Mind Sharing?

ಚಿತ್ರ : ನಾ ನಿನ್ನ ಬಿಡಲಾರೆ (1979)
ಗಾಯಕರು : ಎಸ್. ಜಾನಕಿ
ಸಂಗೀತ : ರಾಜನ್-ನಾಗೇಂದ್ರ
ಸಾಹಿತ್ಯ : ಚಿ. ಉದಯ ಶಂಕರ್

*********************************************************************************************************************************

ರಾಘವೇಂದ್ರ…….
ನೀ ಮೌನವಾದರೆ
ನನ್ನ ಗತಿಯೇನು
ನಿನ್ನ ಕರುಣೆಯ ಜ್ಯೋತಿ
ಬಾಳ ಬೆಳಗುವ ತನಕಾ….ಆ ಆ
ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ….
ಗಗನವು ನಡುಗಲಿ…..
ಭೂಮಿಯು ಬಿರಿಯಲಿ
ಗಗನವು ನಡುಗಲಿ
ಸಾಗರ ಕೆರಳಲಿ
ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ
ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ
ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ…
ನಿನ್ನ ನಾಮ ವೇದಾ
ಬಿಡೆನು ನಿನ್ನ ಪಾದ
ಗುರುವೇ ಬಿಡೆನು ನಿನ್ನ ಪಾದ
ಮುಡಿದಾ ಹೂಗಳು ಮುದುಡಿ ಹೋಗುತ
ಬಾಡುತಿವೆ
ಬಾಡುತಿವೆ
ಅರಿಶಿನ ಕುಂಕುಮ ಬೆವರಲಿ ಬೆರೆತು
ಕರಗುತಿದೆ
ಕರಗುತಿದೆ
ನನ್ನ ಕೊರಳ ಮಾಂಗಲ್ಯವು ಕಳಚಿ
ಜಾರುತಿದೆ
ಜಾರುತಿದೆ
ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ
ಆರುತಿದೆ
ಆರುತಿದೆ
ಮೊರೆಯು ಕೇಳದೆ
ಕರುಣೆ ತೋರದೆ
ಪ್ರಾಣ ಉಳಿಸದೆ
ನನ್ನ ಹರಸದೆ
ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ
ಗಗನವು ನಡುಗಲಿ
ಸಾಗರ ಕೆರಳಲಿ
ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ
ಗುರುವೇ ಬಿಡೆನು ನಿನ್ನ ಪಾದ
ದುಷ್ಟ ಶಕ್ತಿಯು ಅಟ್ಟಹಾಸದಲಿ
ನಗುತಲಿದೆ
ನಲಿಯುತಿದೆ
ದಮನ ಮಾಡುವ ದೈವ ಶಕ್ತಿಯು
ಕಾಣಿಸದೆ
ಕೆಣಕುತಿದೆ
ಅಳುವ ಹೆಣ್ಣಿನ ಆರ್ತನಾದವು
ಕೇಳಿಸದೆ
ದಯೆ ಬರದೆ
ದಾರಿ ಕಾಣೆನು
ರಾಘವೇಂದ್ರನೇ
ನೀ ಬರದೆ
ಕಣ್ ಬಿಡದೆ
ದೈತ್ಯ ಶಕ್ತಿಯ
ನೀನು ದಹಿಸದೆ
ದೈವ ಶಕ್ತಿಯ
ಮಹಿಮೆ ತೋರದೆ
ಬಿಡೆನು ನಿನ್ನ ಪಾದ
ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ
ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ..
ನಿನ್ನ ನಾಮ ವೇದಾ
ರಾಘವೇಂದ್ರ.. ರಾಘವೇಂದ್ರ
ಯೋಗೀಂದ್ರ …ಯೋಗೀಂದ್ರ
ರಾಘವೇಂದ್ರ…………
ರಾಘವೇಂದ್ರಾ………
Mind Sharing?