Mind Sharing?

ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಇಲ್ಲವೇ ಮೂರು ಪಟ್ಟು ಮಾಡಲು ಸಾಧ್ಯವೇ

ಮ್ಯೂಚುಯಲ್ ಫಂಡ್ ಬಗ್ಗೆ ಸಿಕ್ಕಾಪಟ್ಟೆ ಜನಕ್ಕೆ ಏನೇನು ಕಲ್ಪನೆ ಇರುತ್ತೆ.

ಈ ಪೋಸ್ಟ್ ನಲ್ಲಿ ನಾನು ಎಲ್ಲ ಕಲ್ಪನೆಗಳಿಗೆ, ಉತ್ತರ ನೀಡುತ್ತೇನೆ.
ಓದಲೇಬೇಕಾದ ಪುಸ್ತಕ: ದ ಬೇಸಿಕ್ಸ್ ಒಫ್ ಸ್ಟಾಕ್ ಮಾರ್ಕೆಟ್

 

ಮ್ಯೂಚುವಲ್ ಫಂಡ್ ಎಂದರೇನು?

ಮ್ಯೂಚುವಲ್ ಫಂಡ್ ಎಂದರೆ ಕಂಪನಿಗಳ ಶೇರುಗಳು, ಇಲ್ಲವೇ ಬ್ಯಾಂಕಿನ ಸಾಲ, ಇಲ್ಲವೇ ಎರಡರಲ್ಲೂ ಹೂಡಿಕೆ ಮಾಡುವಂತಹ ಫಂಡ್.

 

ಮ್ಯೂಚುಯಲ್ ಫಂಡ್ ಯಾರು ನಿಭಾಯಿಸುತ್ತಾರೆ?

ಸಾಮಾನ್ಯ ಮ್ಯೂಚುಯಲ್ ಫಂಡ್ ನಿಭಾಯಿಸುವುದು AMC ಎಂದರೆ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ.

ಉದಾಹರಣೆಗೆ: ಹೆಚ್ಡಿಎಫ್‌ಸಿ ಸ್ಮಾಲ್ ಕ್ಯಾಪ್ ಫಂಡ್ ಅನ್ನು ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಭಾಯಿಸುತ್ತದೆ. ಈ ಉದಾಹರಣೆಯಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್, AMC ಆಗಿರುತ್ತದೆ.

 

ಮ್ಯೂಚುಯಲ್ ಫಂಡ್ಗಳಲ್ಲಿ ಎಷ್ಟು ವಿಧಗಳಿರುತ್ತವೆ?

ಮ್ಯೂಚುವಲ್ ಫಂಡ್ ನಲ್ಲಿ ಹಲವಾರು ವಿಧಗಳಿರುತ್ತವೆ.

ಕೆಲವನ್ನು ಈ ಕೆಳಗೆ ವಿವರಿಸಿಲು ಪ್ರಯತ್ನಿಸುತ್ತೇನೆ. 

  1. ಇಕ್ವಿಟಿ ಮ್ಯೂಚುಯಲ್ ಫಂಡ್: ಈ ವಿಧದ ಮ್ಯೂಚುಯಲ್ ಫಂಡನ್ನಲ್ಲಿ ಪೂರ್ಣವಾಗಿ ನೀವು ಹೂಡಿಕೆ ಮಾಡಿದ ಹಣವನ್ನು, ಕಂಪನಿಗಳ ಶೇರನ್ನು ಖರೀದಿ ಮಾಡಲು ಬಳಸುತ್ತಾರೆ. ಅಂದರೆ ನಿಮ್ಮ ಪೂರ್ಣ ಹೂಡಿಕೆ, ಈ ಮ್ಯೂಚುಯಲ್ ಫಂಡ್ ನ, ಶೇರುಗಳ ಪೋರ್ಟ್ಫೋಲಿಯೋ ನಲ್ಲಿ ಹೂಡಿಕೆಯಾಗುತ್ತದೆ. ಸಣ್ಣ ವಯಸ್ಕರು ಈ ರೀತಿಯ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಹಣ ಏರುವುದಕ್ಕೆ ಸಹಾಯ ಮಾಡುತ್ತದೆ. ಈ ತರಹದ ಮ್ಯೂಚುಯಲ್ ಫಂಡ್ ನಲ್ಲಿ ರಿಸ್ಕ್ ಜಾಸ್ತಿ.
  2. ಡೆಟ್ ಮ್ಯೂಚುಯಲ್ ಫಂಡ್: ಈ ವಿಧದ ಮ್ಯೂಚುಯಲ್ ಫಂಡ್ ನಲ್ಲಿ ಪೂರ್ಣವಾಗಿ ನೀವು ಹೂಡಿಕೆ ಮಾಡಿದ ಹಣ, ಜನರಿಗೆ ಸಾಲ ಕೊಡಲು ಬಳಸಲಾಗುತ್ತದೆ. ಅದರಿಂದ ಬಂದ ಇಂಟರೆಸ್ಟ್ ನಿಂದ ನಿಮ್ಮ ಫಂಡ್ ಬೆಳೆಯುತ್ತಾ ಹೋಗುತ್ತದೆ. ವಯಸ್ಕರು ಇಂತಹ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ರಿಸ್ಕ್ ಕಮ್ಮಿ ಇರುತ್ತದೆ.
  3. ಬ್ಯಾಲೆನ್ಸ್ ಮ್ಯೂಚುಯಲ್ ಫಂಡ್: ಈ ವಿಧದ ಮ್ಯೂಚುಯಲ್ ಫಂಡ್ ನಲ್ಲಿ, ಕಂಪನಿಯ ವಿಭಾಗಿಸಿದ ಅಂಕಿಯ ಪ್ರಕಾರ ಕೆಲವು ಪರ್ಸೆಂಟ್ ಕಂಪನಿಗಳ ಶೇರುಗಳಲ್ಲಿ, ಕೆಲವು ಪರ್ಸೆಂಟ್ ಡೆಟ್ ಅಂದರೆ ಸಾಲದಲ್ಲಿ ಹೂಡಿಕೆ ಮಾಡಲಾಗುತ್ತದೆ. ಮಧ್ಯ ವಯಸ್ಕರು ಈ ತರಹದ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.
  4. ಫಂಡ್ ಒಫ್ ಫಂಡ್ಸ್: ಈ ವಿಧದ ಮ್ಯೂಚಲ್ ಫಂಡ್ ನಲ್ಲಿ ಬೇರೆ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಬೇರೆ ಮ್ಯೂಚುಯಲ್ ಫಂಡ್ ಬೆಳೆಯುವುದರಿಂದ ನಿಮ್ಮ ಹಣ ಬೆಳೆಯುತ್ತಾ ಹೋಗುತ್ತದೆ.
  5. ಆಫ್ ಶೋರ್ ಇನ್ವೆಸ್ಟ್ಮೆಂಟ್ ಫಂಡ್: ಈ ವಿಧದ ಮ್ಯೂಚುಯಲ್ ಫಂಡ್ ನಲ್ಲಿ, ಬೇರೆ ದೇಶಗಳ ಶೇರುಗಳಲ್ಲಿ ನಿಮ್ಮ ಹಣದ ಹೂಡಿಕೆ ಆಗುತ್ತದೆ. ಈ ತರಹದ ಫಂಡ್ ನಲ್ಲಿ ಇನ್ವೆಸ್ಟ್ ಮಾಡಿದರೆ, ಸ್ವಲ್ಪ ರಿಸ್ಕ್ ಜಾಸ್ತಿ. ಅದು ಅಲ್ಲದೆ, ಬೇರೆ ದೇಶದ ಕರೆನ್ಸಿ ಕನ್ವರ್ಷನ್ ನಿಂದ ನಿಮ್ಮ ಹಣ ಬೆಳೆಯುವುದು ಕಮ್ಮಿ ಆಗಬಹುದು. ಇನ್ನೊಂದು ರೀತಿ ನೋಡಬೇಕಾದರೆ, ನಿಮ್ಮ ಹಣ ಡಾಲರ್ ನಲ್ಲಿ ಬೆಳೆಯುತ್ತದೆ. ಈ ರೀತಿ ಡಾಲರ್ ಬೆಲೆ ಜಾಸ್ತಿ ಅದಾಗಲಿಲ್ಲ ನಿಮ್ಮ ಮ್ಯೂಚುಯಲ್ ಫಂಡ್ ನ ಬೆಲೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

 

ಮ್ಯೂಚುವಲ್ ಫಂಡ್ ನಲ್ಲಿ ವಯಸ್ಸಿನ ಪ್ರಕಾರ ಯಾವ ರೀತಿ ಹೂಡಿಕೆ ಮಾಡಬೇಕು: 

ಮ್ಯೂಚುವಲ್ ಫಂಡ್ ಹೂಡಿಕೆ ಮಾಡಲು ನೀವು ನಿಮ್ಮ ವಯಸ್ಸಿನ ಪರಿಮಿತಿಯನ್ನು ಇಟ್ಟುಕೊಂಡು ಹೂಡಿಕೆ ಮಾಡಬೇಕು.

ರೂಲ್ ಆಫ್ ಥಮ್ಬ್:

ನಿಮ್ಮ ವಯಸ್ಸನ್ನು 100 ರಲ್ಲಿ ಕಳೆಯಿರಿ. ನಿಮ್ಮ ವಯಸ್ಸು 25 ಆಗಿದ್ದರೆ, 100–25, 75% ಎಕ್ವಿಟಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕು. ಮಿಕ್ಕಿದ 25%, Debt ಫಂಡ್ ನಲ್ಲಿ ಇನ್ವೆಸ್ಟ್ ಮಾಡಬೇಕು.

ನನಗೆ ತಿಳಿದಿರುವ ಪ್ರಕಾರ ನೀವು 1 ಮ್ಯೂಚುವಲ್ ಫಂಡ್ ಕೊಂಡುಕೊಂಡರೆ, ನಿಮಗೆ ಡೈವರ್ಸಿಫಿಕೇಶನ್ ಸಾಕಾಗಲ್ಲ.

ನಿಮ್ಮ ಹೂಡಿಕೆ ಇನ್ತಿರಬೇಕು:

  1. ಎರಡು ಸ್ಮಾಲ್ ಕ್ಯಾಪ್, ಒಂದು ಮಿಡ್ ಕ್ಯಾಪ್, ಒಂದು ಲಾರ್ಜ್ ಕ್ಯಾಪ್, ಹಾಗೂ ಒಂದು ಬ್ಯಾಲೆನ್ಸ್ ಡೆಟ್ ಫಂಡ್ ಇದ್ದರೆ ನಿಮಗೆ, ಸಾಕಷ್ಟು ಡೈವರ್ಸಿಫಿಕೇಶನ್ ಸಿಗುತ್ತದೆ.
  2. ನೀವು ಪ್ರತಿ ತಿಂಗಳು ಎಸ್ಐಪಿ ಮಾಡಿ, ಹೂಡಿಕೆ ಮಾಡಬೇಕು.
  3. ನಿಮ್ಮ ಹೂಡಿಕೆ ಡೈರೆಕ್ಟ್ ಪ್ಲಾನ್ ನಲ್ಲಿ ಇರಬೇಕು. ಆಗ ನೀವು brokerage ಕೊಡುವ ಅವಶ್ಯಕತೆ ಇರುವುದಿಲ್ಲ.
  4. ಪ್ರತಿ ತಿಂಗಳು ನಿಮ್ಮ ಹಣದ ಖಾತೆಯಿಂದ ಎಸ್ಐಪಿ ಹಣ ತಾನೆ ಕಡಿತಗೊಳ್ಳುವಂತೆ, OTM ಮಾಡಿಕೊಳ್ಳಿ.
  5. ಮ್ಯೂಚುವಲ್ ಫಂಡ್ ಆಯ್ಕೆಗೆ ಬಂದರೆ, ಕಳೆದ ಹತ್ತು ವರ್ಷದಲ್ಲಿ, ಒಳ್ಳೆಯ ರಿಟರ್ನ್ ಕೊಟ್ಟಿರುವ ಎರಡು ಸ್ಮಾಲ್ ಕ್ಯಾಪ್, ಒಂದು ಮಿಡ್ ಕ್ಯಾಪ್, ಒಂದು ಲಾರ್ಜ್ ಕ್ಯಾಪ್, ಹಾಗೂ ಒಂದು ಬ್ಯಾಲೆನ್ಸ್ ಡೆಟ್ ಫಂಡ್ value research ವೆಬ್ಸೈಟ್ನಲ್ಲಿ ಹುಡುಕಿ, ಹೂಡಿಕೆ ಮಾಡಿರಿ.
  6. ನೆನಪಿರಲಿ ಹಿಂದೆ ಸಿಕ್ಕಿರುವ ರಿಟರ್ನ್, ಮುಂದೆ ಕೂಡ ಸಿಗುತ್ತದೆ ಎನ್ನುವ ಭರವಸೆ ಇರುವುದಿಲ್ಲ.

 

ಮ್ಯೂಚುಯಲ್ ಫಂಡ್ ಭಾಷೆಯಲ್ಲಿ SIP ಎಂದರೇನು?

SIP ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಎಂದು. ಇದನ್ನು ಒಂದು ಸರಿ ನಿಮ್ಮ ಬ್ಯಾಂಕ್ ಖಾತೆ ಯಿಂದ ಪ್ರತಿ ತಿಂಗಳು ಇಲ್ಲವೇ ಪ್ರತಿ ವಾರ ಕಡಿತವಾಗುವಂತೆ ಬಿಲ್ ಆಗಿ ಸೇರಿಸಬಹುದು.
ಇದರಿಂದ ನೀವು ಸೆಟ್ ಮಾಡಿದ ದಿನದಂದು ಹಣ ಕಡಿತವಾಗಿ ಅಷ್ಟು ಮ್ಯೂಚುಯಲ್ ಫಂಡ್ ಯೂನಿಟ್ಸ ನಿಮ್ಮ ಖಾತೆಗೆ ಅಂದರೆ ಮ್ಯೂಚುಯಲ್ ಫಂಡ್ ಭಾಷೆಯಲ್ಲಿ ಫೋಲಿಯೋ ಗೆ ಬಂದು ಸೇರುತ್ತದೆ.

 

SIP ಮಾಡಲು ಎಷ್ಟು ಹಣ ಬೇಕಾಗುತ್ತದೆ?

SIP ಶುರುವಾಗುವ ಕನಿಷ್ಠ ಮೊತ್ತ ಎಂದರೆ 100 ರೂಪಾಯಿಗಳು. ಕೇವಲ 100 ರಿಂದ ನಿಮ್ಮ ಹೂಡಿಕೆ ಯಾವ ಮ್ಯೂಚುಯಲ್ ಫಂಡ್ ನಲ್ಲಿ ಕೂಡ ಶುರು ಮಾಡಬಹುದು.

 

SIP ಶುರು ಮಾಡುವುದಕ್ಕೆ ಏನೇನು ಬೇಕು?

ಇದಕ್ಕೆ ತಿಳಿಯಬೇಕಾದ ವಿಷಯ:

  1. ನಿಮ್ಮ ಮ್ಯೂಚುಯಲ್ ಫಂಡ್ ಯಾವುದರಲ್ಲಿ ಹಣ ಹೂಡಿಕೆ ಮಾಡಬೇಕು.
  2. ನಿಮ್ಮ ಬಳಿ ಬ್ಯಾಂಕ್ ಖಾತೆ ಇರಬೇಕು.
  3. ಇಲ್ಲ ಚೆಕ್ ಬುಕ್/ನೆಟ್ ಬ್ಯಾಂಕಿಂಗ್ ಎರಡರಲ್ಲಿ ಒಂದು ಕಡ್ಡಾಯವಾಗಿ ಇರಬೇಕು.
  4. KYC. ಮಾಡಿಸಲು ಆಧಾರ್, ಪಾನ್ ಕಾರ್ಡ್, ನಿಮ್ಮ ಮೊಬೈಲ್ ನಂಬರ್ ಕಡ್ಡಾಯವಾಗಿರಬೇಕು

 

ಮ್ಯೂಚುವಲ್ ಫಂಡ್ ನಿಂದ ಬಂದ ಲಾಭ ಹೇಗೆ ಟ್ಯಾಕ್ಸ್ ಆಗುತ್ತೆ?

ಮ್ಯೂಚುವಲ್ ಫಂಡ್ ಇಲ್ಲವೇ ಶೇರು ಮಾರುಕಟ್ಟೆಯ ಹೂಡಿಕೆ, ನಿಮ್ಮ ನಿವ್ವಳ ಲಾಭ ತೆಗೆಯುವ ವೇಳೆ, ಒಂದು ವರ್ಷಕ್ಕಿಂತ ಹೆಚ್ಚಿದ್ದರೆ, ನಿಮಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಸಿಗುತ್ತದೆ.

ನಿಮ್ಮ ಮ್ಯೂಚುಯಲ್ ಫ್ರೆಂಡ್ ನ ಲಾಭಗಳು 1 ಲಕ್ಷಕ್ಕಿಂತ ಕಡಿಮೆ ಇದ್ದರೆ ಮಾತ್ರ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಲಾಭ ತೆಗೆದುಕೊಳ್ಳಬಹುದು.

  1. ನಿಮ್ಮ ಒಂದು ಲಕ್ಷಕ್ಕಿಂತ ಕಡಿಮೆ ಲಾಭ ಮ್ಯೂಚುಯಲ್ ಫಂಡ್ ನ ಪ್ರಾಫಿಟ್ ಆಗಿದ್ದರೆ, ನೀವು ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಲಾಭ ತೆಗೆದುಕೊಂಡು ಯಾವುದೇ ಟ್ಯಾಕ್ಸ್ ಕಟ್ಟುವ ಅಗತ್ಯವಿರುವುದಿಲ್ಲ.
  2. ನಿಮ್ಮ ಲಾಭ ಒಂದು ಲಕ್ಷಕ್ಕಿಂತ ಹೆಚ್ಚು ಇದ್ದರೆ, ನೀವು ಒಂದು ಲಕ್ಷದವರೆಗೆ ಯಾವುದೇ ಟ್ಯಾಕ್ಸ್ ಕಟ್ಟುವ ಅಗತ್ಯವಿಲ್ಲ.
  3. ಒಂದು ಲಕ್ಷದ ಮೇಲೆ ಏನು ಲಾಭ ಬಂದಿರುತ್ತೆ, ಅದಕ್ಕೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಪ್ರಕಾರ ನೀವು 10% ಟ್ಯಾಕ್ಸ್ ಹಾಗೂ 4% Cess ಕಟ್ಟಬೇಕು.

 

ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ರೀತಿಗಳು?

ಮ್ಯೂಚುಯಲ್ ಫಂಡ್ ಹೂಡಿಕೆ ಮಾಡುವುದಕ್ಕೆ, ನಿಮಗೆ ಎರಡು ರೀತಿ ಗಳಿವೆ.

  1. ಮ್ಯೂಚುಯಲ್ ಫಂಡ್ ರೆಗ್ಯುಲರ್ ಇನ್ವೆಸ್ಟ್ಮೆಂಟ್.
  2. ಮ್ಯೂಚುವಲ್ ಫಂಡ್ ಡೈರೆಕ್ಟ್ ಇನ್ವೆಸ್ಟ್ಮೆಂಟ್.

 

ಮ್ಯೂಚುವಲ್ ಫಂಡ್ ರೆಗ್ಯುಲರ್ ಇನ್ವೆಸ್ಟ್ಮೆಂಟ್ ಎಂದರೇನು?

ಮ್ಯೂಚುವಲ್ ಫಂಡ್ ರೆಗ್ಯುಲರ್ ಇನ್ವೆಸ್ಟ್ಮೆಂಟ್ ಎಂದರೆ ನಿಮ್ಮ ಹೂಡಿಕೆ ಬ್ರೋಕರ್ ನ ಮೂಲಕ ಮ್ಯೂಚುಯಲ್ ಫಂಡ್ ನಲ್ಲಿ ಹಣ ತೊಡಗಿಸುವುದು ಎಂದರ್ಥ.

ಈ ರೀತಿ ರೆಗ್ಯುಲರ್ ಇನ್ವೆಸ್ಟ್ಮೆಂಟ್ ಮಾಡುವುದರಿಂದ ಬ್ರೋಕರ್ ಎಲ್ಲಾ ಕೆವೈಸಿ, ಹಣ ಹೂಡಿಕೆ ಮಾಡುವ ವಿವರಗಳು, ಹಾಗೂ ಬ್ಯಾಂಕಿನ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

ನೀವು ಹೆಚ್ಚಿಗೆ ಕೆಲಸ ಮಾಡುವ ಅಗತ್ಯವಿರುವುದಿಲ್ಲ.

ಅದರ ಜೊತೆಗೆ ಬ್ರೋಕರ್ಗಳೇ ನಿಮಗೆ ಯಾವ ಫಂಡ್ ನಲ್ಲಿ ಹೂಡಿಕೆ ಮಾಡಬೇಕು ಎಂದು ಕೂಡ ಹೇಳುತ್ತಾರೆ.

ಪ್ರತಿ ವರ್ಷ, ನಿಮ್ಮ ನಿವ್ವಳ ಲಾಭದಲ್ಲಿ, ನೀವು ಮ್ಯೂಚುಯಲ್ ಫಂಡ್ ಮಾಡಿಸಿದ ಬ್ರೋಕರ್ ಗೆ, 5% ಕೊಡಲಾಗುತ್ತದೆ.

ಹೆಚ್ಚಿನ ವರ್ಷ ಹೂಡಿಕೆ ಮಾಡಿದಾಗ ಈ ಐದು ಪರ್ಸೆಂಟ್ ಸಾಕಷ್ಟು ಹಣ ಆಗಿರುತ್ತದೆ.

ಆದ್ದರಿಂದ ನೀವು ಹೂಡಿಕೆಯ ಬಗ್ಗೆ ಗಮನಹರಿಸಿ, ಕಲಿತು, ನಿಮ್ಮ ಹೂಡಿಕೆಯನ್ನು ಡೈರೆಕ್ಟ್ ಆಗಿ ಹೂಡಿಕೆ ಮಾಡಬೇಕು.

ಇದರಿಂದ ಲಾಂಗ್ ಟರ್ಮ್ ನಲ್ಲಿ ನಿಮಗೆ ಲಾಭ ಜಾಸ್ತಿಯಾಗುತ್ತದೆ.

 

ಮ್ಯೂಚುಯಲ್ ಫಂಡ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಎಂದರೇನು?

ಮ್ಯೂಚುವಲ್ ಫಂಡ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಎಂದರೆ ನೀವು AMC ಕಂಪನಿಯ ವೆಬ್ಸೈಟ್ಗೆ ಹೋಗಿ ಇಲ್ಲವೇ Groww, Paytm Money ಇಂತಹ ಆಪ್ ಗಳಿಂದ ಹೂಡಿಕೆ ಮಾಡುವುದು ಎಂದರ್ಥ.

ಈ ರೀತಿ ಹೂಡಿಕೆ ಮಾಡುವುದರಿಂದ ನೀವು ಯಾವ ಬ್ರೋಕರ್ ಗೆ ಕೂಡ ಹಣ ನೀಡುವ ಅಗತ್ಯವಿಲ್ಲ.

ಲಾಂಗ್ ಟರ್ಮ್ ನಲ್ಲಿ ಈ ರೀತಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಹೆಚ್ಚಿಗೆ ಬೆಳೆಯುತ್ತದೆ.

ದಯವಿಟ್ಟು ಗಮನಿಸಿ: ಡೈರೆಕ್ಟ್ ಇನ್ವೆಸ್ಟ್ಮೆಂಟ್ ರೀತಿ ಹೂಡಿಕೆ ಮಾಡುವುದರಿಂದ ಫಾರ್ಮ್ ಗಳು ತುಂಬುವುದು ಹಾಗೂ ಮ್ಯೂಚುಯಲ್ ಫಂಡ್ ನ ಆಯ್ಕೆ ನಿಮ್ಮದೇ ಆಗಿರುತ್ತದೆ.

 

ಮ್ಯೂಚುಯಲ್ ಫಂಡ್ ಬಗ್ಗೆ ತಿಳಿಯಬೇಕಾದ ಕೆಲವು ವಿಷಯಗಳು:

  1. ಪ್ರತಿ ತಿಂಗಳು ನೀವು ಹಾಕಿದ ಹಣದಿಂದ ಮ್ಯೂಚುಯಲ್ ಫಂಡ್ ನಡೆಸುವ ಕಂಪನಿಗೆ ಎರಡುವರೆಯಿಂದ 5% ಹಣ ಕಡಿತಗೊಳ್ಳುತ್ತೆ.
  2. ನೀವು ಪ್ರತ್ಯಕ್ಷವಾಗಿ ಮ್ಯೂಚುಯಲ್ ಫಂಡ್ ನಲ್ಲಿ ಹಣ ತೊಡಗಿಸುತ್ತಿದ್ದರೆ ನೀವು ಯಾವ ಬ್ರೋಕರೇಜ್ ಫೀ ಕೊಡುವ ಅಗತ್ಯ ಇಲ್ಲ.
  3. ಆದರೆ ರೆಗ್ಯುಲರ್ ಪ್ಲಾನ್ ಬ್ರೋಕರ್ಗಳಿಂದ ನೀವು ಮ್ಯೂಚುಯಲ್ ಫಂಡ್ ಖರೀದಿಸಿದರೆ ಬ್ರೋಕರೇಜ್ ಫೀಸ್ ಅಂತ 10% ನಿಮ್ಮ ಮ್ಯೂಚುಯಲ್ ಫಂಡ್ ನಲ್ಲಿ ಪ್ರತಿ ತಿಂಗಳು ಕಡಿತಗೊಳಿಸ್ತಾರೆ.
  4. ಒಂದು ವರ್ಷದ ಒಳಗೆ ನಿಮ್ಮ ಮ್ಯೂಚುಯಲ್ ಫಂಡ್ Redeem ಮಾಡಿದರೆ ನಿಮಗೆ ಒಂದು ಪರ್ಸೆಂಟ್ ಎಕ್ಸಿಟ್ ಲೋಡ್ ಅಂತ ಕೊಡುವ ಹಣದಿಂದ ಕಡಿತ ಗೊಳಿಸುತ್ತಾರೆ.
  5. ಒಂದು ವರ್ಷದ ಕಮ್ಮಿಯ ಅವಧಿಯಲ್ಲಿ ಮ್ಯೂಚುಯಲ್ ಫಂಡ್ ತೆಗೆದರೆ ನಿಮಗೆ ಹದಿನೈದು ಪರ್ಸೆಂಟ್ ಟಿಡಿಎಸ್ ಕಡಿತಗೊಳ್ಳುತ್ತೆ.
  6. ಇಂಡೆಕ್ಸ್ ಫಂಡ್ ನಲ್ಲಿ ನೀವು ಹೂಡಿಕೆ ಮಾಡಿದರೆ ಮೆಂಟೇನೆನ್ಸ್ ಫೀಸ್ ಕೇವಲ ಒಂದು ಪರ್ಸೆಂಟ್ ಗಿಂತ ಕಮ್ಮಿ ನಿಮಗೆ ವರ್ಷಕ್ಕೆ ಕಡಿತುಕೊಳ್ಳುತ್ತದೆ.
  7. ಪ್ರತಿ ಬಾರಿ ನೀವು ಮ್ಯೂಚುಯಲ್ ಫಂಡ್ ತೆಗೆಯುವಾಗ ಎಸ್ ಟಿ ಟಿ ಅಂದರೆ ಸೆಕ್ಯೂರಿಟಿ ಟ್ರಾನ್ಸ್ಯಾಕ್ಷನ್ ಟ್ಯಾಕ್ಸ್ ಅಂತ 0.5% ಕಡಿತಗೊಳಿಸುತ್ತಾರೆ.
  8. ನೀವು ಗ್ರೋಥ್ ಫಂಡ್ ನಲ್ಲಿ ಹಣ ತೊಡಗಿಸಿದ್ರೆ ಫಂಡ್ ನಲ್ಲಿರುವ ಶೇರುಗಳು ಮೇಲೆ ಹೋದಷ್ಟು ನಿಮಗೆ ಹಣ ಜಾಸ್ತಿ ಆಗ್ತಾ ಹೋಗುತ್ತೆ.
  9. ಆದರೆ ನೀವು ಡಿವಿಡೆಂಡ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಿದ್ರೆ ನಿಮಗೆ ಕಂಪನಿಗಳ ಶೇರುಗಳನ್ನು ಕೊಂಡುಕೊಂಡು ಎಷ್ಟು ಡಿವಿಡೆಂಟ್ ಬಂದಿದೆ ಅಷ್ಟು ಮಾತ್ರ ನಿಮ್ಮ ಅಕೌಂಟಿಗೆ ಹಣ ಬರುತ್ತೆ.
  10. ಮ್ಯೂಚುವಲ್ ಫಂಡ್ ನಲ್ಲಿ ಇಕ್ವಿಟೀಸ್ ಫಂಡ್ ಬ್ಯಾಲೆನ್ಸ್ ಫಂಡ್ ಹಾಗೂ Debt ಫಂಡ್ ಅಂತ ಇರುತ್ತೆ.
  11. ಇಕ್ವಿಟೀಸ್ ಫಂಡ್ ಅಂದ್ರೆ ಅದು ನೂರುಕ್ಕೆ 100 ಪಟ್ಟು ಪೂರ್ಣವಾಗಿ ಕಂಪನಿಯ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುತ್ತದೆ. ಇದರಲ್ಲಿ ಮತ್ತೆ ಲಾರ್ಜ್ ಕ್ಯಾಂಪ್ ಮಿಡ್ ಕ್ಯಾಪ್ ಫಂಡ್ ಹಾಗೂ ಸ್ಮಾಲ್ ಕ್ಯಾಪ್ ಫಂಡ್ ಅಂತ ಇರುತ್ತೆ.
  12. ಬ್ಯಾಲೆನ್ಸ್ಡ್ ಫಂಡ್ ಅಂದ್ರೆ ಅದು ಐವತ್ತು ಪರ್ಸೆಂಟ್ ಕಂಪನಿಯ ಶೇರುಗಳಲ್ಲಿ ಹಾಗೂ 50% ಅಂದರೆ ಸಾಲಗಳಲ್ಲಿ ಅದರ ಹೂಡಿಕೆ ಮಾಡುತ್ತೆ.
  13. Debt fund ಅಂದ್ರೆ ಅದು ಪೂರ್ಣವಾಗಿ ಸಾಲಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುತ್ತೆ.
  14. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕು ಅಂದ್ರೆ ನಿಮ್ಮ ವಯಸ್ಸನ್ನು 100ರಿಂದ ಕಡಿತಗೊಳಿಸಿ.
  15. ನಿಮಗೆ 40 ವರ್ಷವಾದರೆ 100–40 = 60. ಅರವತ್ತು ಪರ್ಸೆಂಟ್ ನಷ್ಟು ಹಣವನ್ನು ಇಕ್ವಿಟೀಸ್ ಗ್ರೋಥ್ ಫಂಡನಲ್ಲಿ ಹಾಗೂ 40% ನಷ್ಟು ಹಣವನ್ನು ಡೆಡ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡುವುದು ನಿಯಮ.

 

ಮ್ಯೂಚುಯಲ್ ಫಂಡನಲ್ಲಿ ಹೇಗೆ ಹೂಡಿಕೆ ಮಾಡಬೇಕು?

  1. ಮೊದಲು ನಿಮ್ಮ ವಯಸ್ಸಿನ ಪ್ರಕಾರ ನಾನು ಮೇಲೆ ತಿಳಿಸಿರುವ ಹಾಗೆ ಎಷ್ಟು ಪರ್ಸೆಂಟ್ ಎಕ್ವಿಟಿ ಹಾಗೂ ಎಷ್ಟು ಪರ್ಸೆಂಟ್ ಡೆಟ್  ಫಂಡ್ ನಲ್ಲಿ ಹೂಡಿಕೆ ಮಾಡಬೇಕು ತಿಳಿದುಕೊಳ್ಳಿ.
  2. ನಂತರ ವ್ಯಾಲ್ಯೂ ರಿಸರ್ಚ್ ವೆಬ್ಸೈಟ್ನಲ್ಲಿ ಹಿಂದಿನ ವರ್ಷಗಳಲ್ಲಿ ಯಾವ ಫಂಡ್ ಎಷ್ಟು ರಿಟರ್ನ್ ನೀಡಿರುತ್ತದೆ ಎಂದು ಪರೀಕ್ಷಿಸಬಹುದು.
  3. ಆದಷ್ಟು ಫೋರ್ ಸ್ಟಾರ್ ಇಲ್ಲವೇ ಫೈವ್ ಸ್ಟಾರ್ ಇರುವ ಫಂಡ್ ಗಳಲ್ಲಿ ನಿಮ್ಮ ಹೂಡಿಕೆ ಮಾಡುವುದು ರಿಸ್ಕ್ ಅನ್ನು ಕಡಿಮೆ ಮಾಡುತ್ತದೆ.
  4. ನೀವು ಆದಷ್ಟು ಐದರಿಂದ ಆರು ಮ್ಯೂಚುಯಲ್ ಫಂಡ್ ಗಿಂತ ಜಾಸ್ತಿ ಫಂಡ್ಗಳಲ್ಲಿ ಹೂಡಿಕೆ ಮಾಡಬೇಡಿ.
  5. ಪ್ರತಿ ವರ್ಷಕ್ಕೊಮ್ಮೆ ನಿಮ್ಮ ಹೂಡಿಕೆ ಬೆಳೆಯುತ್ತಿದೆಯೇ ಎಂದು ಕಡ್ಡಾಯವಾಗಿ ಪರೀಕ್ಷಿಸಬೇಕು.

 

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಸ್ಟೆಪ್ಸ್ ವಿವರಿಸಿ:

  1. ಮೊದಲಿಗೆ ನೀವು 18 ವರ್ಷ ವಯಸ್ಸಾಗಿರಬೇಕು.
  2. ನಿಮ್ಮ ಹತ್ತಿರ ಬ್ಯಾಂಕ್ ಅಕೌಂಟ್ ಇರಬೇಕು.
  3. ಬ್ಯಾಂಕಿನ ಚೆಕ್ ಕಡ್ಡಾಯವಾಗಿರಬೇಕು. ಇದು ಕೆವೈಸಿ ಮಾಡಿಸಲು ಬೇಕಾಗುತ್ತದೆ.
  4. ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇರಬೇಕು.
  5. ನಿಮ್ಮ ಹತ್ತಿರ ಪಾನ್ ಕಾರ್ಡ್ ಇರಬೇಕು.
  6. ಇವೆಲ್ಲವನ್ನೂ ತಾವು ಗ್ರೋ ಆಪ್ ನಲ್ಲಿ ತಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿ kyc ವೆರಿಫಿಕೇಶನ್ ಆದ ನಂತರ, ನಿಮಗೆ ಇಷ್ಟವಾದ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು. ಈ ರೀತಿ ಗ್ರೋ ಆಪ್ ನಲ್ಲಿ ಹೂಡಿಕೆ ಮಾಡಿದಾಗ ತಾವು ಡೈರೆಕ್ಟ್ ಇನ್ವೆಸ್ಟ್ಮೆಂಟ್ ಮಾಡುತ್ತಿರುತ್ತೀರಿ.

 

ಮ್ಯೂಚುವಲ್ ಫಂಡ್ ಎಕ್ಸಿಟ್ ಲೋಡ್ ಎಂದರೆ ಏನು?

ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ ಒಂದು ವರ್ಷದ ಅವಧಿಯ ಒಳಗೆ ತೆಗೆದರೆ, ಫಂಡ್ ನ ಹಣದ ಮೇಲೆ ಒಂದು ಪರ್ಸೆಂಟ್ ಎಕ್ಸಿಟ್ ಲೋಡ್ ಎಂದು ಕಡಿತಗೊಳಿಸಲಾಗುವುದು.

ಇದನ್ನು SEBI ರೂಲ್ಸ್ ನ ಪ್ರಕಾರ ಇರಿಸಲಾಗಿದೆ.

 

ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಮ್ಯೂಚುಯಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯ ಬಗ್ಗೆ ಬೇಕಿದ್ದರೆ ನೀವು ನನ್ನ ಪುಸ್ತಕ ಓದಬಹುದು.

ನಿಮ್ಮ ಹಣ ದುಪ್ಪಟ್ಟಾಗಲಿ. ಹಣ ಬೆಳೆಯುತ್ತಾ ಹೋಗಲಿ

ಸರ್ವೇ ಜನ ಸುಖಿನೋ ಭವಂತು 🙏

Mind Sharing?