Mind Sharing?

ಚಿತ್ರ: ಬೆಂಕಿಯ ಬಲೆ (1983)
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

**********************************************************************************************************************************

ಗಂಡು: ಒಲಿದ ಜೀವ
ಜೊತೆಯಲಿರಲು
ಬಾಳು ಸುಂದರ
ಒಲಿದ ಜೀವ
ಜೊತೆಯಲಿರಲು
ಬಾಳು ಸುಂದರ
ಹೆಣ್ಣು: ವಿಶ್ವವೆಲ್ಲ
ಭವ್ಯವಾದ
ಪ್ರೇಮ ಮಂದಿರ
ಗಂಡು+ಹೆಣ್ಣು: ಒಲಿದ ಜೀವ
ಜೊತೆಯಲಿರಲು
ಬಾಳು ಸುಂದರ
ಗಂಡು: ನಯನ ನಯನ
ಬೆರೆತ ಸಮಯ
ಬಾನಲ್ಲಿ ತೆಲಾಡಿದಂತೆ
ನಯನ ನಯನ
ಬೆರೆತ ಸಮಯ
ಬಾನಲ್ಲಿ ತೆಲಾಡಿದಂತೆ
ಕರವ ಹಿಡಿದಾಗ
ನಗುತ ನಡೆದಾಗ
ಭುವಿಯೇ ಸ್ವರ್ಗದಂತೆ
ಹೆಣ್ಣು: ಸನಿಹ ಕುಳಿತು
ನುಡಿವ ನುಡಿಯು
ಇಂಪಾದ ಹಾಡಿನಂತೆ
ಸನಿಹ ಕುಳಿತು
ನುಡಿವ ನುಡಿಯು
ಇಂಪಾದ ಹಾಡಿನಂತೆ
ಕನಸು ಕಣ್ಣಲ್ಲಿ
ಸೊಗಸು ಎದುರಲ್ಲಿ
ಬದುಕು ಕವಿತೆಯಂತೆ
ಗಂಡು: ಕಣ್ಣೀರು ಪನ್ನೀರ ಹನಿಯಂತೆ
ಹೆಣ್ಣು: ಒಲಿದ ಜೀವ
ಜೊತೆಯಲಿರಲು
ಬಾಳು ಸುಂದರ
ಗಂಡು: ವಿಶ್ವವೆಲ್ಲ
ಭವ್ಯವಾದ
ಪ್ರೇಮ ಮಂದಿರ
ಗಂಡು+ಹೆಣ್ಣು: ಒಲಿದ ಜೀವ
ಜೊತೆಯಲಿರಲು
ಬಾಳು ಸುಂದರ
ಗಂಡು: ಆಹಾಹಾ..ಆಹಾ…ಆ…..
ಹೆಣ್ಣು: ದದ ಪದಪ ಪಪ ಗಪಗ…ಆಆಆ
ಗಂಡು: ಪಗದ ಪಗದ ಪಗದ ಪಗದ
ಹೆಣ್ಣು: ಆ…ಆ…ಆ…
ಗಂಡು: ಆ..ಆ….ಆ…
ಹೆಣ್ಣು: ಉರಿವ ಬಿಸಿಲ
ಸುರಿವ ರವಿಯೇ
ತಂಪಾದ ಚಂದ್ರನಂತೆ
ಉರಿವ ಬಿಸಿಲ
ಸುರಿವ ರವಿಯೇ
ತಂಪಾದ ಚಂದ್ರನಂತೆ
ತುಳಿದ ಮುಳ್ಳೆಲ್ಲ
ಅರಳಿ ಹೂವಂತೆ
ಹಾದಿ ಮೆತ್ತೆಯಂತೆ
ಗಂಡು: ಆಆಆ
ಹೆಣ್ಣು: ಆಆಆಅ
ಗಂಡು: ಆಆಆ
ಹೆಣ್ಣು: ಆಆಆಅ
ಗಂಡು: ಮೊಗದಿ ಹರಿವ
ಬೆವರ ಹನಿಯು
ಒಂದೊಂದು ಮುತ್ತಿನಂತೆ
ಮೊಗದಿ ಹರಿವ
ಬೆವರ ಹನಿಯು
ಒಂದೊಂದು ಮುತ್ತಿನಂತೆ
ಏನೋ ಉಲ್ಲಾಸ
ಏನೋ ಸಂತೋಷ
ಮರೆತು ಎಲ್ಲ ಚಿಂತೆ
ಹೆಣ್ಣು: ಒಲವಿಂದ ದಿನ ಒಂದು ಕ್ಷಣದಂತೆ
ಗಂಡು: ಒಲಿದ ಜೀವ
ಜೊತೆಯಲಿರಲು
ಬಾಳು ಸುಂದರ
ಹೆಣ್ಣು: ವಿಶ್ವವೆಲ್ಲ ಭವ್ಯವಾದ
ಪ್ರೇಮ ಮಂದಿರ
ಗಂಡು+ಹೆಣ್ಣು: ಒಲಿದ ಜೀವ
ಜೊತೆಯಲಿರಲು
ಬಾಳು ಸುಂದರ
ಗಂಡು: ಈ ಬಾಳು ಸುಂದರ
ಹೆಣ್ಣು: ಈ ಬಾಳು ಸುಂದರ(ಗಂಡು: ರ…..)
Mind Sharing?