Mind Sharing?

ಆಕಳಿಕೆ ಬರಲು ಕಾರಣಗಳು ಮತ್ತು ಆಕಳಿಕೆ ಬಗ್ಗೆ ಕೆಲವು ಆಸಕ್ತಿದಾಯಕ ವಿಶೇಷಗಳು

 

ಆಕಳಿಕೆ ಎಂದರೇನು?  

                 ಆಕಳಿಕೆ ಎಂಬುದು ನಮ್ಮ ಬಾಯಿಯನ್ನು ತೆರೆಯುವುದು, ಬಾಯಿಯಿಂದ ಗಾಳಿಯನ್ನು ಒಳಕ್ಕೆ ಎಳೆದುಕೊಳ್ಳುವುದು, ದವಡೆ ತೆರೆಯುವುದು, ಕಿವಿಗಳನ್ನು ವಿಸ್ತರಿಸುವುದು, ಶ್ವಾಸಕೋಶವನ್ನು ಗಾಳಿಯಿಂದ ತುಂಬುವುದು ಮತ್ತು ಗಾಳಿಯನ್ನು ಹೊರಕ್ಕೆ ಬಿಡುವುದು, ಈ ಎಲ್ಲ ಕ್ರಿಯೆಗಳನ್ನು ಹೊಂದಿದೆ.

ನಾವು ಯಾಕೆ ಆಕಳಿಸುತ್ತೇವೆ?

              ಆಕಳಿಕೆ ಏಕೆ ಸಂಭವಿಸುತ್ತದೆ ಎಂಬುದನ್ನು ಇದುವರೆವಿಗೂ ಯಾವುದೇ ಸಂಶೋಧನೆಯು ಖಚಿತವಾಗಿ ತಿಳಿದಿಲ್ಲ, ಆದರೆ ಆಕಳಿಕೆ ಬರಲು ದೈಹಿಕ ಮತ್ತು ಮಾನಸಿಕ ಕಾರಣಗಳು ಇರುತ್ತವೆ.

ದೈಹಿಕ ಕಾರಣಗಳು:

        ಅರೆನಿದ್ರಾವಸ್ಥೆ, ದಣಿವು ಅಥವಾ ಆಯಾಸ ಮತ್ತು ಬೇಸರಗಳು ಆಕಳಿಕೆಯನ್ನು ಸಾಮಾನ್ಯವಾಗಿ ಉಂಟುಮಾಡುವ ಪ್ರಚೋದಕಗಳಲ್ಲಿ ಸೇರಿವೆ. ಇವುಗಳಲ್ಲದೆ ನಿದ್ರೆಯ ಅಸ್ವಸ್ಥತೆಗಳು, ಖಿನ್ನತೆ ಅಥವಾ ಆತಂಕಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳ ಅಡ್ಡಪರಿಣಾಮಗಳು, ಹಸಿವು ಮುಂತಾದವುಗಳು ಸಹ ಕಾರಣೀಭೂತವಾಗಿವೆ.

ಮಾನಸಿಕ ಕಾರಣಗಳು:

ನಾವು ಆಕಳಿಕೆ ಬಗ್ಗೆ ಮಾತನಾಡುವಾಗ ಅಥವಾ ಬೇರೊಬ್ಬರ ಆಕಳಿಕೆ ನೋಡಿದಾಗ ಅಥವಾ ಕೇಳಿದಾಗ ಅಥವಾ ಫೋನ್‌ನಲ್ಲಿ ಆಕಳಿಸುತ್ತಿರುವ ಯಾರೊಂದಿಗಾದರೂ ಮಾತನಾಡಿದಾಗ ನಮಗೂ ಆಕಳಿಕೆ ಬರುವುದು ಸಹಜವಾಗಿದೆ.

ವೈಜ್ಞಾನಿಕ ಕಾರಣಗಳು:

 1) ಕೆಲವು ಸಂಶೋಧಕರು ಆಕಳಿಕೆಯು ನಮ್ಮ ಮಿದುಳನ್ನು ತಣ್ಣಗಾಗಿಸುತ್ತಿದ್ದೇವೆ ಮತ್ತು ನಮ್ಮ ಏಕಾಗ್ರತೆಯನ್ನು ಕೇಂದ್ರೀಕರಿಸಲು ಸೂಕ್ತವಾದ ದೈಹಿಕ ತಾಪಮಾನವನ್ನು ನೀಡುತ್ತದೆ ಎಂದು ಪ್ರತಿಪಾದಿಸುತ್ತಾರೆ. ಜೋರ್ಗ್ ಮಾಸೆನ್ ಎಂಬ ಸಂಶೋಧಕ ಮತ್ತು ಆತನ ಸಂಶೋಧನಾ ತಂಡವು ಪ್ರಚೋದನೆ ಮತ್ತು ಮಾನಸಿಕ ದಕ್ಷತೆಯನ್ನು ಸಾಧಿಸುವ ಸಲುವಾಗಿ ಆಕಳಿಕೆಗಳು ಮೆದುಳನ್ನು ತಂಪಾಗಿಸುತ್ತವೆ ಮತ್ತು ಸಾಂಕ್ರಾಮಿಕ ಆಕಳಿಕೆ ಗುಂಪು ಜಾಗರೂಕತೆಯನ್ನು ಸುಧಾರಿಸುತ್ತದೆ ಎಂದು ಕಂಡುಹಿಡಿದಿದೆ.
2) ಇತರ ಕೆಲವು ಸಂಶೋಧಕರು ನಾವು ಆಕಳಿಸುವುದರಿಂದ ನಮ್ಮ ರಕ್ತಪ್ರವಾಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಿ ರಕ್ತ ಹಾಗು ದೇಹವನ್ನು ಸ್ವಚ್ಛಗೊಳಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಆಕಳಿಕೆ ಮತ್ತು ಕೆಲವು ಆಸಕ್ತಿದಾಯಕ ವಿಶೇಷಗಳು:

 

1) ನಾವು ಆಕಳಿಸಿದಾಗ ಕಣ್ಣಿನಿಂದ ನೀರು ಬರುತ್ತದೆ. ನಾವು ಆಕಳಿಸುವಾಗ, ನಮ್ಮ ದವಡೆಯನ್ನು ವಿಸ್ತರಿಸುತ್ತೇವೆ, ಅದು ಕಣ್ಣುಗುಡ್ಡೆ ಮತ್ತು ಕಣ್ಣುರೆಪ್ಪೆಗಳ ನಡುವಿನ ಜಾಗದಲ್ಲಿ ನಾಳಗಳನ್ನು ಹೊಂದಿರುವ ಲ್ಯಾಕ್ರಿಮಲ್ ಗ್ರಂಥಿ ಎಂದು ಕರೆಯಲ್ಪಡುವ ಗ್ರಂಥಿಯ ಮೇಲೆ ಒತ್ತಡವನ್ನು ಹೇರುತ್ತದೆ. ನಮಗೆ ಕಣ್ಣೀರು ಬರಲು ಲ್ಯಾಕ್ರಿಮಲ್ ಗ್ರಂಥಿ ಕಾರಣ
2) ನಾವು ಆಕಳಿಸಿದಾಗ ನಮ್ಮ ಶ್ರವಣ ಸಾಮರ್ಥ್ಯವು ಕುಂಠಿತವಾಗುತ್ತದೆ. ನಮ್ಮ ಸುತ್ತಲಿನ ಪ್ರಪಂಚವು ಶಬ್ದವನ್ನು ಕಡಿಮೆ ಮಾಡಿಕೊಂಡ ಹಾಗೆ ಭಾಸವಾಗುತ್ತದೆ
3) ಮಾನವರಲ್ಲಿ ಆಕಳಿಕೆಯ ಸರಾಸರಿ ಸಮಯ ಸುಮಾರು ಆರು ಸೆಕೆಂಡುಗಳು. ಪ್ರಪಂಚದ ಯಾವುದೇ ಮೂಲೆಗೆ ಹೋದರು ಈ ಸರಸರಿಯು ಮಾನ್ಯವಾಗಿದೆ.
4) ಜನರು ಚಳಿಗಾಲದಲ್ಲಿ ಹೆಚ್ಚು ಆಕಳಿಸುತ್ತಾರೆ. ಹೊರಗಿನ ಗಾಳಿಯು ತಂಪಾಗಿರುವಾಗ ನಮ್ಮ ಆಕಳಿಕೆ ಹೆಚ್ಚಾಗುತ್ತದೆ
5) ಬೇರೆ ಎಲ್ಲ ಕಾರಣಗಳಿಗಿಂತಲೂ ಜನರು ಬೇಸರಗೊಂಡಾಗ ಹೆಚ್ಚು ಆಕಳಿಸುತ್ತಾರೆ
6) ಗರ್ಭಕೋಶದಲ್ಲಿ ಇರುವ ಭ್ರೂಣವು ಸಹ ಆಕಳಿಸುತ್ತದೆ. ಗರ್ಭಿಣಿಯರ ಸ್ಕ್ಯಾನಿಂಗ್ ಸಮಯದಲ್ಲಿ ಇದನ್ನು ನೋಡಬಹುದು
7) ಆಕಳಿಕೆ ಒಂದು ರೀತಿಯ ಸಾಂಕ್ರಾಮಿಕ. ವಿಜ್ಞಾನಿಗಳ ಪ್ರಕಾರ, ಸುಮಾರು 60-70 ಪ್ರತಿಶತದಷ್ಟು ಜನರಲ್ಲಿ ಆಕಳಿಕೆಗಳು ಸಾಂಕ್ರಾಮಿಕವಾಗಿವೆ. ಮನುಷ್ಯನ ಕಲಿಕೆಯನ್ನು ನೋಡುವ ಪ್ರಾಣಿಗಳು ಸಹ ಆಕಳಿಸಲು ಪ್ರಾರಂಭಿಸುತ್ತವೆ
8) ನಾವು ಆಕಳಿಸಿದರೆ ನಮ್ಮ ಸಂಪೂರ್ಣ ದೇಹವು ಆಕಳಿಸುತ್ತದೆ. ನಾವು ಆಕಳಿಸಿದಾಗ ಕೇವಲ ನೀವು ಬಾಯಿ ತೆರೆದು ಗಾಳಿಯನ್ನು ಬಿಡುವುದಿಲ್ಲ ಆ ಸಮಯದಲ್ಲಿ ನಮ್ಮ ಮೆದುಳು ತಣ್ಣಗಾಗಲು ಪ್ರಯತ್ನಿಸುವುದಕ್ಕೆ ನಿಮ್ಮ ಇಡೀ ದೇಹವು ಪ್ರತಿಕ್ರಿಯೆಯನ್ನು ತೋರಿಸುತ್ತದೆ.
9) ನಾವು ಆಕಳಿಸಿದಾಗ ನಮ್ಮ ಮೆದುಳು ಡೋಪಮೈನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಕೆಲವು ಕ್ರೀಡಾಪಟುಗಳು, ಸಾರ್ವಜನಿಕ ಭಾಷಣಕಾರರು ಮತ್ತು ಕೆಲವು ಜವಾಬ್ದಾರಿಯುತ ಕೆಲಸವನ್ನು ಮಾಡಲು ಹೋಗುವವರು ಮುಂಚಿತವಾಗಿ ಒತ್ತಾಯಪೂರ್ವಕವಾಗಿ ಆಕಳಿಸುವುದನ್ನು ನೋಡಬಹುದು
10) ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಆಕಳಿಸುತ್ತಾರೆ. 2016 ನೇ ಇಸವಿಯಲ್ಲಿ ರಾಯಲ್ ಸೊಸೈಟಿ ಓಪನ್ ಸೈನ್ಸ್ ಜರ್ನಲ್ ನಲ್ಲಿ ಪ್ರಕಟಗೊಂಡ ಇಟಲಿಯಲ್ಲಿ ನಡೆದ ಅಧ್ಯಯನದ ಪ್ರಕಟಣೆಯು ಇದನ್ನು ಸಾಬೀತು ಮಾಡಿದೆ
11) ನೀವು ಆಕಳಿಸದಿದ್ದರೆ, ನೀವು ಮನೋರೋಗಿಯಾಗಿರಬಹುದು.
12) ಕೀಟಗಳು ಆಕಳಿಸುವುದಿಲ್ಲ. ಕೀಟಗಳಿಗೆ ಶ್ವಾಸಕೋಶ ಇಲ್ಲದ ಕಾರಣ ಅವುಗಳು ಆಕಳಿಸುವುದಿಲ್ಲ.
13) ಆಕಳಿಕೆ ಬಗ್ಗೆ ಓದುವುದರಿಂದ ನಮಗೆ ಆಕಳಿಕೆ ಬರಬಹುದು.
14) 2016 ರಲ್ಲಿ ಟೋಕಿಯೊ ವಿಶ್ವವಿದ್ಯಾಲಯದ ಸಂಶೋಧಕರು ನಮ್ಮ ನಾಯಿ ಆಕಳಿಸಿದಾಗ ಅದು ನಿಮಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಿರಬಹುದು ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ.

ವಿ.ಸೂ:       ಈ ಲೇಖನವನ್ನು ಬರೆಯುವಾಗ ನಾನು ಸಹ 2 ಗಂಟೆಗಳ ಅವಧಿಯಲ್ಲಿ 36 ಬಾರಿ ಆಕಳಿಸಿದ್ದೇನೆ

Mind Sharing?