Mind Sharing?

ಚಿತ್ರಃ ಜನ್ಮ ಜನ್ಮದ ಅನುಬಂಧ (1980)
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಮ್, ಎಸ್.ಜಾನಕಿ
ಸಂಗೀತ: ಇಳಯರಾಜ
ಸಾಹಿತ್ಯ: ಚಿ॥ ಉದಯಶಂಕರ್

***************************************************************************************

ಗಂಡು: ಪಾಬಪ್ ಪಬಬಬಾಆಆಆಆಆಆ
ಯಾವ ಶಿಲ್ಪಿ ಕಂಡ ಕನಸು ನೀನು
ಯಾವ ಕವಿಯ ಪ್ರೇಮಗೀತೆ ನೀನು
ಇಂಥ ಅಂದವನ್ನು (ಹೆಣ್ಣು: ಹೇ..ಎ..ಎ..)
ಎಂದು ಕಾಣೆ ನಾನು
ಇಂಥ ಅಂದವನ್ನು(ಹೆಣ್ಣು: ಹೇ..ಎ..ಎ..)
ಎಂದು ಕಾಣೆ ನಾನು
ಇನ್ನು ಎಂದು ಬಿಡೆನು ನಿನ್ನನೂಊಊಊಊಊ
ಪಾಬಪ್ ಪಬಬಬಾ
ಯಾವ ಶಿಲ್ಪಿ ಕಂಡ ಕನಸು ನೀನು
ಗಂಡು: ನನಗಾಗಿ ಬಂತು ತಾವರೆ ಹೆಣ್ಣಾಗಿ (ಹೆಣ್ಣು: ಅರೆ..ರೆ..ರೆ)
ಸೊಗಸಾದ ಜೋಡಿ ನೈದಿಲೆ ಕಣ್ಣಾಗಿ (ಹೆಣ್ಣು: ಅರೆ..ರೆ..ರೆ)
ನಡೆಯೂ ಸೊಗಸು
ನುಡಿಯೂ ಸೊಗಸು
ಬಯಕೆ ತುಂಬಿದೆ
ಮನವಾ ಸೇರಿದೆ
ಹೆಣ್ಣು: ನಿನ್ನ ಮಾತು ಕೇಳಿ ಸೋತೆ…..ಪಾಬಪ್ ಪಬಬಬಾಆಆಆಆಆಆ
ಪಾಬಪ್ ಪಬಬಬಾ..ಆ
ನೂರು ಜನ್ಮ ಬಂದರೇನು ನನಗೆ
ನೀನೇ ನನ್ನ ಬಾಳ ಗೆಳೆಯ ಕೊನೆಗೆ
ನನ್ನ ಜೀವ ನೀನು (ಗಂಡು: ಹೇ..ಎ..ಎ..)
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನೂಊಊಊಊಊ
ಹೆಣ್ಣು: ಆಆಆಆಆ……..ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ (ಗಂಡು: ಅರೆ..ರೆ..ರೆ)
ನೀನಾಡೋ ಮಾತು ಜೇನಿನ ಸವಿಯಂತೆ (ಗಂಡು: ಅರೆ..ರೆ..ರೆ)
ಒಲವಾ ಸುರಿವಾ
ನಿನ್ನಾ ನುಡಿಗೆ
ಕರಗಿ ಹೋದೆನು
ಒಲಿದು ಬಂದೆನು
ಗಂಡು: ಸಾಕು ಇನ್ನು ನನಗೆ ನಲ್ಲೆ…. ಪಾಬಪ್ ಪಬಬಬಾಆಆಆಆಆ
ಪಾಬಪ್ ಪಬಬಬಾ
ಯಾವ ಶಿಲ್ಪಿ ಕಂಡ ಕನಸು ನೀನು
ಯಾವ ಕವಿಯ ಪ್ರೇಮಗೀತೆ ನೀನು
ಹೆಣ್ಣು: ನನ್ನ ಜೀವ ನೀನು (ಗಂಡು: ಹೇ..ಎ..ಎ..)
ನಿನ್ನ ಪ್ರಾಣ ನಾನು
ನನ್ನ ಜೀವ ನೀನು (ಗಂಡು: ಹೇ..ಎ..ಎ..)
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನೂಊಊಊಊಊ
ಗಂಡು: ಪಾಬಪ್ ಪಬಬಬಾ
ಯಾವ ಶಿಲ್ಪಿ…
ಯಾವ ಶಿಲ್ಪಿ…
ಯಾವ ಶಿಲ್ಪಿ…
Mind Sharing?