ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಸರಣಿಯನ್ನು ಸಮಬಲಗೊಳಿಸಲು ಟೀಮ್ ಇಂಡಿಯಾ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕಿಡಿಕಾರಿದ್ದಾರೆ. ಹೊಸ ಚೆಂಡಿನಲ್ಲಿ ಜಸ್ಪ್ರೀತ್ ಬೂಮ್ರಾಗೆ ಕೇವಲ ಎರಡು ಓವರ್ ಮಾತ್ರೇ ನೀಡಿರುವ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಎರಡನೇ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 51 ರನ್‌ಗಳ ಅಂತರದಿಂದ ಸೋಲುಕಂಡಿದೆ. ಈ ಸೋಲಿನಿಂದಾಗಿ ಟೀಮ್ ಇಂಡಿಯಾ ಸರಣಿಯನ್ನು 0-2 ಅಂತರದಿಂದ ಆಸ್ಟ್ರೇಲಿಯಾ ತಂಡಕ್ಕೆ ಒಪ್ಪಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲೂ ಭಾರತೀಯ ಬೌಲಿಂಗ್ ಪಡೆ ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ 389 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.
ಎರಡನೇ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯದ್ದು “ಕಳಪೆ ನಾಯಕತ್ವ” ಎಂದು ಗಂಭೀರ್ ವಿವರಿಸಿದ್ದಾರೆ. “ಪ್ರಾಮಾಣಿಕವಾಗಿ ಹೇಲಬೇಕೆಂದರೆ ನನಗೆ ಈ ನಾಯಕತ್ವ ಅರ್ಥವಾಗುತ್ತಿಲ್ಲ. ಈ ರೀತಿಯ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ತಂಡವನ್ನು ತಡೆಯಬೇಕಾದರೆ ಮುಂಚೂಣಿಯಲ್ಲಿ ವಿಕೆಟ್ ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ಈಗಾಗಲೇ ಸಾಕಷ್ಟಮಾತನಾಡಿದ್ದೇವೆ. ಹಾಗಿದ್ದರೂ ನೀವು ಪೊ್ರಧಾನ ಬೌಲರ್‌ನನ್ನು ಕೇವಲ ಎರಡು ಓವರ್‌ಗಳಿಗೆ ಮೊಟಲುಗೊಳೀಸುತ್ತೀರಿ” ಎಂದಿದ್ದಾರೆ ಗಂಭೀರ್. “ಇದು ಟಿ20ಕ್ರಿಕೆಟ್ ಅಲ್ಲ. ಒಂದು ದಿನದ ಪಂದ್ಯ. ಕೇವಲ ಎರಡು ಓವರ್‌ಗಳಿಗೆ ನಿಮ್ಮ ಪ್ರಧಾನ ಬೌಲರ್‌ನನ್ನು ನಿಲ್ಲಿಸಿದರೆ ಆ ನಾಯಕತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅದರ ಹಿಂದಿನ ಕಾರಣಗಳು ನನಗೆ ಅರ್ಥವಾಗುತ್ತಿಲ್ಲ. ಇದು ಅತ್ಯಂತ ಕಳಪೆ ನಾಯಕತ್ವವಾಗಿದೆ” ಎಂದು ಗಂಭೀರ್ ವಿರಾಟ್ ಕೊ್ಹಲಿ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆರನೇ ಬೌಲರ್‌ನ ಕೊರತೆಯ ಬಗ್ಗೆಯೂ ಗಂಭೀರ್ ಮಾತನಾಡಿದರು. “ವಾಶಿಂಗ್ಟನ್ ಸುಂದರ್ ಅಥವಾ ಶಿವಂ ದುಬೆ ರೀತಿಯ ಬೌಲರ್‌ಗಳು ತಂಡದಲ್ಲಿದ್ದರೆ ಅವರಿಗೆ ಅವಕಾಶವನ್ನು ನೀಡಬಹುದಾಗಿತ್ತು. ಆದರೆ ಅವರು ತಂಡದಲ್ಲೇ ಸ್ಥಾನವನ್ನು ಪಡೆಯದಿರುವುದು ಆಯ್ಕೆಯಲ್ಲಿನ ತಪ್ಪುಗಳನ್ನು ಕೂಡ ತೋರಿಸುತ್ತಿದೆ” ಎಂದು ಗಂಭೀರ್ ಹೇಳಿದ್ದಾರೆ.