Mind Sharing?

ಪ್ರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ 15-20% ರಷ್ಟು ಪ್ರಕರಣಗಳು ಮನುಷ್ಯ ಕಾಣೆಯಾಗಿರುವ ಪ್ರಕರಣಗಳು ಆಗಿರುತ್ತವೆ. ಅದರಲ್ಲೂ ಮಕ್ಕಳು ಕಾಣೆಯಾಗುವ ಪ್ರಕರಣಗಳು ಬಹಳಷ್ಟು ಇರುತ್ತವೆ. ವಯಸ್ಕರು ಕಾಣೆಯಾಗುವ ಪ್ರಕರಣಗಳಲ್ಲಿ ಕಾರಣಗಳು ಹಲವಾರು ಇರುತ್ತವೆ ಆದರೆ ಮಕ್ಕಳು ಕಾಣೆಯಾಗುವ ಪ್ರಕರಣಗಳು ಮಾತ್ರ ಅತ್ಯಂತ ಸೂಕ್ಷ್ಮ ಹಾಗು ಪತ್ತೆ ಹಚ್ಚುವಿಕೆಯು ತನಿಖಾಧಿಕಾರಿಯ ಸಂವೇದನಾಶೀಲತೆಯನ್ನು ಓರೆಗೆ ಹಚ್ಚುತ್ತವೆ. ಮೊದಮೊದಲಿಗೆ ಮಕ್ಕಳ ನಾಪತ್ತೆ ಪ್ರಕರಣಗಳನ್ನು ವಯಸ್ಕರ ನಾಪತ್ತೆ ಪ್ರಕರಣಗಳಂತೆಯೇ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಮಕ್ಕಳ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಾಪತ್ತೆ ಪ್ರಕರಣದ ಬದಲು ಕಿಡ್ನಾಪ್ ಪ್ರಕರಣಗಳೆಂದು ದಾಖಲಿಸಿ ತನಿಖಾಧಿಕಾರಿಯು ಕೈಗೊಳ್ಳಬೇಕಾದ ತನಿಖಾ ವಿಧಾನಗಳನ್ನು ಪೊಲೀಸ್ ಪ್ರಧಾನ ಕಛೇರಿಯ Crime Section Circular – 3/2015 ರಲ್ಲಿ Standard Operating Procedure (SOP) ಯನ್ನು ಬಿಡುಗಡೆ ಮಾಡಲಾಗಿದೆ. ಈ SOP ಯನ್ನು ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ

 

Missing Children Case Investigation SOP

Mind Sharing?