Mind Sharing?

ಭಾರತ ದೇಶದ ಅಂತರರಾಷ್ಟ್ರೀಯ ಗಡಿ ರೇಖೆಗಳು

1) ಮ್ಯಾಕ್ ಮಹೋನ್ ರೇಖೆ

             ಇದು ಭಾರತ ಮತ್ತು ಚೀನಾ ದೇಶಗಳ ನಡುವೆ ಇರುವ ಅಂತರರಾಷ್ಟ್ರೀಯ ಗಡಿ ರೇಖೆ. ಈ ಗಡಿ ರೇಖೆಯು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ, ಸಿಕ್ಕಿಂ ಮತ್ತು ಅರುಣಾಚಲಪ್ರದೇಶಗಳ ಗಡಿಗಳಲ್ಲಿ ಹಾದುಹೋಗುತ್ತದೆ. ಈ ಗಡಿಯ ಒಟ್ಟು ಉದ್ದ 3840 ಕಿ.ಮೀ . ಬ್ರಿಟಿಷ್ ಇಂಡಿಯಾದ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಹೆನ್ರಿ ಮ್ಯಾಕ್ ಮಹೋನ್ ಎಂಬುವವರು ಭಾರತ ಮತ್ತು ಚೀನಾ ದೇಶಗಳ ನಡುವಿನ ಗಡಿಯನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆದ್ದರಿಂದ ಈ ಗಡಿ ರೇಖೆಯನ್ನು ಮ್ಯಾಕ್ ಮಹೋನ್ ರೇಖೆ ಎಂದು ಕರೆಯುತ್ತಾರೆ.

2) ರಾಡ್ ಕ್ಲಿಫ್ ರೇಖೆ

       ಇದು ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಇರುವ ಗಡಿ ರೇಖೆಯಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಈ ರೇಖೆಯನ್ನು ಆಗಸ್ಟ್ 17, 1947 ರಲ್ಲಿ ಎಳೆಯಲಾಯಿತು. ಈ ಗಡಿ ರೇಖೆಯು ಗುಜರಾತ್ ನಿಂದ ಟಿಬೆಟ್ ವರೆಗೂ ಸಾಗುತ್ತದೆ. ಭಾರತ ಗಡಿ ಸಮಿತಿಯು ಸರ್ ಸಿರಿಲ್ ರಾಡ್ ಕ್ಲಿಫ್ ರವರ ಅಧ್ಯಕ್ಷತೆಯಲ್ಲಿ ಈ ರೇಖೆಯನ್ನು ಗುರುತಿಸಿದ ಗೌರವಾರ್ಥವಾಗಿ ಈ ರೇಖೆಯನ್ನು ರಾಡ್ ಕ್ಲಿಫ್ ರೇಖೆ ಎಂದು ಕರೆಯಲಾಗಿದೆ. ಇದರ ಉದ್ದ 3323 ಕಿ.ಮೀ. ಭಾರತ ದೇಶವು ಸ್ವತಂತ್ರವಾದಾಗ ಮುಸ್ಲಿಮರು ಹೆಚ್ಚು ವಾಸಿಸುತ್ತಿದ್ದ ಪ್ರದೇಶವನ್ನು ಪಾಕಿಸ್ತಾನ ದೇಶವಾಗಿ ವಿಭಜಿಸಿದ ನಂತರ ಎರಡು ದೇಶಗಳ ನಡುವೆ 1947 ರಲ್ಲಿಯೇ ಯುದ್ಧವಾಗಿ ಕಾಶ್ಮೀರದ ಕೆಲವು ಪ್ರದೇಶಗಳನ್ನು ಪಾಕಿಸ್ತಾನ ದೇಶವು ಆಕ್ರಮಿಸಿಕೊಂಡಿತು. ವಿಶ್ವಸಂಸ್ಥೆಯ ಮಧ್ಯ ಪ್ರವೇಶದಿಂದ ಯುದ್ಧವು ಕೊನೆಗೊಂಡು ಎರಡು ದೇಶಗಳು ಶಾಂತಿಯನ್ನು ಪಾಲಿಸಲು ಒಪ್ಪಿಕೊಂಡವು. ಆದರೆ ಪಾಕಿಸ್ತಾನ ಆಕ್ರಮಿಸಿದ್ದ ಕಾಶ್ಮೀರದ ಭಾಗದಿಂದ ಹೊರಹೋಗಲು ಯಾವುದೇ ನಿರ್ಣಯ ಕೈಗೊಳ್ಳದ ಪ್ರಯುಕ್ತ ಆ ಪ್ರದೇಶವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗಿಯೇ ಉಳಿಯಿತು. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಗುರುತಿಸಿದ್ದ ರಾಡ್ ಕ್ಲಿಫ್ ರೇಖೆಯಿಂದ ಹಲವಾರು ಕಿಲೋಮೀಟರುಗಳಷ್ಟು ಕಾಶ್ಮೀರದ ಭಾಗವು ಪಾಕಿಸ್ತಾನದ ವಶದಲ್ಲಿದ್ದು ಪ್ರಸ್ತುತ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಗಡಿ ರೇಖೆಯು ಲೈನ್ ಆಫ್ ಕಂಟ್ರೋಲ್ (LOC) ಆಗಿದೆ.

3) ಪಾಕ್ ಜಲಸಂಧಿ

       ಇದು ಭಾರತ ಮತ್ತು ಶ್ರೀಲಂಕಾವನ್ನು ಬೇರ್ಪಡಿಸುವ ಜಲಸಂಧಿಯಾಗಿದೆ. ಇದರ ಇದ್ದ 30 ಕಿ.ಮೀ ಗಳು. ಗಲ್ಫ್ ಆಫ್ ಮುನ್ನಾರ್ ಕೂಡ ಭಾರತ ಮತ್ತು ಶ್ರೀಲಂಕಾವನ್ನು ಬೇರ್ಪಡಿಸುತ್ತದೆ.

4) ಡ್ಯೂರಾಂಡ್ ಗಡಿ ರೇಖೆ

         ಇದು ಅವಿಭಜಿತ ಭಾರತ ಮತ್ತು ಅಫ್ಘಾನಿಸ್ಥಾನಗಳ ನಡುವಿನ ಗಡಿ ರೇಖೆಯಾಗಿತ್ತು. 1893 ರಲ್ಲಿ ಅಂದಿನ ಬ್ರಿಟಿಷ್ ಭಾರತ ಸರ್ಕಾರ ಮತ್ತು ಅಫ್ಘಾನಿಸ್ಥಾನದ ಅಮಿರ್ ಅಬ್ದುರ್ ರೆಹಮಾನ್ ಖಾನ್ ರವರೊಂದಿಗೆ ಏರ್ಪಟ್ಟ ಒಪ್ಪಂದದ ಅನ್ವಯ ಈ ಗಡಿಯನ್ನು ಗುರುತಿಸಲಾಯ್ತು. ಪ್ರಸ್ತುತ ಡ್ಯೂರಾಂಡ್ ಗಡಿ ರೇಖೆಯು ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳ ನಡುವಿನ ಅಂತರರಾಷ್ಟ್ರೀಯ ರೇಖೆಯಾಗಿದೆ. ಸರ್ ಮಾರ್ಟಿಮರ್ ಡ್ಯೂರಾಂಡ್ ಎಂಬುವವರು ಈ ಗಡಿ ರೇಖೆಯನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

5) ಪೂರ್ಬಾಚಲ್ ರೇಖೆ (ಆಪರೇಟಿಂಗ್ ಜೀರೋ ಲೈನ್)

         ಇದು ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಅಂತರರಾಷ್ಟ್ರೀಯ ಗಡಿ ರೇಖೆಯಾಗಿದೆ. ಇದರ ಉದ್ದ 4096.7 ಕಿ.ಮೀ

6) ಇಂಡೋ ಭೂತಾನ್ ಗಡಿ ರೇಖೆ

         ಇದು ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಗಡಿ ರೇಖೆ. ಇದರ ಉದ್ದ 699 ಕಿ.ಮೀ

7) ಇಂಡೋ ಬರ್ಮಾ ಬ್ಯಾರಿಯರ್

        ಇದು ಭಾರತ ಮತ್ತು ಬರ್ಮಾ ದೇಶಗಳ ನಡುವಿನ ಗಡಿ ರೇಖೆ. ಇದರ ಉದ್ದ 1643 ಕಿ.ಮೀ

 

Mind Sharing?