Mind Sharing?

ಚಲನಚಿತ್ರ: ಅಪೂರ್ವ ಸಂಗಮ (1984)
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

***************************************************************************************

ಗಂಡು :ಹ್ಮ್ ಹ್ಮ್ ಹ್ಮ್
ಓಹೋ ಓ ಓಹೋ ಓಹೋ
ಅಹ ಹ ಹ ಆಹಾ ಹಾ
ಹೆಣ್ಣು: ಅರಳಿದೆ ತನು ಮನ ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ ಕಂಡೆನು ನಾಆಆಆಆ
ಗಂಡು: ಅರಳಿದೆ ತನು ಮನ ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ ಕಂಡೆನು ನಾಆಆಆಆ
ಹೆಣ್ಣು: ಅರಳಿದೆ ತನು ಮನ
ಗಂಡು: ನೋಡುತ ನಿನ್ನಾ
ಗಂಡು: ಚಲಿಸುವ ತಂಗಾಳಿಯು ಚೆಲುವೆ ನಿನ್ನಾ ನೋಡಿ
ನಲಿಯುತ ಓಡಿದೆ ಮುಂಗುರಳ ಹಿಡಿದು ಆಡಿ
ಹೆಣ್ಣು: ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನಾ ಅಂದ ನೋಡಿ
ಗಂಡು: ಸುಖ ತರುತಿದೆ
ಹೆಣ್ಣು: ಹಿತ ಸವಿದಿದೆ ಚೆಲುವಾಆಆಆಆಆಆ
ಗಂಡು: ಅರಳಿದೆ ತನು ಮನ
ಹೆಣ್ಣು: ನೋಡುತ ನಿನ್ನಾ
ಹೆಣ್ಣು: ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ
ಕೆಣಕಲು ಸೋತೆನು ನನ್ನಿನಿಯ ನಿನ್ನಾ ನೋಡಿ
ಗಂಡು: ಪ್ರಣಯದ ಸಂಗೀತದ ಇಂಪು ಕಿವಿಯಾ ತುಂಬಿ
ಕನಸನು ಕಂಡೆನು ಸಂಗಾತಿಯೆ ನಿನ್ನಾ ಸೇರಿ
ಹೆಣ್ಣು: ಇನ್ನು ಬಿಡುವೆನೆ
ಗಂಡು: ನನ್ನೇ ಕೊಡುವೆನಾ ಚೆಲುವೇಏಏಏಏಏಏಏ
ಹೆಣ್ಣು: ಅರಳಿದೆ ತನು ಮನ ನೋಡುತ ನಿನ್ನಾ
ಗಂಡು: ಹೊಸತನ ನನ್ನಲ್ಲಿಯೇ ಕಂಡೆನು ನಾಆಆಆ
ಗಂಡು+ಹೆಣ್ಣು:  ಹ್ಮ್ ಹ್ಮ್ ಹ್ಮ್ ಹ್ಮ್ ….ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
Mind Sharing?