Mind Sharing?

ಚಿತ್ರ: ನಾನು ನನ್ನ ಹೆಂಡ್ತಿ (1985)
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ: ಹಂಸಲೇಖ
ಸಂಗೀತ: ಶಂಕರ್-ಗಣೇಶ್

**********************************************************************************************************************************

ಲಾ ಲಾ ಲ ಲಾ ಲ
ಲ ಲಾ ಲಾ ಲ ಲಾ
ಕರುನಾಡ ತಾಯಿ
ಸದಾ ಚಿನ್ಮಯಿ
ಕರುನಾಡ ತಾಯಿ
ಸದಾ ಚಿನ್ಮಯಿ
ಈ ಪುಣ್ಯ ಭೂಮಿ
ನಮ್ಮ ದೇವಾಲಯ
ಪ್ರೇಮಾಲಯ
ಈ ದೇವಾಲಯ
ಕರುನಾಡ ತಾಯಿ
ಸದಾ ಚಿನ್ಮಯಿ
ಕರುನಾಡ ತಾಯಿ
ಸದಾ ಚಿನ್ಮಯಿ
ವೀರ ಧೀರರಾಳಿದ
ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ
ಬೀಡು ನಿನ್ನದು
ವರ ಸಾಧು ಸಂತರ
ನೆಲೆ ನಿನ್ನದು
ಮಹಾ ಶಿಲ್ಪಕಾರರ
ಕಲೆ ನಿನ್ನದು
ಸಂಗೀತ ಸಾಹಿತ್ಯ
ಸೆಲೆ ನಿನ್ನದು
ಕರುನಾಡ ತಾಯಿ
ಸದಾ ಚಿನ್ಮಯಿ
ಕರುನಾಡ ತಾಯಿ
ಸದಾ ಚಿನ್ಮಯಿ
ಈ ಪುಣ್ಯ ಭೂಮಿ
ನಮ್ಮ ದೇವಾಲಯ
ಪ್ರೇಮಾಲಯ
ಈ ದೇವಾಲಯ……..
ಕರುನಾಡ ತಾಯಿ
ಸದಾ ಚಿನ್ಮಯಿ
ಕರುನಾ…….ಡ ತಾಯಿ
ಸದಾ ಚಿನ್ಮಯಿ
ಜೀವ ತಂತಿ ಮೀಟುವ
ಸ್ನೇಹ ನಮ್ಮದು
ಎಲ್ಲ ಒಂದೆ ಅನ್ನುವ
ಔದಾರ್ಯ ನಮ್ಮದು
ಸೌಂದರ್ಯ ಸೀಮೆಯ
ಗುಡಿ ನಮ್ಮದು
ಮಾಧುರ್ಯ ತುಂಬಿದ
ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು
ರೋಮ ರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ತನುವು ಮನವು ಧನವು ಎಲ್ಲ ಕನ್ನಡ
ತನುವು ಮನವು ಧನವು ಎಲ್ಲ ಕನ್ನಡ
ಆಆಆಆಆಆ……….
ಆ…ಆ…ಆ…ಆ…
(ನಿಶಬ್ದ)
ಕರುನಾಡ ತಾಯಿ
ಸದಾ ಚಿನ್ಮಯಿ
ಕರುನಾಡ ತಾಯಿ
ಸದಾ ಚಿನ್ಮಯಿ
ಈ ಪುಣ್ಯ ಭೂಮಿ
ನಮ್ಮ ದೇವಾಲಯ
ಪ್ರೇಮಾಲಯ
ಈ ದೇವಾಲಯ
ಕರುನಾಡ ತಾಯಿ
ಸದಾ ಚಿನ್ಮಯಿ
ಕರುನಾಡ ತಾಯಿ
ಸದಾ ಚಿನ್ಮಯಿ
Mind Sharing?