Mind Sharing?

ಚಿತ್ರ: ಮಯೂರ (1975)
ಗಾಯಕರು: ಡಾ: ರಾಜ್ ಕುಮಾರ್ ಮತ್ತು ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ.ಕೆ. ವೆಂಕಟೇಶ್

*********************************************************************************************************************************

ಹೆಣ್ಣು: ಈ ಮೌನವಾ ತಾಳೆನು
ಈ ಮೌನವಾ ತಾಳೆನು
ಮಾತಾಡೆ ದಾರಿಯ ಕಾಣೆನು
ಓ ರಾಜಾಆಆಆಆಆ
ಈ ಮೌನವಾ ತಾಳೆನು
ಗಂಡು: ನೀ ಹೇಳದೇ ಬಲ್ಲೆನು
ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿಈಈಈಈಈ
ನೀ ಹೇಳದೇ ಬಲ್ಲೆನು
ಗಂಡು: ನಾನಂದು ನಿನ್ನ
ಕಂಡಾಗ ಚಿನ್ನ
ಏನೇನೋ ಹೊಸ ಭಾವನೆ
ಹೂವಾಗಿ ಮನಸು
ಏನೇನೋ ಕನಸು
ನಾ ಕಾಣದ ಕಲ್ಪನೆ
ನಾನಂದು ನಿನ್ನ
ಕಂಡಾಗ ಚಿನ್ನ
ಏನೇನೋ ಹೊಸ ಭಾವನೆ
ಹೂವಾಗಿ ಮನಸು
ಏನೇನೋ ಕನಸು
ನಾ ಕಾಣದ ಕಲ್ಪನೆ
ಹೆಣ್ಣು: ಇನ್ನು ನಿನ್ನ ಬಿಡೆನು
ಈ ದೂರ ಸಹಿಸೆನು
ಗಂಡು: ನೀ ಹೇಳದೇ ಬಲ್ಲೆನು
ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿಈಈಈಈ
ನೀ ಹೇಳದೇ ಬಲ್ಲೆನು
ಹೆಣ್ಣು: ಈ ಅಂದ ಕಂಡು
ನಾ ಮೋಹಗೊಂಡು
ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು
ಕಂಡಾಗ ನವಿಲು
ಕುಣಿವಂತೆ ನನಗಾಯಿತು
ಈ ಅಂದ ಕಂಡು
ನಾ ಮೋಹಗೊಂಡು
ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು
ಕಂಡಾಗ ನವಿಲು
ಕುಣಿವಂತೆ ನನಗಾಯಿತು
ಗಂಡು: ಅಂದೇ ನಿನಗೆ ಸೋತೆ
ನಾ ಜಗವನೆ ಮರೆತೆ
ಹೆಣ್ಣು: ಈ ಮೌನವಾ ತಾಳೆನು
ಮಾತಾಡೆ ದಾರಿಯ ಕಾಣೆನು
ಓ ರಾಜಾ
ಗಂಡು: ಓ ರಾಣಿ
ಹೆಣ್ಣು: ಓ ರಾಜಾ
ಗಂಡು: ಓ ರಾಣಿ
Mind Sharing?