Mind Sharing?
Narcotic Drugs and Psychotropic Substances Act,  ಇದು ಒಂದು ಕಠಿಣ ಕಾಯ್ದೆ. ಅಪರಾಧ ಸಾಬೀತಾದರೆ ಆರೋಪಿಗೆ ಗರಿಷ್ಟ 20 ವರ್ಷಗಳವರೆಗೆ ಶಿಕ್ಷೆಯನ್ನು ನೀಡಲು ಅವಕಾಶವಿದೆ. ಈ ಕಾಯ್ದೆಯ ಅಡಿಯಲ್ಲಿ ಆರೋಪಿಗೆ ಸಜೆಯಾಗುವಂತೆ ಮಾಡುವುದು ಅತಿ ಸುಲಭ. ಆದರೆ ರೇಡ್ ಮಾಡುವ ಅಧಿಕಾರಿಗಳು ಮತ್ತು ತನಿಖಾಧಿಕಾರಿ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಗಮನಹರಿಸಿ ಕಾನೂನು ಲೋಪಕ್ಕೆ ಅವಕಾಶವಿಲ್ಲದಂತೆ ಕಾಯ್ದೆಯನ್ನು ಜಾರಿ ಮಾಡಬೇಕು. ರೇಡ್ ಮಾಡುವ ಮತ್ತು ತನಿಖೆಯನ್ನು ಕೈಗೊಳ್ಳುವ ಅಧಿಕಾರಿಗಳು ಪಾಲನೆ ಮಾಡಬೇಕಾದ ಕಾರ್ಯವಿಧಾನಗಳನ್ನು Narcotic Control Bureau (NCB) ಹಾಗು ಇತರೆ ತನಿಖಾ ಏಜೆನ್ಸಿಗಳು ನೀಡುತ್ತಲೇ ಬಂದಿವೆ. ಯು ಹೊರಡಿಸಿರುವ ಕೈಪಿಡಿಯನ್ನು ಈ ಕೆಳಕಂಡ ಲಿಂಕ್ ಅನ್ನು ಒತ್ತಿ ಓದಿಕೊಳ್ಳಿ.

NCB’s Handbook on Procedure for NDPS cases

ಹಾಗೆಯೇ ಕರ್ನಾಟಕ ರಾಜ್ಯದ Criminal Investigating Agency (CID) ಯಲ್ಲಿ ಕಾನೂನು ಸಲಹೆಗಾರರಾದ ಶ್ರೀ. ಮಹೇಶ್ ವೈದ್ಯ ರವರು ತಮ್ಮ ಅನುಭವದ ಆಧಾರದ ಮೇಲೆ ತನಿಖಾಧಿಕಾರಿಗಳಿಗೆ ಒಂದು ಚೆಕ್ ಲಿಸ್ಟ್ ಹಾಗು NDPS ಕಾನೂನಿನ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳ ಬಗ್ಗೆ ಪಟ್ಟಿಯನ್ನು ತಯಾರು ಮಾಡಿರುತ್ತಾರೆ. ಅವುಗಳನ್ನು ಓದಲು ಈ ಕೆಳಕಂಡ ಲಿಂಕ್ ಗಳನ್ನು ಒತ್ತಿ.

Check list for IO to deal with NDPS cases

Myths and Truths of NDPS

 

Mind Sharing?