ಚಲನಚಿತ್ರ: ನಾನೇ ರಾಜ(1984)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಾಹಿತ್ಯ:ಚಿ. ಉದಯಶಂಕರ್
ಸಂಗೀತ: ಶಂಕರ್ ಗಣೇಶ್
*********************************************************************************************************************************
ಹೆಣ್ಣು: ಆಸೆಗಳು ಕೆಣಕುತಲಿದೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು
ಸುಖ ತರದೇ
ನನ್ನ ಜೀವಾ ನಿಲ್ಲದುಉಉಉ
ಆಸೆಗಳು ಕೆಣಕುತಲಿದೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು
ಸುಖ ತರದೇ
ನನ್ನ ಜೀವಾ ನಿಲ್ಲದುಉಉಉ
ಆ……ಆಆಆ
ಆ……ಆಆಆ
ಆ….ಆಆಆ……ಆಆಆಆಆಆಆಆ
ಗಂಡು: ನನ್ನ ಈ ಕಣ್ಣಿಂದಾ
ನೋಡುತ ನಿನ್ನಂದಾ
ಅರಿಯದೆ ಸೋತೆ
ಚಪಲದಿ ನೊಂದೆ
ಚೆಲುವೆ ನೀ ಬಲ್ಲೆಯಾ
ಹೆಣ್ಣು: ಪ್ರೇಮದ ಮಾತಿಂದಾ
ತುಂಬುತ ಆನಂದಾ
ಸನಿಹಕೆ ಬಂದು
ಹರುಷವ ತಂದು
ಹಿತವನು ನೀಡೆಯಾ
ಗಂಡು: ವಿರಹವಾ ನೀಗಲೆಂದು
ಸರಸದಿ ಸೇರು ಬಂದು
ಇಂದೇ ನಾವು ಒಂದು ಸೇರಿ
ಪ್ರೀತಿ ಎಂಬ ಜೇನ ಹೀರಿ
ಸುಖ ಹೊಂದೋಣ
ಗಂಡು: ಆಸೆಗಳು ಕೆಣಕುತಲಿದೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು
ಸುಖ ತರದೇ
ನನ್ನ ಜೀವ ನಿಲ್ಲದುಉಉಉಉ
ಲಾ……ಲಲಲ
ಲಾ…….ಲಲಲ
ಲಾ……ಲಲಲ……ಲ ಲ ಲ ಲ ಲ ಲ ಲಾ
ಹೆಣ್ಣು: ಮೆತ್ತಗೆ ತೋಳಿಂದಾ(ಗಂಡು: ಆ…ಹಾಹ ಆಹಾ)
ಒತ್ತಲು ಮೈಯನ್ನು (ಗಂಡು: ಆ ಆ ಆ ಆ ಆ )
ಎದೆಯಲಿ ಮಿಂಚು
ಹರಿಯುತ ನನ್ನ ತನುವು
ಹೂವಾಯಿತು
ಗಂಡು: ಕಾತರ ನನ್ನಲ್ಲಿ
ಆತುರ ನಿನ್ನಲ್ಲಿ
ಪ್ರಣಯದಾ ಕಾವು
ತರುತಿರೆ ನೋವು
ಬಯಕೆ ನೂರಾಯಿತು
ಹೆಣ್ಣು: ಅರೆಕ್ಷಣ ತಾಳಲಾರೆ
ಗೆಳೆಯನೇ ನಿಲ್ಲಲಾರೆ
ಬೇರೆ ಮಾತು ಏಕೆ ಬೇಕು
ನಿನ್ನ ಪ್ರೇಮ ಒಂದೇ ಸಾಕು
ನಡಿ ಹೋಗೋಣಾ
ಹೆಣ್ಣು: ಆಸೆಗಳು ಕೆಣಕುತಲಿದೆ(ಗಂಡು: Whistle)
ಸ್ನೇಹವನು ಬಯಸುತಲಿದೆ (ಗಂಡು: Whistle)
ನೀ ಬರದೇ ಪ್ರೀತಿಸದೆ (ಗಂಡು: Whistle)
ಸೇರಿ ನನ್ನನ್ನು (ಗಂಡು: Whistle)
ಸುಖ ತರದೇ (ಗಂಡು: Whistle)
ನನ್ನ ಜೀವ ನಿಲ್ಲದು
ಗಂಡು: ಆಸೆಗಳು ಕೆಣಕುತಲಿದೆ (ಹೆಣ್ಣು: ಅಹಹಹ್ )
ಸ್ನೇಹವನು ಬಯಸುತಲಿದೆ (ಹೆಣ್ಣು: ಅಹಹಹ್ )
ನೀ ಬರದೇ ಪ್ರೀತಿಸದೆ (ಹೆಣ್ಣು:ಉಹ್ )
ಸೇರಿ ನನ್ನನ್ನು (ಹೆಣ್ಣು: ಅಹ್)
ಸುಖ ತರದೇ (ಹೆಣ್ಣು: ಅಹ್)
ನನ್ನ ಜೀವ ನಿಲ್ಲದು