Mind Sharing?

ಇತ್ತೀಚಿನ ದಿನಗಳಲ್ಲಿ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ. ಅತ್ಯಲ್ಪ ಅವಧಿಯಲ್ಲಿ ಅತಿ ಹೆಚ್ಚು ಲಾಭ ಕೊಡುವ ಆಮಿಷ ಒಡ್ಡಿ ಜನರನ್ನು ಮೋಸಗೊಳಿಸಲಾಗುತ್ತಿದೆ. ಅಷ್ಟಾಗಿ ವ್ಯವಹಾರ ಜ್ಞಾನ ಇಲ್ಲದ ಬಡವರ್ಗದ ಜನರು ಮತ್ತು ಸುಶಿಕ್ಷಿತರೂ ಸುಲಭವಾಗಿ ಮೋಸ ಹೋಗುತ್ತಿದ್ದಾರೆ. ಕಷ್ಟಪಟ್ಟು ಕೂಡಿಟ್ಟ ಹಣವನ್ನು ನಯ ವಂಚಕರು ಒಡ್ಡುವ ಪೊಳ್ಳು ಭರವಸೆಗಳಿಗೆ ನಂಬಿ ಬಲಿಪಶುಗಳಾಗುತ್ತಿದ್ದಾರೆ. ಜನರಿಂದ ಅನಧಿಕೃತವಾಗಿ ಠೇವಣಿ ಸಂಗ್ರಹಿಸಿ ಮರುಪಾವತಿ ಹಾಗೂ ಲಾಭಾಂಶದ ಪೊಳ್ಳು ಭರವಸೆ ನೀಡಿ ಜನರನ್ನು ಸುಲಭವಾಗಿ ಮೋಸ ಮಾಡುತ್ತಾರೆ. ಜನರ ನಂಬಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಕೆಲವರು ಹಣಕಾಸು ವಹಿವಾಟು ನಡೆಸುವ ನೆಪದಲ್ಲಿ ಕೋಟಿಗಟ್ಟಲೆ ನುಂಗಿ ನೀರು ಕುಡಿದಿರುವ ಉದಾಹರಣೆಗಳು ಸಾಕಷ್ಟಿವೆ. ಅದೂ ಭಾರತದಂತಹ ದೇಶದಲ್ಲಿ ಇಂತಹ ಪ್ರಕರಣಗಳಿಗೆ ಕೊರತೆಯೇನೂ ಇಲ್ಲ. ಏಕೆಂದರೆ ಭಾರತ ದೇಶದಲ್ಲಿ ಅನಕ್ಷರಸ್ಥರು ಹಾಗು ಬಡವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಬಡ ಹಾಗು ಮಧ್ಯಮ ವರ್ಗದ ಜನರೇ ಈ ವಂಚನೆಯ ಜಾಲಕ್ಕೆ ಬಲಿಯಾಗುವುದು. ಬಲಾಢ್ಯರು ತಮ್ಮ ಶಕ್ತಿ ಹಾಗು ಸಂಪರ್ಕದ ಮೂಲಕ ತಮ್ಮ ಹಣವನ್ನು ವಾಪಸ್ಸು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಆದರೆ ಬಡ ಮತ್ತು ಮಧ್ಯಮ ವರ್ಗದ ಜನರು ಏನೂ ಮಾಡಲು ಸಾಧ್ಯವಾಗದೆ ಪ್ರತಿಭಟನೆ ಹಾಗು ಇನ್ನಿತರೇ ಹಿಂಸಾತ್ಮಕ ವಿಧಾನಗಳ ಮೂಲಕ ತಮ್ಮ ಹಣವನ್ನು ವಾಪಸ್ಸು ಪಡೆಯಲು ಪ್ರಯತ್ನ ಮಾಡುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದರ ಖಾತ್ರಿ ಇರುವುದಿಲ್ಲ. ಕೆಲವೊಮ್ಮೆ ಈ ಜನರು ಮಾಡುವ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪವನ್ನು ಪಡೆದು ಹಣದ ಜೊತೆಗೆ ಜನರ ಪ್ರಾಣಗಳು ಕೂಡ ಹೋಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ.
            ಈ ಎಲ್ಲ ಅಂಶಗಳನ್ನು ಮನಗಂಡ ಕರ್ನಾಟಕ ರಾಜ್ಯ ಸರ್ಕಾರವು 2004 ನೇ ಇಸವಿಯಲ್ಲಿ Karnataka Protection of Interest of Depositors in Financial Institution Act (ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡೆಪಾಸಿಟರ್ಸ್ ಆಕ್ಟ್) ಎಂಬ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾನೂನು ಜಾರಿಗೆ ಬಂದು 15 ವರ್ಷಗಳು ಕಳೆದರೂ ಕಾಯ್ದೆ ಜಾರಿ ಸಂಬಂಧ ವಿವಿಧ ಇಲಾಖೆಗಳಲ್ಲಿ ಗೊಂದಲ ಮುಂದುವರೆದಿತ್ತು. ಈ ಗೊಂದಲವನ್ನು ನಿವಾರಿಸುವ ಸಲುವಾಗಿ ಕರ್ನಾಟಕ ಸರ್ಕಾರದ ಸಚಿವಾಲಯವು ದಿ: 18-12-2019 ರಂದು ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯಾವ ಯಾವ ಇಲಾಖೆಯು ಯಾವ ಯಾವ ರೀತಿಯ ಕ್ರಮಗಳನ್ನು ಜರುಗಿಸಬೇಕು ಹಾಗು ಅವುಗಳ ಕರ್ತವ್ಯ/ಕಾರ್ಯವ್ಯಾಪ್ತಿ ಏನು ಎಂಬದನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು(SOP) ಹೊರಡಿಸಿದೆ.ಈ Standard Operating Procedure(SOP) ಯಲ್ಲಿ ಸರ್ಕಾರ, ಜಿಲ್ಲಾಡಳಿತ, ಸಕ್ಷಮ ಪ್ರಾಧಿಕಾರ ಗಳ ಕರ್ತವ್ಯಗಳು ಹಾಗು ಠೇವಣಿದಾರರಿಗೆ ಹಣವನ್ನು ಹಿಂದಿರುಗಿಸಲು ಉಪಯೋಗಿಸಬೇಕಾದ ಮಾನದಂಡಗಳನ್ನು ವಿವರವಾಗಿ ನೀಡಲಾಗಿದೆ. ಈ Standard Operating Procedure(SOP) No. FD 03 CAM 2019 ಯಲ್ಲಿ ಸರ್ಕಾರ, ಜಿಲ್ಲಾಡಳಿತ, ಸಕ್ಷಮ ಪ್ರಾಧಿಕಾರ ಗಳ ಕರ್ತವ್ಯಗಳು ಹಾಗು ಠೇವಣಿದಾರರಿಗೆ ಹಣವನ್ನು ಹಿಂದಿರುಗಿಸಲು ಉಪಯೋಗಿಸಬೇಕಾದ ಮಾನದಂಡಗಳನ್ನು ವಿವರವಾಗಿ ನೀಡಲಾಗಿದೆ 


ಈ Standard Operating Procedure(SOP) ಅಥವಾ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ತಿಳಿಯಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ

    Notification KPID Dated 18.12.2019 (1)

Mind Sharing?