ಚಿತ್ರ : ನಾ ನಿನ್ನ ಬಿಡಲಾರೆ (1979)
ಗಾಯಕರು : ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ : ರಾಜನ್-ನಾಗೇಂದ್ರ
ಸಾಹಿತ್ಯ : ಚಿ. ಉದಯ ಶಂಕರ್
*********************************************************************************************************************************
ಗಂಡು: ಹೇ..ಹೇ..ಹೇ..ಹೇ..
ಹೆಣ್ಣು: ಆ……ಆಹಾ….ಆಹಾ…
ಗಂಡು: ಹಾ….
ಹೆಣ್ಣು: ಹಾ….
ಗಂಡು: ನಾನು
ನೀನು
ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ನಾನು
ನೀನು
ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ
ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇ….
ಹೆಣ್ಣು: ನಾನು
ನೀನು
ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಕಣ್ಣಲ್ಲು ನೀನೆ
ಮನದಲ್ಲು ನೀನೆ
ಎಲ್ಲೆಲ್ಲೂ ನೀ ಕಾಣುವೇ…..
ನಾನು
ನೀನು
ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಗಂಡು: ನನಗಾಗಿ ಹೆಣ್ಣಾಗಿ ಬಂದೆ
ನನ್ನಲ್ಲಿ ನಿನ್ನಾಸೆ ತಂದೆ..ಹಾ….ಹಾ….
ಹಗಲಲ್ಲ ಇರುಳಿಲ್ಲ ನಿನ್ನಲ್ಲೆ ಮನವೆಲ್ಲ
ನೆನಪಲ್ಲೆ ನಾ ಸೋತು ಹೋದೆ
ಹೆಣ್ಣು: ಸಂಗಾತಿ ನೀನಾಗಿ ಬಂದೆ
ಸಂತೋಷ ಬಾಳಲ್ಲಿ ತಂದೆ…….
ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ
ನೆನಪಿಂದ ನಾ ನೊಂದು ಹೋದೆ
ಗಂಡು: ಇನ್ನೆಂದು ಈ ಚಿಂತೆ ನಿನಗಿಲ್ಲವೆ
ನಾನು
ನೀನು
ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ
ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇ……
ನಾನು
ನೀನು
ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಹೆಣ್ಣು: ಲತೆಯಲ್ಲಿ ಹೂವಾಗಿ ನಾನು
ಮರಿದುಂಬಿ ಅಂದಾಗಿ ನೀನು…….
ಹೂವಲ್ಲಿ ಹೊರಳಾಡಿ
ಜೇನಾಟ ನಾವಾಡಿ
ಆನಂದ ಹೊಂದೋಣವೇನು
ಗಂಡು: ಬಾನಾಡಿ ನಾವಾಗಿ ಹಾರಿ
ಬಾನಲ್ಲಿ ಒಂದಾಗಿ ಸೇರಿ……
ಹೊಸ ಆಟ ಆಡೋಣ
ಹೊಸ ನೋಟ ನೋಡೋಣ
ಮುಗಿಲಿಂದ ಜಾರೋಣವೇನು
ಹೆಣ್ಣು: ಎಂದೆಂದು ನೆರಳಾಗಿ ನಾ ಬಾಳುವೆ
ನಾನು
ನೀನು
ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಗಂಡು+ಹೆಣ್ಣು: ಕಣ್ಣಲ್ಲು ನೀನೆ
ಮನದಲ್ಲು ನೀನೆ
ಎಲ್ಲೆಲ್ಲೂ ನೀ ಕಾಣುವೇ
ನಾನು
ನೀನು
ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಹೀಗೇಕೆ ನನ್ನನ್ನೆ ನೋಡುವೆ……..