Mind Sharing?

ನಗುವಿಗೆ ಇನ್ನೊಂದು ಹೆಸರೇ ನಮ್ಮ ರಾಜಣ್ಣ.
ರಾಜಣ್ಣನವರ ನಗುವಿನಿಂದ ಪುಳಕಿತ ಗೊಂಡ ಈ ಹಾಡು ನಗು ನಗುತ ನಲಿ ಲಿರಿಕ್ಸ್ / ಸಾಹಿತ್ಯ ಜನರನ್ನು ತತ್ ಕ್ಷಣವೇ ಆನಂದಿಸಿತು!

ನಗುವಿನ ಬಾವುಟ ಹೊತ್ತು ಅದರ ನಿಜ ಸ್ವರೂಪ ತೋರಿದ ಈ ನಗು ನಗುತ ನಲಿ ನಲಿ ಹಾಡು ಜನರ ಮನಸ್ಸನ್ನು ಸೂರೆಗೊಂಡಿತು ಎಂದರೆ ಉತ್ಪ್ರೇಕ್ಷೆಯಲ್ಲ!

 

ನಗು ನಗುತಾ ನಲಿ ಲಿರಿಕ್ಸ್ ಬಗೆಗಿನ ವಿಷಯಗಳು:

ಹಾಡು: ನಗು ನಗುತಾ ನಲಿ ನಲಿ
ಚಿತ್ರ: ಬಂಗಾರದ ಮನುಷ್ಯ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ
ಸಂಗೀತ : ಜಿ.ಕೆ.ವಂಕಟೇಶ್
ಗಾಯನ : ಪಿ.ಬಿ.ಶ್ರೀನಿವಾಸ್
ನಟರು: ಡಾ.ರಾಜ್ ಕುಮಾರ್, ಭಾರತಿ

 

ಜನರ ನಗುವಿಗೆ ಈ ಹಾಡು ಹಾಗು ರಾಜಣ್ಣ ಹಾಗು ಡಾ.ಪಿಬಿ.ಶ್ರೀನಿವಾಸ್ ಸರ್ ಅವರ ಹಾಡುಗಾರಿಕೆ ಎಲ್ಲವು ಕಾರಣ!

ಓದಿ ಹಾಡೋಣ ನಗು ನಗುತ ನಲಿ ಲಿರಿಕ್ಸ್ ಕನ್ನಡದಲ್ಲಿ!

 

ನಗು ನಗುತಾ ನಲಿ ಲಿರಿಕ್ಸ್ ಕನ್ನಡದಲ್ಲಿ:

ಆಹಹಾ.. ಆಹ.ಹಾ.ಆಹ.ಹ..ಹಹಾ

ನಗು ನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ

ನಗು ನಗುತಾ ನಲಿ ನಲಿ ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ ಮದುವೆ ಬ೦ಧನ
ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿ ನೋಡ

ನಗು ನಗುತಾ ನಲೀ ನಲೀ ಏನೇ ಆಗಲಿ

 

ಈ ಸಾಹಿತ್ಯವನ್ನು ಓದಿ ಹಾಡಿಕೊಳ್ಳಿ:

ಅಡವಿದೇವಿಯ ಕಾಡುಜನಗಳ ಈ ಹಾಡು
ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ-ಗಾಂಧಿನಗರ
ಸೂರ್ಯ ಚಂದ್ರ ಆಕಾಶಕೆ-ನೀ ಬರೆದ ಕಾದಂಬರಿ
ನೀ ಮೀಟಿದ ನೆನಪೆಲ್ಲವು-ನೀ ಬರೆದ ಕಾದಂಬರಿ

 

ನಮ್ಮ ನಗು ನಗುತ ನಲಿ ನಲಿ ಲಿರಿಕ್ಸ್ ಇಷ್ಟವಾಗಿದ್ದರೆ, ಇದನ್ನು ಶೇರ್ ಮಾಡೋದು ಮರೀಬೇಡಿ.

ಸರ್ವೇ ಜನಃ ಸುಖಿನೋ ಭವಂತು

Mind Sharing?