Mind Sharing?

ಚಿತ್ರ: ಕಾಮನ ಬಿಲ್ಲು (1983)
ಗಾಯಕ: ಡಾ. ರಾಜಕುಮಾರ್, ವಾಣಿ ಜಯರಾಮ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

*********************************************************************************************************************************

ಹೆಣ್ಣು: ಕಣ್ಣು ಕಣ್ಣು ಕಲೆತಾಗ……
ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ
ಗಂಡು: ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ
ಹೆಣ್ಣು: ಹೊಸ ಸುಖ ಕಾಣುತಿದೆ
ಹೊಸ ಕನಸಾಗುತಿದೆ
ಹೊಸ ಬಯಕೆಯು ಮೂಡುತಿದೆ…….
ಗಂಡು: ಹೊಸ ಹೊಸ ಭಾವನೆ
ಹೊಸ ಹೊಸ ಕಲ್ಪನೆ
ಹೊಸ ಲೋಕಕೆ ಸೆಳೆಯುತಿದೆ
ಹೆಣ್ಣು: ಅಹ ಏನೋ ಹೇಳೋ ಆಸೆ
ಅಹ ಏನೋ ಕೇಳೋ ಆಸೆ
ನಾಚಿಕೆ ತಡೆಯುತಿದೆ
ಅಹ ಏನೋ ಹೇಳೋ ಆಸೆ
ಅಹ ಏನೋ ಕೇಳೋ ಆಸೆ
ನಾಚಿಕೆ ತಡೆಯುತಿದೆ
ಗಂಡು: ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೆಣ್ಣು: ಹೃದಯ ಬಿಡಲಾರೆ ಎಂದಿದೆ ಕೂಗಿ
ಗಂಡು: ಮೈ ನವಿರೇಳುತಿದೆ
ತನು ಹೂವಾಗುತಿದೆ
ಮನ ಕವಿತೆಯ ಹಾಡುತಿದೆ
ಹೆಣ್ಣು: ನಿನ್ನ ಮನ ಹಾಡಿರುವ
ಕವಿ ನುಡಿ ಸಾಲುಗಳ
ಈ ಕಂಗಳೇ ಹೇಳುತಿದೆ
ಗಂಡು: ಈ ಮಾತು ಎಂಥ ಚೆನ್ನ
ಈ ನೋಟ ಎಂಥ ಚೆನ್ನ
ನಿನ್ನ ಪ್ರೇಮಕೇ ನಾ ಸೋತೆ
ಈ ಮಾತು ಎಂಥ ಚೆನ್ನ
ಈ ನೋಟ ಎಂಥ ಚೆನ್ನ
ನಿನ್ನ ಪ್ರೇಮಕೇ ನಾ ಸೋತೆ
ಹೆಣ್ಣು: ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಗಂಡು: ಹೃದಯ ಬಿಡಲಾರೆ ಎಂದಿದೆ ಕೂಗಿ
ಗಂಡು+ಹೆಣ್ಣು: ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ
Mind Sharing?