Mind Sharing?

ABY Scheme also called Arogya Bhagya Scheme is a health cover for Gazetted and Non-Gazetted officers in Karnataka Police Department.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ, ಪೊಲೀಸರ ಕೆಲಸವೆಂದರೆ ಬಹಳ ತಲೆಬಿಸಿಯ ಕೆಲಸ. ಇಂತಹ ಮಾನ್ಯರಾದ ಪೊಲೀಸರಿಗೆ ಆರೋಗ್ಯದಲ್ಲಿ ಏರುಪೇರು ಸಹಜ.

ಸದಾ ನಮ್ಮ ಒಳಿತನ್ನೇ ಬಯಸುವ ಪೊಲೀಸರು ಆರೋಗ್ಯದ ಸಮಸ್ಯೆಯಾದರೆ, ಹಣವಿಲ್ಲವೆಂದು ತಮ್ಮ ಆರೋಗ್ಯ ಕೈಚಳ್ಳಿ ಕುಳಿತುಕೊಳ್ಳುವುದು ಬಹಳ ದುರ್ವಿಧಿ.

ಪೊಲೀಸರಿಗೆ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮಾನ್ಯ ಕರ್ನಾಟಕ ಸರ್ಕಾರ ಆರೋಗ್ಯ ಭಾಗ್ಯ ಯೋಜನೆ ತಂದು, ನಮ್ಮ ಪೊಲೀಸರ ಆರೋಗ್ಯ ಕವರ್ ಮಾಡಿದೆ.

ಇದಕ್ಕಾಗಿಯೇ ಬಂದಿರುವ ಯೋಜನೆ, ಎಲ್ಲ ಪೊಲೀಸರನ್ನು ಆರೋಗ್ಯ ಭಾಗ್ಯ ಸ್ಕೀಮ್ ಅಡಿಯಲ್ಲಿ ಅವರ ಆಸ್ಪತ್ರೆ ವೆಚ್ಚಗಳನ್ನು ಭರಿಸುತ್ತದೆ.
ಇದನ್ನು ಓದಲೇಬೇಕು: ಅಪಘಾತಕ್ಕೆ ಒಳಗಾದ ವಾಹನಗಳ ವಿಲೇವಾರಿ

 

ಹಾಗಾದರೆ ಆರೋಗ್ಯ ಭಾಗ್ಯ ಸ್ಕೀಮ್ ಎಂದರೆ ಏನು (ABY Scheme)?

ಆರೋಗ್ಯ ಭಾಗ್ಯ ಸ್ಕೀಮ್ ಎಂದರೆ, ಎಲ್ಲಾ ಕರ್ನಾಟಕದ ಗೆಸೆಟೆಡ್ ಹಾಗೂ ನಾನ್ ಗೆಸೆಟೆಡ್ ಪೊಲೀಸ್ ಆಫೀಸರ್ ಗಳನ್ನು, ಇನ್ಶೂರೆನ್ಸ್ ಅಡಿಯಲ್ಲಿ ಹಾಸ್ಪಿಟಲ್ ಗೆ ಆದ ಖರ್ಚು ವೆಚ್ಚಗಳನ್ನು ಬರಿಸುತ್ತದೆ.

ಆರೋಗ್ಯ ಭಾಗ್ಯ ಸ್ಕೀಮ್ (ABY Scheme) ಎಂದರೆ ಸೆಲ್ಫ್ ಫಂಡೆಡ್ ಆಗಿದ್ದು, ಪ್ರತಿ ತಿಂಗಳು ಪೋಲಿಸ್ ಆಫೀಸರ್ಗಳ, ಇಚ್ಛೆಯ ಪ್ರಕಾರ, ಈ ಸ್ಕೀಮ್ ನಲ್ಲಿ ನೋಂದಾಯಿಸಿಕೊಳ್ಳಬಹುದು..

ಆರೋಗ್ಯ ಭಾಗ್ಯ ಅಡಿಯಲ್ಲಿ ಕೇವಲ ಕರ್ನಾಟಕ ಪೊಲೀಸ್ ಮಾತ್ರವಲ್ಲದೆ ಅವರ ಮನೆಯವರು ಕೂಡ ಯಾವುದೇ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆದಾಗ ಈ ಸ್ಕೀಮ್ ನ ಅಡಿಯಲ್ಲಿ, ಅವರ ಹಾಸ್ಪಿಟಲ್ ಖರ್ಚು ವೆಚ್ಚಗಳನ್ನು, ನೋಡಿಕೊಳ್ಳಲಾಗುತ್ತದೆ.
ಇದನ್ನು ಓದಲೇಬೇಕು: ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಓದಿಲ್ಲವೆಂದರೆ ನೀವು ಸಾಕಷ್ಟು ಕಳೆದುಕೊಂಡಿದ್ದೀರಿ

 

ABY Scheme – ಆರೋಗ್ಯ ಭಾಗ್ಯ ಸ್ಕೀಮ್ ಗೆ ಅಧಿಕಾರಿಗಳು ಎಷ್ಟು ಹಣ ತೊಡಗಿಸಬೇಕು?

ಆರೋಗ್ಯ ಭಾಗ್ಯ ಸ್ಕೀಮ್ (ABY Scheme) ಅಡಿಯಲ್ಲಿ ಪೊಲೀಸರು ಈ ವೆಚ್ಚವನ್ನು ಪ್ರತಿ ತಿಂಗಳು ಕೊಟ್ಟು ನೋಂದಾಯಿಸಿಕೊಳ್ಳಬೇಕು:

ಗೆಜೆಟೆಡ್ ಆಫೀಸರ್ಗಳು: 250/-
ನಾನ್ ಗೆಜ್ಜೆಟೆಡ್ ಆಫೀಸರ್ ಗಳು: 200/-

 

ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಏನೆಲ್ಲ ಖರ್ಚುಗಳನ್ನು ಭರಿಸಲಾಗುವುದು?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಬಾರಿ ಆರೋಗ್ಯ ಸಮಸ್ಯೆ ಉಂಟಾದರೆ, ನಮ್ಮ ಆರೋಗ್ಯದ ಏರುಪೇರುಗಳು ಹೆಚ್ಚಾಗುತ್ತಾ ಹೋಗುತ್ತವೆ.

ಅಂತಹ ಸಮಯದಲ್ಲಿ, ಆಸ್ಪತ್ರೆಯಲ್ಲಿ ನೋಂದಾಯಿಸಿಕೊಳ್ಳುವುದು ಅತ್ಯಗತ್ಯವಾಗುತ್ತದೆ.

ಈಗ ಆರೋಗ್ಯದಲ್ಲಿ ಏರುಪೇರು ಆದಾಗ, ನಾವು ಹಣದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಳ್ಳಲು ಆಗದೆ ಇದ್ದ ಪಕ್ಷದಲ್ಲಿ, ನಮ್ಮ ಆರೋಗ್ಯ ಅವಶ್ಯವಾಗಿ ಅತ್ಯಂತ ಕುಂಠಿತವಾಗುತ್ತದೆ.

ಈ ತೊಂದರೆಗಳು ನಮ್ಮ ಕರ್ನಾಟಕದ ಪೊಲೀಸರಿಗೆ ಆಗಬಾರದೆಂಬ ಕಾರಣದಿಂದ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಪೊಲೀಸರಿಗೆ ಈ ಎಲ್ಲಾ ಸೌಕರ್ಯಗಳು ಸಿಗುತ್ತವೆ:

  1. ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆ ಯ ನೆಟ್ವರ್ಕ್ ಹಾಸ್ಪಿಟಲ್ ಗಳಲ್ಲಿ, ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ ಪೂರ್ಣ ಕ್ಯಾಶ್ಲೆಸ್ ಟ್ರೀಟ್ಮೆಂಟ್ ಸಿಗುತ್ತದೆ. ಅಂದರೆ ಕೇವಲ ಭಕ್ತಿಯಾಗಲು ಸ್ವಲ್ಪ ಅಡ್ಮಿಶನ್ ಫೀಸ್ ಆಸ್ಪತ್ರೆಯಲ್ಲಿ ಭರಿಸಿದರೆ ಸಾಕು.
  2. ಅತ್ಯಂತ ಒಳ್ಳೆಯ ವಿಷಯವೆಂದರೆ, ಪೊಲೀಸರಿಗೆ ಇರುವ ಯಾವುದೇ ಹಿಂದಿನ ಕಾಯಿಲೆಗಳ ಅಡಿಯಲ್ಲಿ ತೊಂದರೆ ಇದ್ದರು, ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಪೂರ್ಣ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಸಿಗುತ್ತದೆ.
  3. ಅಂದರೆ ಬಿಪಿ, ಡಯಾಬಿಟಿಸ್, ಇತ್ಯಾದಿ ಯಾವುದೇ ಕಾಯಿಲೆಗಳ ಕಾರಣದಿಂದ ಉಂಟಾದ ತೊಂದರೆಯಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ, ಅದನ್ನು ಮೊದಲ ದಿನದಿಂದಲೇ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಕವರ್ ಮಾಡಲಾಗುವುದು.
  4. ಇಷ್ಟೇ ಅಲ್ಲದೆ ಆರೋಗ್ಯ ಭಾಗ್ಯ ಯೋಜನೆ (Aby scheme) ಅಡಿಯಲ್ಲಿ ಪೊಲೀಸರ ಮನೆಯವರನ್ನು ಕೂಡ ಐದು ಮಂದಿಯ ದವರೆಗೂ, ಕವರ್ ಮಾಡಲಾಗುವುದು.
  5. ಯಾವುದೇ ಕಾರಣದಿಂದಾಗಿ, ಪೊಲೀಸರಿಗೆ ನೆಟ್ವರ್ಕ್ ಹಾಸ್ಪಿಟಲ್ ನಲ್ಲಿ ಭರ್ತಿಯಾಗಲು ಸಾಧ್ಯವಾಗದಿದ್ದಾಗ, ತಾವು ಆಸ್ಪತ್ರೆ ಖರ್ಚು ಮಾಡಿದ್ದನ್ನು Reimbursement ಆಗಿ ಪಡೆದುಕೊಳ್ಳಬಹುದು.

ಇದನ್ನು ಓದಲೇಬೇಕು: ವನ್ಯಜೀವಿ ಸಂರಕ್ಷಣಾ ಕಾಯ್ದೆ

ಆರೋಗ್ಯ ಭಾಗ್ಯ ಯೋಜನೆಯ ನೆಟ್ವರ್ಕ್ ಹಾಸ್ಪಿಟಲ್ ಗಳು ಯಾವುವು?

ಆರೋಗ್ಯ ಭಾಗ್ಯ ಯೋಜನೆಯಲ್ಲಿ ಇಡೀ ಕರ್ನಾಟಕದಲ್ಲಿ ಹಲವಾರು ನೆಟ್ವರ್ಕ್ ಹಾಸ್ಪಿಟಲ್ ಗಳು ಇವೆ.

ಬರೋಬ್ಬರಿ ಆರೋಗ್ಯ ಭಾಗ್ಯ ಯೋಜನೆಯಲ್ಲಿ 150ಕ್ಕೂ ಹೆಚ್ಚು ಹಾಸ್ಪಿಟಲ್ ಗಳು ಕವರ್ ಆಗಿದೆ.

ABY Scheme Network Hostptals List | ನೆಟ್ವರ್ಕ್ ಹಾಸ್ಪಿಟಲ್ ಗಳ ಪಟ್ಟಿ ಈ ಕೆಳಗಿದೆ:

ABY Scheme Network Hospitals List

 

ಆರೋಗ್ಯ ಭಾಗ್ಯ ಯೋಜನೆ ಶುರುವಾಗಿದ್ದು ಹೇಗೆ?

ಆರೋಗ್ಯ ಭಾಗ್ಯ ಸ್ಕೀಮ್  ಶುರುವಾಗಿದ್ದು ಜೂನ್ 2002 ರಲ್ಲಿ.

ಕರ್ನಾಟಕ ಪೋಲೀಸರ ಆರೋಗ್ಯದ ವಿಷಯವಾಗಿ ತಂದಿರುವ ಸ್ಕೀಮ್ ಈ ಆರೋಗ್ಯ ಭಾಗ್ಯ.

ಈ ಆರೋಗ್ಯ ಭಾಗ್ಯ ಯೋಜನೆ ಸೆಲ್ಫ್ ಫಂಡೆಡ್ ಆಗಿದ್ದು, ಪ್ರತಿ ತಿಂಗಳು ನೊಂದಾಯಿಸಿಕೊಂಡ ಪೊಲೀಸರ ಸಂಬಳದಿಂದ ನೋಂದಾಯಿತ ವೆಚ್ಚ ಕಡಿತವಾಗುವುದು.

ಕರ್ನಾಟಕದ ಪೊಲೀಸರಿಗೆ, ಆರೋಗ್ಯದ ಏರುಪೇರು ಆದಲ್ಲಿ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಕೊಡಿಸಿ, ಅವರ ಪೂರ್ಣ ಖರ್ಚು ವೆಚ್ಚಗಳನ್ನು ಭರಿಸುತ್ತದೆ.

ಇದುವರೆಗೂ 60,000 ಕ್ಕಿಂತಲೂ ಹೆಚ್ಚು ಪೊಲೀಸರು ಈ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಕಡಿಮೆ ದರದಲ್ಲಿ ಹೆಚ್ಚು ಆರೋಗ್ಯದ ಭಾಗ್ಯವನ್ನು ಕೊಡುವ ಇಂತಹ ಯೋಜನೆಗಳು, ನಮ್ಮ ಒಳಿತನ್ನು ಬಯಸುವ ಪೊಲೀಸರಿಗೆ ಇನ್ನು ಹೆಚ್ಚು ಅಗತ್ಯವಿರುತ್ತದೆ.

ಈ ಯೋಜನೆ ಅಡಿಯಲ್ಲಿ ಕೇವಲ ಬೆಂಗಳೂರಿನಲ್ಲಿ ಎಂಬತ್ತಕ್ಕೂ ಹೆಚ್ಚು ನೆಟ್ವರ್ಕ್ ಹಾಸ್ಪಿಟಲ್ಗಳಲ್ಲಿ ಪೊಲೀಸರು ಹಾಗೂ ಅವರ ಮನೆಯವರು ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಪಡೆಯಬಹುದಾಗಿದೆ.
ಇದನ್ನು ಓದಲೇಬೇಕು: ಕನ್ನಡದ ಮೊದಲುಗಳ ಬಗ್ಗೆ ನಿಮಗೆಷ್ಟು ಗೊತ್ತು

 

Arogya Bhagya Scheme – ಆರೋಗ್ಯ ಭಾಗ್ಯ ಯೋಜನೆಯಲ್ಲಿ ಯಾವ ವೆಚ್ಚಗಳು ಬಾರಿಸಲಾಗುತ್ತವೆ (ಕವರ್ ಆಗುತ್ತದೆ):

  1.  Implants – ಅಂದರೆ Hernia ಆಪರೇಷನ್ ಆದರೆ, ಒಳಗೆ Mesh ಹಾಕಲಾಗುತ್ತದೆ. ಅದನ್ನು ಇಂಪ್ಲಾಂಟ್ ಎಂದು ಹೇಳುತ್ತಾರೆ. ಇದು 1963 ಮೆಡಿಕಲ್ ರೂಲ್ಸ್ ಪ್ರಕಾರ ಕವರ್ ಆಗದೆ ಇದ್ದರೂ, ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಆಗುತ್ತದೆ.
  2. Prosthetics – ಪೊಲೀಸರು ದುರ್ವಿಧಿಯಿಂದ ಕೈ ಕಾಲು ಇಲ್ಲವೇ ಬೆರಳುಗಳು, ಏನಾದರೂ ಕಳೆದುಕೊಂಡಲ್ಲಿ, ಪ್ರಾಸ್ಪೆಟಿಕ್ ಇಲ್ಲವೇ ಮಾನವ ನಿರ್ಮಿತ ಕೈ ಕಾಲು ಬೆರಳುಗಳು, ಅಳವಡಿಸಲು, ಖರ್ಚು ವೆಚ್ಚಗಳನ್ನು ಆರೋಗ್ಯ ಭಾಗ್ಯ ಯೋಜನೆ, ಕವರ್ ಮಾಡುತ್ತದೆ.
  3. Materials – ಅಂದರೆ ಹಾಸ್ಪಿಟಲ್ ನಲ್ಲಿ ಬಳಸಲಾದ Gloves ಗಳು, Diaper ಗಳು, ಇತರೆ ಸಾಮಾನುಗಳು ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಪೂರ್ಣವಾಗಿ ಕವರ್ ಮಾಡಲಾಗುವುದು.

 

ಆರೋಗ್ಯ ಭಾಗ್ಯ ಯೋಜನೆ ನಮ್ಮ ಒಳಿತನ್ನು ಬಯಸುವ ಕರ್ನಾಟಕದ ಪೊಲೀಸರಿಗೆ ಸಿದ್ಧ ಸಾಧನ ವಾಗಿ ಪರಿಣಮಿಸಿದೆ.

ಇಂತಹ ಹೆಚ್ಚು ಜನರ ಕಾಯುವ ಪೊಲೀಸರಿಗೆ ಸಿಗಲೆಂದು ನಮ್ಮ ಆಶಯ ಸದಾ ಇರುತ್ತದೆ.

ಹೆಚ್ಚಿನ ವಿವರಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.

ABY Scheme ಬಗ್ಗೆ ವಿವರಗಳನ್ನು ನೀವು ಓದಿ ಸಂತೋಷಪಟ್ಟಿದ್ದರೆ, ನಿಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಶೇರ್ ಮಾಡುವುದು ಮರೆಯಬೇಡಿ.

ಕಾಮೆಂಟ್ ನಲ್ಲಿ ನಿಮಗೆ ಏನ್ ಅನ್ನಿಸಿತು ಎಂದು ತಿಳಿಸುವುದು ಮರೆಯಬೇಡಿ.

ಸರ್ವೇ ಜನ ಸುಖಿನೋ ಭವಂತು 🙏

Mind Sharing?