Mind Sharing?

ಚಿತ್ರ: ಬೆಂಕಿಯ ಬಲೆ (1983)
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

*********************************************************************************************************************************

ಗಂಡು: ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ…….
ಹೆಣ್ಣು: ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ
ಗಂಡು: ನಿನ್ನ ನಗುವು ಹೂ…ವಂತೆ
ನಿನ್ನ ನುಡಿಯು ಹಾಡಂತೆ….ಹಾ…
ಗಂಡು: ಹರುಷ ಹರುಷ ಎಲ್ಲೆಲ್ಲೂ
ಜೊತೆಗೆ ನೀನಿರೆ
ಹೆಣ್ಣು: ಆ…………ಆ ಆ
ಆ……………..ಆ ಆ
ಸರಸ ಸರಸ ಬಾಳೆಲ್ಲ
ಸನಿಹ ನೀನಿರೆ
ಗಂಡು: ನಿನ್ನ ಮಾತಿಗೆ
ನಿನ್ನ ಪ್ರೇಮಕೆ
ನಾ ಸೋತು ಹೋದೆನು
ಹೆಣ್ಣು: ನಿನ್ನ ಸ್ನೇಹಕೆ
ನಿನ್ನ ಪ್ರೀತಿಗೆ
ಮೂಕಾಗಿ ಹೋದೆನು……
ನನ್ನನ್ನೇ ಮರೆತೆನು
ಗಂಡು: ನಿನ್ನ ನಗುವು ಹೂವಂತೆ
ಹೆಣ್ಣು: ನಿನ್ನ ನುಡಿಯು ಹಾಡಂತೆ
ಗಂಡು: ಬದುಕಿನ ಅನುಕ್ಷಣ
ಗಂಡು+ಹೆಣ್ಣು: ನಮಗೆ ಸಂತೋಷವೇ
ಹೆಣ್ಣು: ನಿನ್ನ ನಗುವು ಹೂವಂತೆ (ಗಂಡು: ಹ ಹ ಹ)
ನಿನ್ನ ನುಡಿಯು ಹಾಡಂತೆ(ಹ್ಹ ಹ್ಹ ಹ್ಹ)
ಹೆಣ್ಣು: ಆ………ಆ ಆ
ಗಂಡು: ಓ……………..ಒಹೋ ಓ
ಗಂಡು+ಹೆಣ್ಣು: ಲಾ ಲ ಲ…..ಲಾ ಲ ಲ
ಹೆಣ್ಣು: ಚೆಲುವ ನಿನ್ನ ನುಡಿ ಕೇಳಿ
ಗಿಣಿಯು ನಾಚಿತು
ಗಂಡು: ಅಹ ಆ………..ಅಹ ಆ
ಒಹೋ ಓ……
ತರರರ….ರಾರಾ
ಚೆಲುವೆ ನಿನ್ನ ನಡೆ ನೋಡಿ
ನವಿಲು ಕುಣಿಯಿತು
ಹೆಣ್ಣು: ನಗುನಗುತ ನೀ ಬರಲು
ಹೊಸ ಆಸೆ ಚಿಮ್ಮಿತು
ಗಂಡು: ನಿನ್ನ ಕಣ್ಣಿನ ಮಿಂಚು ಮೂಡಲು
ಮನವೇಕೋ ಬೆಚ್ಚಿತು
ಜಗವನ್ನೇ ಮರೆಸಿತು…ಹಾ ಹಾ ಆ
ನಿನ್ನ ನಗುವು ಹೂವಂತೆ
ಹೆಣ್ಣು: ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ಗಂಡು+ಹೆಣ್ಣು: ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ನಿನ್ನ ನುಡಿಯು ಹಾಡಂತೆಏಏಏಏಏ
Mind Sharing?