ಹಾಡುಗಾರ
ಮನೆ ಮಾಡುತಾನೆ ಹೊರ ಹೋಗುತಾನೆ
ಗೋವಿನ ಹಾಲಂತ ಮನಸಿರುವ
ಕೂಸಿನ ಜೇನಂಥ ಮಾತಿರುವ
ಈ ಭಾವ ಜೀವ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ
ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದ್ರೆಯಿಲ್ಲ ಆ ಆ ಆ ಆ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ ಆ ಆ ಆ ಆ
ಊರಿನ ಗೆಣೆಕಾರ
ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತಾನೆ ಕಡೆಯಾಗುತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೋರಾಡುತಾನೆ ಒಂಟಿಯಾಗುತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿಹಾರ ಹೊಂದಿರುವ
ಈ ಭಾವ ಜೀವ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ
Mind Sharing?