Mind Sharing?

ಚಿತ್ರ: ಬಾ ನಲ್ಲೆ ಮಧುಚಂದ್ರಕೆ (1993)
ಗಾಯಕರು: ಎಸ್.ಪಿ.ಬಿ, ಮಂಜುಳಾ ಗುರುರಾಜ್
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ

**********************************************************************************************************************************

ಹೆಣ್ಣು: ಓಹೊ ಹಿಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಓಹೊ ಹಿಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಓಹೊ ಹಿಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಓಹೊ ಹಿಮಾಲಯ
ಗಂಡು: ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ
ಗಂಡು: ಅಂಬರವೊ ಇಲ್ಲ ಬೆಳ್ಳಿ ಚಪ್ಪರವೊ
ಗುಡ್ಡಗಳೋ ಇಲ್ಲ ಬೆಣ್ಣೆ ಮುದ್ದೆಗಳೊ
ಚಿಲಿಪಿಲಿಯೋ ಇಲ್ಲ ಕಾವ್ಯ ವಾಚನವೊ
ಕಲಕಲವೊ ಇಲ್ಲ ಗಂಗೆ ಗಾಯನವೊ
ಹೆಣ್ಣು: ಅಪ್ಪುಗೆಯೊ ಇಲ್ಲ ಇದು ಒಪ್ಪಿಗೆಯೊ
ಚುಂಬನವೊ ಇಲ್ಲ ಇದು ಬಂಧನವೊ
ಆತುರವೊ ಇಲ್ಲ ಇದು ಕಾತುರವೊ
ಆಸೆಗಳೋ ನಲ್ಲ ನಲ್ಲೆ ಲೀಲೆಗಳೊ
ಗಂಡು: ಜಿಗಿಜಿಗಿವ ಜೋಡಿ ಪ್ರೇಮ ಹೃದಯಗಳು
ಚುಕುಚುಕುಚು ರೈಲನ್ನೇರಿದವು
ಹೆಣ್ಣು: ಗರಿಗರಿಯ ಹಿಮಗಿರಿಯ ಬೆನ್ನಿನಲ್ಲಿ
ಚಳಿ ಚಳಿಯೋ ಎನ್ನುತ ಜಾರಿದವು
ಗಂಡು: ಮೈಸೂರ ಚೆಲುವೆ ನೀನು
ಹೆಣ್ಣು: ಮೈಸೂರ ಚೆಲುವ ನೀನು
ಗಂಡು: ಎನ್ನುತ ಕನ್ನಡ ಕಂಪನು ಬೀರಿದವು ಹಿಮದಲಿ
ಹೆಣ್ಣು: ಓಹೊ ಹಿಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಓಹೊ ಹಿಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ
ಗಂಡು: ನನ್ನವಳೆ ನನ್ನವಳೆ ನನ್ನವಳೆ
ತಂಬೆಲರ ತಂಬೆಲರ ತಂದವಳೇ
ತಂಬೆಲರೆ ಮುಂಗುರುಳ ಕಾಮಿಸಿದೆ
ಮುಂಗುರುಳೆ ಮೊಗವನ್ನು ಮೋಹಿಸಿದೆ
ಹೆಣ್ಣು: ನನ್ನವನೆ ನನ್ನವನೆ ನನ್ನವನೆ
ನನ್ನೆದೆಗೆ ಹುಣ್ಣಿಮೆಯ ತಂದವನೆ
ಹುಣ್ಣಿಮೆಯ ಗಿರಿಯೂರ ತೋರಿಸಿದೆ
ಕಿನ್ನರರ ತವರೂರ ಸೇರಿಸಿದೆ
ಗಂಡು: ಮಾತಿನಲಿ ಮಾಯ ಮಾಡೊ ಮೋಹಿನಿಯು
ಮಾರನಿಗೆ ಸೋತು ಬಿದ್ದಳು
ಹೆಣ್ಣು: ಹೂಗಳ ಬಾಣವನೆಸೆವ ಮನ್ಮಥನು
ಹೂವಿನಲೆ ಜಾರಿ ಬಿದ್ದನು
ಗಂಡು: ಮೈಸೂರ ಚೆಲುವೆ ನೀನು
ಹೆಣ್ಣು: ಮೈಸೂರ ಚೆಲುವ ನೀನು
ಗಂಡು: ಎನ್ನುತ ಕನ್ನಡ ಕಂಪನು ಬೀರಿದವು ಹಿಮದಲಿ
ಹೆಣ್ಣು: ಓಹೊ ಹಿಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಓಹೊ ಹಿಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಓಹೊ ಹಿಮಾಲಯ
ಗಂಡು: ಓಹೊ ಹಿಮಾಲಯ
ಹೆಣ್ಣು: ಓಹೊ ಹಿಮಾಲಯ
ಗಂಡು: ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾ….ಲಯ
Mind Sharing?