Mind Sharing?

ನೀವು Belageddu Lyrics In Kannada ಹುಡುಕುತ್ತಿದ್ದರೆ, ನೀವು ಸರಿಯಾದ ಜಾಗದಲ್ಲಿ ಬಂದು ಇಳಿದಿದ್ದೀರಿ.

ಹಳೆಯ ಚೇತಕ್ ಸ್ಕೂಟರ್ ನಲ್ಲಿ ರಕ್ಷಿತ್ ಶೆಟ್ಟಿ ಕುಳಿತು, ಸಂಗೀತದ ಜೊತೆಗೆ, ರಶ್ಮಿಕಾ ಮಂದಣ್ಣ ಅವರನ್ನು ಕೂಡಿಸಿಕೊಂಡು ಹೋಗುವಾಗ, ನಮ್ಮ ಅಪ್ಪನ ಸ್ಕೂಟರ್ ಜ್ಞಾಪಕಕ್ಕೆ ಬಂತು!

  • ಅದೆಂತ ಅದ್ಭುತ ಸಮಯ!
  • ಬೆಂಗಳೂರಲ್ಲಿ ಟ್ರಾಫಿಕ್ ಇರ್ಲಿಲ್ಲ.
  • ಆರಾಮವಾಗಿ ಎಡಗೈಯಲ್ಲಿ ಗೇರ್ ಚೇಂಜ್ ಮಾಡಿಕೊಂಡು ಹೋಗಬಹುದಿತ್ತು! ಈಗ ಅದಾಗುತ್ತ?

ನೆನಪುಗಳು ನೆನಪುಗಳು ಅಷ್ಟೇ!

 

Belageddu Lyrics In Kannada Details | ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಸಾಹಿತ್ಯ ವಿಷಯಗಳು:

ಹಾಡು: ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಸಾಹಿತ್ಯ
ಚಿತ್ರ: ಕಿರಿಕ್ ಪಾರ್ಟಿ (2016)
ನಿರ್ದೇಶಕ: ರಿಷಬ್ ಶೆಟ್ಟಿ
ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
ಸಂಗೀತ: ಅಜನೀಶ್ ಲೋಕ್ನಾಥ್
ನಟರು: ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅಚ್ಚುತ್ ಕುಮಾರ್.

 

Belageddu Lyrics In Kannada | ಬೆಳಗೆದ್ದು ಯಾರ ಮುಖವ ಸಾಹಿತ್ಯ:

ಗಂಡು: ಬೆಳಗೆದ್ದು ಯಾರ ಮುಖವ
ನಾನು ನೋಡಿದೆ
ಅಂದಾನೋ ಅದ್ರುಷ್ಟನೋ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲ್ಯಾಕ್ ಅಂಡ್ ವೈಟು

ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗ ತಾನೆ ಮೂಡಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

ಪ್ರೀತಿಯಲ್ಲಿ
ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ
ಹೋಗೋದು ಮಾಮೂಲಿ
ಸನ್ನೆಯಲ್ಲೆ
ಹಾಡೊಂದು ಹಾಡುವ ವಿಧಾನ
ಕಾದು ಕೇಳೊ
ಪ್ರೀತಿನೇ ಮಜಾನ
ಬಿಡದಂತಿರೊ ಬೆಸುಗೆ
ಸೆರೆ ಸಿಕ್ಕಿರೊ ಸಲಿಗೆ
ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೊ
ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

ಹಾಯ್ ಸಾನ್ವಿ ಏನ್ ಇಷ್ಟೊತ್ತಿಗೆ? ಅರೆರೆರೆ
ಓ ನಿದ್ದೆ ಬರ್ತಿಲ್ವ? ಅಲೆಲೆಲೆ
ನಂಗು ಬರ್ತಿಲ್ಲ, ಅಯ್ಯಯ್ಯಯ್ಯೊ
ಹೊಟ್ಟೆ ಉರಿ ತಾಳಲಾರೆ

ಬೆಳಗೆದ್ದು ಯಾರ ಮುಖವ
ನಾನು ನೋಡಿದೆ
ಅಂದಾನೋ ಅದ್ರುಷ್ಟನೋ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲ್ಯಾಕ್ ಅಂಡ್ ವೈಟು
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗ ತಾನೆ ಮೂಡಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

ಇದನ್ನು ಓದಿರಿ: ಆನ್ಲೈನ್ ಬಿಸಿನೆಸ್ ನಿಂದ ಖಂಡಿತ ಹಣ ಬರುತ್ತಾ? ಉತ್ತರ ಇಲ್ಲಿದೆ.
ಇದನ್ನು ಓದಿರಿ: ಬೆಂಗಳೂರು ಗಣೇಶ ಉತ್ಸವ 2023 ಕಾರ್ಯಕ್ರಮ ಪಟ್ಟಿ ಆಂಗ್ಲ ಭಾಷೆಯಲ್ಲಿ
ಇದನ್ನು ಓದಿರಿ: ಮನೆಯಿಂದ ಖಾತ್ರಿಯಾಗಿ ಹಣ ಹೇಗೆ ಗಳಿಸುವುದು?
ಇದನ್ನು ಓದಿರಿ: ಈ ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಓದಿಲ್ಲವೆಂದರೆ ನೀವು ಸಾಕಷ್ಟು ಕಳೆದುಕೊಂಡಿದ್ದೀರಿ!
ಸಾಹಿತ್ಯ ಹಾಡಿಕೊಳ್ಳಿ: ಒಂದೇ ಒಂದು ಸಾರಿ ನಿನ್ನ ಕನ್ನಡ ಸಾಹಿತ್ಯ
ಸಾಹಿತ್ಯ ಹಾಡಿಕೊಳ್ಳಿ: ನಿನ್ನ ಕಂಗಳ ಬಿಸಿಯ ಹನಿಗಳು-ಬಡವರ ಬಂಧು

 

Belageddu Song Lyrics and its Fame | ಬೆಳಗೆದ್ದು ಯಾರ ಮುಖವಾ ಸಾಹಿತ್ಯ ಮತ್ತು ಅದರ ವಿಶೇಷಗಳು:

  1. ರಕ್ಷಿತ್ ಶೆಟ್ಟಿ ಅವರ ಹಾಸ್ಯದ ತುಳುಕುಗಳು, , ರಶ್ಮಿಕಾ ಮಂದಣ್ಣ ಅವರ ಮುಗ್ಧ ನಟನೆ, ಎಲ್ಲವೂ ಈ ಹಾಡಿಗೆ ಪೂರಕವಾಗಿತ್ತು.
  2. ಜಯಂತ್ ಕಾಯ್ಕಿಣಿ ಅವರ ಮನಮುಟ್ಟುವ ಸಾಹಿತ್ಯ, ಹಾಗೂ ಅಜನೀಶ್ ಲೋಕನಾಥ್ ಅವರ ಮನಮುಟ್ಟುವ ಸಂಗೀತ, ಈ ಹಾಡನ್ನು ಮನಸ್ಸಿಗೆ ಹತ್ತಿರವಾಗುವಂತೆ ಮಾಡಿತು.
  3. ಈ ಸಾಹಿತ್ಯ ಬಲು ಸಲೀಸಾಗಿದ್ದು ಎಲ್ಲರಿಗೂ ಆರಾಮವಾಗಿ ಅರ್ಥವಾಗುವಂತಹ ಸಾಹಿತ್ಯವಾದ್ದರಿಂದ, ಎಲ್ಲರಿಗೂ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು ಮನಸ್ಸಿಗೆ ಮುಟ್ಟಿದ.
  4. ಸ್ಕೂಟರ್ ಬಳಕೆಯ ಸವಿನೆನಪು ಕೊಟ್ಟ ಈ ಹಾಡಿಗೆ ನಮ್ಮದೊಂದು ದೊಡ್ಡ ನಮನ.
  5. ವಿಜಯಪ್ರಕಾಶ್ ಅವರ ಮನಸ್ಸು ಸೂರೆ ಗೊಳ್ಳುವ ಕಂಠದಾನ ಈ ಹಾಡಿನ ಸಿರಿವಂತಿಗೆ ಅತ್ಯಂತ ಹೆಚ್ಚಿಸಿದೆ.

ಒಟ್ಟಿನಲ್ಲಿ ಮತ್ತೆ ಮತ್ತೆ ಕೇಳುವಂತಹ ಕೆಲವೇ ಕನ್ನಡ ಹಾಡುಗಳ ಸಾಲಿನಲ್ಲಿ , ಈ ಹಾಡು ಒಂದು.

ನಿಮಗೆ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನ ಸಾಹಿತ್ಯ ಇಷ್ಟವಾಗಿದ್ದರೆ, ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದು ಮರಿಬೇಡಿ.

ಸರ್ವೇ ಜನ ಸುಖಿನೋ ಭವಂತು 🙏

Mind Sharing?