Mind Sharing?

ಚಲನಚಿತ್ರ: ಚೆಲುವಿನ ಚಿತ್ತಾರ (2007)
ಗಾಯಕರು: ಸೋನು ನಿಗಮ್ ಮತ್ತು ಸುನಿಧಿ ಚೌಹಾಣ್
ಸಾಹಿತ್ಯ: ಎಸ್. ನಾರಾಯಣ್
ಸಂಗೀತ: ಮನೋಮೂರ್ತಿ

*********************************************************************************************************************************

ಗಂಡು: ಕನಸೊ ಇದು ನನಸೊ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಅಂತರಂಗದಾ ಆಹ್ವಾನವೆ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು
ಹೆಣ್ಣು: ಕನಸೊ ಇದು ನನಸೊ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಹೆಣ್ಣು: ಪ್ರೀತಿ ನೀ ಹುಟ್ಟೊದೆಲ್ಲಿ ನಿನ್ನ ಆ ತವರೂರೆಲ್ಲಿ
ನಿಂಗೆ ತಾಯ್ತಂದೆ ಯಾರು ನೀ ಹೇಳೆಯ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಗಂಡು: ಪ್ರೀತಿ ನಿಂಗಿಷ್ಟ ಯಾರು ನಿನ್ನ ಕೈಗೊಂಬೆ ಇವರು
ಇವರ ಆಸೆಯ ತುಂಬ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನೀನಿದ್ದರೆ ಇಲ್ಲಿ ಸುಖ ಸಾಗರ
ಹೆಣ್ಣು: ಕನಸೊ ಇದು ನನಸೊ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ಗಂಡು: ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಗಂಡು: ಪ್ರೀತಿ ಈ ಹೃದಯಗಳನ್ನು ನೀನು ಆವರಿಸಿಕೊಂಡೆ
ನಿನ್ನ ಇಷ್ಟಾನುಸಾರ ಕರೆದೊಯ್ಯುವೆ
ಇವರಿಬ್ಬರು ಮತಿಹೀನರು
ನಿನ ಮುಷ್ಠಿಗೆ ಇಲ್ಲಿ ಶರಣಾದರು
ಹೆಣ್ಣು: ಪ್ರೀತಿ ಈ ಸಂಭ್ರಮದಲ್ಲಿ ಇವರ ಈ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ ನೀನಿಲ್ಲವೆ
ನಿನಗಿಂತಲೂ ಹಿತ ಯಾವುದು
ನಿನ್ನಿದಂಲೆ ತಾನೆ ಜಗ ನಲಿವುದು
ಗಂಡು: ಕನಸೊ ಇದು ನನಸೊ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ಹೆಣ್ಣು: ಅಂತರಂಗದಾ ಆಹ್ವಾನವೆ
ಹೃದಯ ಮೀಟುವ ಶುಭ ಆರಂಭವು
ಗಂಡು: ಪ್ರೀತಿ ಜನಿಸುವ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು
Mind Sharing?