Mind Sharing?

ಚಿತ್ರ: ಆಲೆಮನೆ (1981)
ಗಾಯಕ: ಎಸ್. ಪಿ. ಬಾಲಸುಬ್ರಮಣ್ಯಂ
ಸಂಗೀತ: ಸಿ. ಅಶ್ವಥ್ ಮತ್ತು ಎಲ್. ವೈದ್ಯನಾಥನ್
ಸಾಹಿತ್ಯ: ದೊಡ್ಡರಂಗೇಗೌಡ

**********************************************************************************************************************************

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ
ಕಣ್ಣಲ್ಲೆ ಕರೆದು
ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು
ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂ….ಡಿದ
ಪ್ರೇ….ಮದ
ಸೊಗಸಾದ ಕಾರಂಜಿ ಬಿರಿದೆ
ಸೊಗಸಾದ ಕಾರಂಜಿ ಬಿರಿದೆ
ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ…….
ಒಡಲಾಳ ಮೊರೆದು
ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ
ಹೊಸಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀ….ರದ
ಮೋ…..ಹದ
ಇನಿದಾದ ಆನಂದ ತಂದೆ
ಇನಿದಾದ ಆನಂದ ತಂದೆ
ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ಬರಿದಾದ ಮನದಲ್ಲಿ ಮಿನುಗು
Mind Sharing?