Mind Sharing?

        ವಚನಕಾರರು ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಹೆಸರುಗಳೆಂದರೆ ಸರ್ವಜ್ಞ, ಬಸವಣ್ಣ, ಜೇಡರ ದಾಸಿಮಯ್ಯ, ಅಕ್ಕ ಮಹಾದೇವಿ, ಅಲ್ಲಮಪ್ರಭು ಮುಂತಾದವು. ಆದರೆ ನಿಮಗೆ ಗೊತ್ತೆ ಕನ್ನಡದಲ್ಲಿ 150 ಕ್ಕೂ ಹೆಚ್ಚಿನ ವಚನಕಾರರಿದ್ದು ಅವರೆಲ್ಲ ವಿವಿಧ ಅಂಕಿತಗಳನ್ನು ತಮ್ಮ ವಚನಗಳಲ್ಲಿ ಬಳಸಿದ್ದಾರೆ. ವಚನಜ್ಯೋತಿ ಬಳಗದವರು ವಚನ ರಸಪ್ರಶ್ನೆ ಎಂಬ ಪುಸ್ತಕದಲ್ಲಿ ವಿವಿಧ ವಚನಕಾರರ ಬಗ್ಗೆ ವಿವಿರವಾದ ಮಾಹಿತಿಯನ್ನು ನೀಡಿದ್ದು ಆಯ್ದ ಕೆಲವು ವಚನಕಾರರ ಹೆಸರು ಮತ್ತು ಅವರ ಅಂಕಿತನಾಮವನ್ನು ತಮ್ಮ ಮುಂದೆ ಇಟ್ಟಿದ್ದೇನೆ.

೧) ಬಸವಣ್ಣ———————————————– ಕೂಡಲ ಸಂಗಮದೇವ
೨) ಅಲ್ಲಮ ಪ್ರಭು—————————————- ಗುಹೇಶ್ವರ
೩) ಚನ್ನಬಸವಣ್ಣ————————————— ಚನ್ನಕೂಡಲ ಸಂಗಮದೇವ
೪) ಸಿದ್ದರಾಮ———————————————-ಕಪಿಲಸಿದ್ದಮಲ್ಲಿಕಾರ್ಜುನ
೫) ಅಜಗಣ್ಣ————————————————ಮಹಾಘನ ಸೋಮೇಶ್ವರ
೬) ಅಂಬಿಗರ ಚೌಡಯ್ಯ——————————-ಅಂಬಿಗರ ಚೌಡಯ್ಯ
೭) ಅಮುಗಿ ದೇವಯ್ಯ———————————–ಸಿದ್ದಸೋಮೇಶ್ವರ
೮) ಆದಯ್ಯ———————————————— ಸೌರಾಷ್ಟ್ರ ಸೋಮೇಶ್ವರ
೯) ಅರಿವಿನ ಮಾರಿತಂದೆ—————————— ಸದಾಶಿವಮೂರ್ತಿ
೧೦) ಅಂಗಸೋಂಕಿನ ಲಿಂಗತಂದೆ—————- ಭೋಗಬಂಕೇಶ್ವರಲಿಂಗ
೧೧) ಅಗ್ಘಾವಣಿ ಹಂಪಯ್ಯ————————– ಹಂಪೆಯ ವಿರುಪಾ
೧೨) ಅಗ್ಘಾವಣಿ ಹೊನ್ನಯ್ಯ————————- ಹುಲಿಗೆರೆಯ ವರದಸೋಮನಾಥ
೧೩) ಅನಾಮಿಕ ನಾಚಯ್ಯ————————— ನಾಚಯ್ಯಪ್ರಿಯ ಚನ್ನರಾಮೇಶ್ವರ
೧೪) ಅಪ್ಪಿದೆವಯ್ಯಾ———————————— ವರದ ಮಹಾಲಿಂಗ
೧೫) ಅಮರಗುಂಡದ ಮಲ್ಲಿಕಾರ್ಜುನ———– ಮಾಗುಡದ ಮಲ್ಲಿಕಾರ್ಜುನ
೧೬) ಅವಸರದ ರೇಕಣ್ಣ——————————- ಸದ್ಯೋಜಾತ ಲಿಂಗ
೧೭) ಆನಂದಯ್ಯ—————————————- ಆನಂದಸಿಂಧು ರಾಮೇಶ್ವರ
೧೮) ಆಯ್ದಕ್ಕಿ ಮಾರಯ್ಯ—————————- ಅಮರೇಶ್ವರಲಿಂಗ
೧೯) ಉರಿಲಿಂಗದೇವ————————————-ಉರಿಲಿಂಗದೇವ
೨೦) ಉರಿಲಿಂಗಪೆದ್ದಿ————————————-ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರ
೨೧) ಉಗ್ಘಡಿಸುವ ಗಟ್ಟಿದೇವಯ್ಯ—————— ಕೂಡಲಸಂಗಮದೇವರಲ್ಲಿ ಬಸವಣ್ಣ
೨೨) ಉಪ್ಪರಗುಡಿಯ ಸೋಮಿದೇವಯ್ಯ——– ಗಾರುಡೇಶ್ವರ ಲಿಂಗ
೨೩) ಉಳಿಮೆಶ್ವರ ಚಿಕ್ಕಯ್ಯ—————————- ಉಳಿಯುಮೇಶ್ವರ
೨೪) ಎಚ್ಚರಿಕೆ ಕಾಯಕದ ಮುತ್ತನಾಥಯ್ಯ—– ಶುದ್ಧಪ್ರಸಿದ್ಧ ಕುರುಂಗೇಶ್ವರಲಿಂಗ
೨೫) ಎಲೆಗಾರ ಕಾಮಣ್ಣ——————————– ಅತುರೇಶ್ವರಲಿಂಗ
೨೬) ಏಲೇಶ್ವರದ ಕೇತಯ್ಯ—————————– ಏಲೇಶ್ವರಲಿಂಗ
೨೭) ಏಕಾಂತದ ರಾಮಯ್ಯ————————— ಚೆನ್ನರಾಮೇಶ್ವರ
೨೮) ಒಕ್ಕಲಿಗ ಮುದ್ದಣ್ಣ——————————- ಕಾಮಭೀಮ ಜೀವಧನದೊಡಯ್ಯ
೨೯) ಕಂಬದ ಮಾರಯ್ಯ——————————– ಕಂಬದಲಿಂಗ
೩೦) ಕನ್ನಡಿ ಕಾಯಕದ ಅಮ್ಮಿದೇವಯ್ಯ——— ಚನ್ನಬಸವಣ್ಣಪ್ರಿಯ ಕಮಲೇಶ್ವರಲಿಂಗ
೩೧) ಕನ್ನದ ಮಾರಿತಂದೆ———————————ಮಾರನವೈರಿ ಮಾರೇಶ್ವರ
೩೨) ಕರುಳಕೇತಯ್ಯ————————————– ಮನಕ್ಕೆ ಮಹೋಹರ ಶಂಕೇಶ್ವರಲಿಂಗ

೩೩) ಕಲಕೇತಯ್ಯ—————————————— ಮೇಖಲೆಶ್ವರಲಿಂಗ
೩೪) ಕಾಮಾಟದ ಭೀಮಣ್ಣ—————————- ಧಾರೇಶ್ವರಲಿಂಗ
೩೫) ಕಿನ್ನರಿ ಬ್ರಹ್ಮಯ್ಯ———————————– ತ್ರಿಪುರಾಂತಕ ಲಿಂಗ
೩೬) ಕೀಲಾರದ ಭೀಮಣ್ಣ—————————— ಕಾಲಕರ್ಮಿವಿರಹಿತ ತ್ರಿಪುರಾಂತಕಲಿಂಗ
೩೭) ಕೂಗಿನ ಮಾರಯ್ಯ——————————— ಮಹಾಮಹಿಮ ಮಾರೇಶ್ವರ
೩೮) ಕೋಟಾರದ ಸೋಮಣ್ಣ———————— ಬಸವಣ್ಣಪ್ರಿಯ ನಿಕಳಂಕ ಸೋಮೇಶ್ವರ
೩೯) ಕೋಲಶಾಂತಯ್ಯ———————————- ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
೪೦) ಗಜೇಶ ಮಸಣಯ್ಯ——————————– ಗಜೇಶ್ವರದೇವ
೪೧) ಗಾಣದ ಕಣ್ಣಪ್ಪ———————————— ಗುಹೇಶ್ವರನ ಶರಣ ಅಲ್ಲಮ
೪೨) ಗಾವುದಿ ಮಾಚಯ್ಯ——————————- ಕಲ್ಯಾಣ ತ್ರಿಪುರಾಂತಕಲಿಂಗದಲ್ಲಿ ಗಾವುದಿ ಮಾಚಯ್ಯ
೪೩) ಗುಪ್ತ ಮಂಚಣ್ಣ———————————– ನಾರಾಯಣಪ್ರಿಯ ರಾಮನಾಥ
೪೪) ಗುರುಪುರದ ಮಲ್ಲಯ್ಯ————————– ಪುರದ ಮಲ್ಲಯ್ಯ
೪೫) ಗೋರಕ್ಷ ————————————————ಸಿದ್ಧಸೋಮನಾಥಲಿಂಗ
೪೬) ಗುರುಬಸವೇಶ್ವರ- ———————————–ಗುರುಬಸವ
೪೭) ಗುರುಭಕ್ತಯ್ಯ—————————————- ಘಂಟೇಲಿಂಗೇಶ್ವರ
೪೮) ಘಟ್ಟಿವಾಳಯ್ಯ————————————- ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
೪೯) ಚಂದಿಮರಸ—————————————– ಸಿಮ್ಮಲಿಗೆಯ ಚೆನ್ನರಾಮ

೫೦) ಜಗಳಗಂಟ ಕಾಮಣ್ಣ—————————- ಕಾಮೇಶ್ವರ
೫೧) ಜೇಡರ ದಾಸಿಮಯ್ಯ—————————– ರಾಮನಾಥ
೫೨) ಜೇಡರ ಮಾಯಣ್ಣ——————————- ಶಂಭು ಸೋಮನಾಥಲಿಂಗ
೫೩) ಡಕ್ಕೆಯ ಬೊಮ್ಮಣ್ಣ—————————– ಕಾಲಾಂತಕ ಭೀಮೇಶ್ವರಲಿಂಗ
೫೪) ಡೋಹರ ಕಕ್ಕಯ್ಯ——————————– ಅಭಿನವ ಮಲ್ಲಿಕಾರ್ಜುನ
೫೫) ತುರುಗಾಹಿ ರಾಮಣ್ಣ—————————–ಗೋಪೀನಾಥ ವಿಶ್ವೇಶ್ವರಲಿಂಗ
೫೬) ತಳವಾರ ಕಾಮಿದೇವಯ್ಯ- ——————–ಕಾಮಹರಪ್ರಿಯ ರಾಮನಾಥ
೫೭) ತೆಲುಗರ ಮಸಣಯ್ಯ—————————– ತೆಲುಗೇಶ್ವರ
೫೮) ದಶಗಣ ಸಿಂಗಿದೇವಯ್ಯ- ———————–ನಾಚಯ್ಯಪ್ರಿಯ ಮಲ್ಲಿನಾಥ
೫೯) ದಸರಯ್ಯ——————————————— ದಸರೇಶ್ವರಲಿಂಗ
೬೦) ದಾಸೋಹದ ಸಂಗಣ್ಣ- ————————–ಮಾತುಳಂಗ ಮಧುಕೇಶ್ವರ
೬೧) ನಗೆಯ ಮಾರಿತಂದೆ——————————- ಆತುರವೈರಿ ಮಾರೇಶ್ವರ
೬೨) ನುಲಿಯ ಚಂದಯ್ಯ—————————— ಚಂದೇಶ್ವರಲಿಂಗ
೬೩) ನಿಜಗುಣ ಯೋಗಿ———————————- ನಿಜಗುಣ
೬೪) ನಿವೃತ್ತಿ ಸಂಗಯ್ಯ———————————-ನಿವೃತ್ತಿ ಸಂಗಯ್ಯ
೬೫) ಪಂಡಿತಾರಾಧ್ಯ————————————- ಗುರುಸಿದ್ದಮಲ್ಲ
೬೬) ಪುರದ ನಾಗಣ್ಣ- ————————————ಅಮರಗುಂಡದ ಮಲ್ಲಿಕಾರ್ಜುನ
೬೭) ಪ್ರಸಾದಿ ಭೋಗಣ್ಣ——————————– ಚನ್ನಬಸವಣ್ಣಪ್ರಿಯ ಭೋಗ ಮಲ್ಲಿಕಾರ್ಜುನಲಿಂಗ
೬೮) ಪ್ರಸಾದಿ ಲೆಂಕಬಂಕಣ್ಣ————————- ದಹನ ಚಂಡಿಕೇಶ್ವರಲಿಂಗ
೬೯) ಬಹುರೂಪಿ ಚೌಡಯ್ಯ————————— ರೇಕಣ್ಣಪ್ರಿಯ ನಾಗಿನಾಥ
೭೦) ಬಳ್ಳೇಶ ಮಲ್ಲಯ್ಯ———————————– ಬಳ್ಳೇಶ್ವರ
೭೧) ಬಾಚಿಕಾಯಕದ ಬಸವಣ್ಣ- ———————ಬಸವಣ್ಣಪ್ರಿಯ ವಿಶ್ವಕರ್ಮಠಕ್ಕೆ
ಕಾಳಿಕಾವಿವಿಮಲ ರಾಜೇಶ್ವರಲಿಂಗ
೭೨) ಬಾಲ ಬೊಮ್ಮಣ್ಣ- ———————————ವೀರ ಶೂರ ರಾಮೇಶ್ವರಲಿಂಗ
೭೩) ಬಾಲಸಂಗಣ್ಣ—————————————- ಕಮಟೇಶ್ವರಲಿಂಗ
೭೪) ಬಾಹೂರ ಬೊಮ್ಮಣ್ಣ—————————– ಬ್ರಹ್ಮೇಶ್ವರಲಿಂಗ
೭೫) ಬಿಬ್ಬಿ ಬಾಚಯ್ಯ————————————- ಏಣಾಂಕಧರ ಸೋಮೇಶ್ವರ
೭೬) ಬೊಕ್ಕಸದ ಚಿಕ್ಕಣ್ಣ——————————— ಬಸವಣ್ಣಪ್ರಿಯ ನಾಗರೇಶ್ವರಲಿಂಗ
೭೭) ಬರಿತಾರ್ಪಣದ ಚೆನ್ನಬಸವಣ್ಣ—————- ಚೆನ್ನಕೂಡಲರಾಮೇಶ್ವರಲಿಂಗ
೭೮) ಭಿಕಾರಿ ಭೀಮಯ್ಯ———————————- ಭಿಕಾರಿ ಭೀಮೇಶ್ವರ
೭೯) ಭೋಗಣ್ಣ———————————————– ನಿಜಗುರು ಭೋಗೇಶ್ವರ
೮೦) ಮಡಿವಾಳ ಮಾಚಿದೇವ————————– ಕಲಿದೇವರ ದೇವ
೮೧) ಮಡಿವಾಳ ಮಾಚಿದೇವರ———————– ಪರಮ ಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನ
ಸಮಯಾಚಾರದ ಮಲ್ಲಿಕಾರ್ಜುನ
೮೨) ಮಧುವರಸ——————————————- ಅರ್ಕೇಶ್ವರಲಿಂಗ
೮೩) ಮಾನಸಂದ ಮಾರಿತಂದೆ———————— ಮನಸಂದಿತ್ತಾ ಮಾರೇಶ್ವರ
೮೪) ಮನುಮುನಿ ಗುಮ್ಮಟದೇವ——————— ಅಗಂಯೇಶ್ವರಲಿಂಗ
೮೫) ಮರುಳಶಂಕರದೇವ——————————- ಶುದ್ಧಸಿದ್ಧಪ್ರಸಿದ್ಧ ಶಾಂತ ಚೆನ್ನಮಲ್ಲಿಕಾರ್ಜುನ
೮೬) ಮರುಳಸಿದ್ದೇಶ್ವರ———————————– ರೇವಣ್ಣಪ್ರಭುವೆ
೮೭) ಮಲಹರ ಕಾಯಕದ ಚಿಕ್ಕದೇವಯ್ಯ——– ಊರ್ಧ್ವರೇತೋಮೂರ್ತಿ ಶ್ವೇತಾಸ್ವಯಂಭೂ

೮೮) ಮಲ್ಲಿಕಾರ್ಜುನ ಪಂಡಿತಾರಾಧ್ಯ————– ಶ್ರೀ ಮಲ್ಲಿಕಾರ್ಜುನ
೮೯) ಮುಳುಬಾವಿಯ ಸೋಮಣ್ಣ——————- ಮುಳುಭಾವಿಯ ಸೋಮ
೯೦) ಮಾದಾರ ಚನ್ನಯ್ಯ——————————— ಅರಿನಿಜಾತ್ಮ ರಾಮರಾಯ
೯೧) ಮಾದಾರ ಧೂಳಯ್ಯ——————————– ಕಾಮಧೂಮ ಧೂಳೇಶ್ವರ
೯೨) ಮಾರುಡಿಗೆಯ ನಾಚಯ್ಯ————————- ಮಾರುಡಿಗೆಯ ನಾಚೇಶ್ವರಲಿಂಗ
೯೩) ಮಾರೇಶ್ವರ ಒಡೆಯ———————————–ಮಾರೇಶ್ವರ
೯೪) ಮಿರೆಮಿಂಡಯ್ಯ————————————– ಐಘಟದೂರ ರಾಮಲಿಂಗೇಶ್ವರ
೯೫) ಮೇದರ ಕೇತಯ್ಯ————————————–ಗವರೇಶ್ವರ
೯೬) ಮೋಳಿಗೆ ಮಾರಯ್ಯ——————————— ನಿಕಳಂಕ ಮಲ್ಲಿಕಾರ್ಜುನ
೯೭) ಮೈದುನ ರಾಮಯ್ಯ——————————— ಮಹಾಲಿಂಗ ಚೆನ್ನರಾಮೇಶ್ವರ
೯೮) ರಕ್ಕಸ ಬೊಮ್ಮಿತಂದೆ——————————– ರಕ್ಕಸನೊಡೆಯ ಕೊಟ್ಟೂರಬೇಡ
೯೯) ರಾಯಸದ ಮಂಚಣ್ಣ——————————- ಜಾಂಬೇಶ್ವರ
೧೦೦) ರೇಚದ ಬೋಂತಣ್ಣ——————————- ಬಸವಪ್ರಿಯ ಮಹಾಪ್ರಭು
೧೦೧) ಲದ್ದೆಯ ಸೋಮಣ್ಣ—————————— ಬಾಪುಲದ್ದೆಯ ಸೋಮ
೧೦೨) ವಚನ ಭಂಡಾರಿ ಶಾಂತರಸ——————– ಅಲೇಖನಾಥ ಶೂನ್ಯ
೧೦೩) ವರದ ಸಂಗಣ್ಣ————————————– ವರದ ಶಂಕೇಶ್ವರ
೧೦೪) ವೀರಗೊಲ್ಲಾಳ————————————— ವೀರಬೀರೇಶ್ವರ
೧೦೫) ವೀರಶಂಕರದಾಸಯ್ಯ—————————- ಘನಗುರು ಶಿವಲಿಂಗ ರಾಮನಾಥ
೧೦೬) ವೇದಮೂರ್ತಿ ಸಂಗಣ್ಣ- ————————–ಲಾಲಾಮಭೀರು ಸಂಗಮೇಶ್ವರಲಿಂಗ
೧೦೭) ವೈದ್ಯ ಸಂಗಣ್ಣ————————————— ಮರುಳಶಂಕರಪ್ರಿಯ ಸಿದ್ದರಾಮೇಶ್ವರಲಿಂಗ
೧೦೮) ಶಂಕರದಾಸಿಮಯ್ಯ——————————– ನಿಜಗುರು ಶಂಕರದೇವ
೧೦೯) ಶಿವನಾಗಮಯ್ಯ————————————- ನಾಗಪ್ರಿಯ ಚನ್ನರಾಮೇಶ್ವರ
೧೧೦) ಶಿವಲೆಂಕ ಮಂಚಣ್ಣ——————————- ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ
೧೧೧) ಸಂಗಮೇಶ್ವರ ಅಪ್ಪಣ್ಣ——————————ಬಸವಪ್ರಿಯ ಕೂಡಲಚೆನ್ನಸಂಗಮದೇವ
೧೧೨) ಸಕಲೇಶ ಮಾದರಸ———————————- ಸಕಳೇಶ್ವರದೇವ
೧೧೩) ಸಗರದ ಬೊಮ್ಮಣ್ಣ———————————-ತನುಮನ ಸಂಗಮೇಶ್ವರಲಿಂಗ
೧೧೪) ಸತ್ತಿಗೆ ಕಾಯಕದ ಮಾರಯ್ಯ——————— ಐಘಂಟೇಶ್ವರ ಲಿಂಗ
೧೧೫) ಸಿದ್ಧಾಂತಿ ವೀರಸಂಗಯ್ಯ————————– ಗೋಳಾಕಾರದ ವಿಶ್ವವಿರಹಿತ ಲಿಂಗ
೧೧೬) ಸುಂಕದ ಬಂಕಣ್ಣ———————————— ಸುಂಕದೂಡು ಬಂಕೇಶ್ವರಲಿಂಗ
೧೧೭) ಸೂಜಿಕಾಯಕದ ರಾಮಿತಂದೆ——————- ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನ
೧೧೮) ಸೊಡ್ಡಳ ಬಾಚೇಶ್ವರ——————————– ಸೊಡ್ಡಳ
೧೧೯) ಹಡಪದ ಅಪ್ಪಣ್ಣ———————————— ಬಸವಪ್ರಿಯ ಕೂಡಲಚೆನ್ನಬಸವಣ್ಣಾ
೧೨೦) ಹಾವಿನಹಾಳ ಕಲ್ಲಯ್ಯ——————————-ಮಹಾಲಿಂಗ ಕಲ್ಲೇಶ್ವರ
೧೨೧) ಹುಂಜದ ಕಾಳಗದ ದಾಸಯ್ಯ——————— ಚಂದ್ರಚೂಡೇಶ್ವರಲಿಂಗ
೧೨೨) ಹೆಂಡದ ಮಾರಯ್ಯ———————————– ಧರ್ಮೇಶ್ವರಲಿಂಗ
೧೨೩) ಹೊಡೆಹುಲ್ಲ ಬಂಕಣ್ಣ——————————- ಕುಂಭೇಶ್ವರಲಿಂಗ
೧೨೪) ಅಕ್ಕನಾಗಮ್ಮ——————————————— ಬಸವಣ್ಣಪ್ರಿಯ ಚೆನ್ನಸಂಗಯ್ಯ
೧೨೫) ಅಕ್ಕಮಹಾದೇವಿ—————————————– ಚನ್ನಮಲ್ಲಿಕಾರ್ಜುನ
೧೨೬) ಅಕ್ಕಮ್ಮ—————————————————– ರಾಮೇಶ್ವರಲಿಂಗ
೧೨೭) ಆಯ್ದಕ್ಕಿ ಲಕ್ಕಮ್ಮ————————————— ಮಾರಯ್ಯಪ್ರಿಯ ಅಮರಲಿಂಗೇಶ್ವರ
೧೨೮) ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ——— ಉರಿಲಿಂಗಪೆದ್ದಿಗಳರಸ
೧೨೯) ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ———— ನಿಜಗುಣೇಶ್ವರಲಿಂಗ
೧೩೦) ಕದಿರೆ ಕಾಯಕದ ಕಾಳವ್ವೆ—————————- ಗುಮ್ಮೆಶ್ವರ
೧೩೧) ಕದಿರ ರೆಮ್ಮವ್ವೆ——————————————– ಕದಿರರೆಮ್ಮಿಯೊಡೆಯ
೧೩೨) ಕನ್ನಡಿ ಕಾಯಕದ ರೇಮಮ್ಮ————————ಸದ್ಗುರುಸಂಗ ನಿರಂಗಲಿಂಗ
೧೩೩) ಕಾಲಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ——— ನಿಜಶಾಂತೇಶ್ವರ
೧೩೪) ಕಾಲಕಣ್ಣಿಯ ಕಾಮಮ್ಮ—————————— ನಿರ್ಭೀತ ನಿಜಲಿಂಗ
೧೩೫) ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ—– ಅಜಗಜೇಶ್ವರಲಿಂಗ
೧೩೬) ಕೊಟ್ಟಣದ ಸೋಮಮ್ಮ—————————— ನಿರ್ಲಜ್ಜೇಶ್ವರ
೧೩೭) ಗಂಗಾಂಬಿಕೆ- ———————————————–ಗಂಗಾಪ್ರಿಯ ಕೂಡಲಸಂಗಮದೇವ
೧೩೮) ನೀಲಾಂಬಿಕೆ———————————————– ಸಂಗಯ್ಯ
೧೩೯) ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ———- ಕುಂಭೇಶ್ವರಲಿಂಗ
೧೪೦) ಗೊಗ್ಗವ್ವೆ—————————————————– ನಾಸ್ತಿನಾಥ
೧೪೧) ದಾಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ————– ಗುರುಶಾಂತೇಶ್ವರ
೧೪೨) ದುಗ್ಗಳೆ——————————————————– ದಾಸನಪ್ರಿಯ ರಾಮನಾಥ
೧೪೩) ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ—————– ನಿಂಬೇಶ್ವರ
೧೪೪) ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ—– ಕಾಳೇಶ್ವರ
೧೪೫) ಬೊಂತಾದೇವಿ- ——————————————–ಬಿಡಾಡಿ
೧೪೬) ಮುಕ್ತಾಯಕ್ಕ- ———————————————–ಅಜಗಣ್ಣ ತಂದೆ

೧೪೭)_ಮೋಳಿಗೆ ಮಹಾದೇವಿ———————————- ಇಮ್ಮಡಿ ನಿಹಕಳಂಕಮಲ್ಲಿಕಾರ್ಜುನ
೧೪೮) ಅಮುಗೆ ರಾಯಮ್ಮ————————————–ಅಮುಗೇಶ್ವರಲಿಂಗ
೧೪೯) ರೇವಣ್ಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮ——–ಶ್ರೀಗುರುಸಿದ್ದೇಶ್ವರ
೧೫೦) ಸತ್ಯಕ್ಕ———————————————————- ಶಂಭುಜಕ್ಕೇಶ್ವರ
೧೫೧) ಸಿದ್ದಬದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ————–ಭೀಮೇಶ್ವರ
೧೫೨) ಸೂಳೆ ಸಂಕವ್ವೆ———————————————-ನಿರ್ಲಜ್ಜೇಶ್ವರ
೧೫೩) ಹಡಪದ ಅಪ್ಪಣ್ಯಗಳ ಪುಣ್ಯಸ್ತ್ರೀ ಲಿಂಗಮ್ಮ—–ಅಪ್ಪಣ್ಣಪ್ರಿಯ ಚೆನ್ನಬಸವಣ್ಣ
೧೫೪) ಷಣ್ಮುಖ ಶಿವಯೋಗಿ————————————–ಅಖಂಡೇಶ್ವರಾ
೧೫೫) ಕರಸ್ಥಲದ ಮಲ್ಲಿಕಾರ್ಜುನ—————————– ಪರಮಗುರು ಶಾಂತಮಲ್ಲಿಕಾರ್ಜುನ
೧೫೬) ಕಾಡಸಿದ್ದೇಶ್ವರ———————————————– ಕಾಡನೊಳಗಾದ ಶಂಕರಪ್ರಿಯ
ಚೆನ್ನಕದಂಬಲಿಂಗ ನಿರ್ಮಾಯ ಪ್ರಭು
೧೫೭) ಗಣದಾಸಿ ವೀರಣ್ಣ—————————————– ಶಾಂತ ಕೂಡಲಸಂಗಮದೇವ
೧೫೮) ಗುರುಸಿದ್ಧದೇವ- ———————————————ಸಂಗನ ಬಸವಣ್ಣ
೧೫೯) ಗುಹೇಶ್ವರಯ್ಯ- ———————————————–ಗೊಹೇಶ್ವರಪ್ರಿಯ ನಿರಾಳಲಿಂಗ
೧೬೦) ಗೋಣಿ ಮಾರಯ್ಯ- —————————————–ಕೇತೇಶ್ವರಲಿಂಗ
೧೬೧) ಚನ್ನಯ್ಯ- ——————————————————ಚನ್ನಯ್ಯಪ್ರಿಯ ನಿರ್ಮಾಯ ಪ್ರಭುವೇ
೧೬೨) ಜಕ್ಕಣ್ಣಯ್ಯ————————————————— ಝೇಂಕಾರ ನಿಜಲಿಂಗ ಪ್ರಭುವೇ
೧೬೩) ತೋಂಟದ ಸಿದ್ಧಲಿಂಗೇಶ್ವರರು————————- ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ
೧೬೪) ಘನಲಿಂಗದೇವರು- ——————————————ಘನಲಿಂಗಿಯ ಮೋಹದ ಮಲ್ಲಿಕಾರ್ಜುನ
೧೬೫) ಕುಷ್ಟಗಿ ಕರಿಬಸವೇಶ್ವರ- ———————————–ಅಖಂಡ ಪರಿಪೂರ್ಣ ಘನಲಿಂಗ ಗುರು ಚೆನ್ನಬಸವಣ್ಣ
೧೬೬) ಸ್ವತಂತ್ರ ಸಿದ್ಧಲಿಂಗೇಶ್ವರರು- —————————–ನಿಜಗುರು ಸ್ವತಂತ್ರ ಸಿದ್ದಲಿಂಗೇಶ್ವರ
೧೬೭) ಇಮ್ಮಡಿ ಗುರುಸಿದ್ದಸ್ವಾಮಿ- ——————————-ಪರಮ ಶಿವಲಿಂಗೇಶ್ವರ
೧೬೮) ದೇಶಿಕೇಂದ್ರ ಸಂಗನ ಬಸವಯ್ಯ————————-ನಿರಂಜನ ಚನ್ನಬಸವಲಿಂಗ
೧೬೯) ನಿರಾಲಂಬ ಪ್ರಭುದೇವರು———————————ನಿಸ್ಸಂಗ ನಿರಾಳಹ ನಿಜಲಿಂಗ ಪ್ರಭು
೧೭೦) ಪರಂಜ್ಯೋತಿ—————————————————-ವರಣಗಣ ಗುರುವೀರೇಶ ಪರಂಜ್ಯೋತಿ
೧೭೧) ಬಸವಲಿಂಗದೇವರು——————————————ಶ್ರೀಗುರು ಸಿದ್ದೇಶ್ವರ
೧೭೨) ಮೂರುಸಾವಿರ ಮುಕ್ತಿಮುನಿ——————————ಸಿದ್ಧಮಲ್ಲಿಕಾರ್ಜುನ ಲಿಂಗೇಶ್ವರ
೧೭೩) ವೀರಣ್ಣದೇವರು————————————————ಮಹಾಘನ ಶಾಂತಮಲ್ಲಿಕಾರ್ಜುನ
೧೭೪) ಸಂಗನ ಬಸವೇಶ್ವರ——————————————–ಬಸವಲಿಂಗೇಶ್ವರ
೧೭೫) ಸಿದ್ದಮಲ್ಲಪ್ಪ—————————————————-ಮೇಲಣಗವಿಯ ಶ್ರೀ ಸಿದ್ದೇಶ್ವರ ಪ್ರಭುವೇ
೧೭೬) ಹೇಮಗಲ್ಲ ಹಂಪ———————————————-ಪರಮಗುರು ಪಡುವಿಡಿಸಿದ್ದಮಲ್ಲಿನಾಥ ಪ್ರಭುವೇ
೧೭೭) ಸಿದ್ಧವೀರದೇಶಿಕೇಂದ್ರ—————————————- ಶ್ರೀಗುರು ತೋಂಟದ ಸಿದ್ದಲಿಂಗೇಶ್ವರ

Mind Sharing?