Mind Sharing?
                     ‘ಫೋಬಿಯಾ’ ಎಂಬ ಪದದ ಅರ್ಥವೇನೆಂದರೆ ಮಾನವನ ಮನಸ್ಸಿನಲ್ಲಿ ಉಂಟಾಗುವ ಯಾವುದೋ ಒಂದು ವಿಪರೀತ ಅಥವಾ ಆಕಾರಣವಾದ ಭಯ. ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನು ಒಂದಿಲ್ಲೊಂದು ವಿಷಯಕ್ಕೆ ಭಯಪಡುತ್ತಾನೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ಫೋಬಿಯ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ಮನುಷ್ಯನು ತನಗೆ ಅರಿವಿಲ್ಲಂತೆ ಕೆಲವೊಂದು ವಸ್ತುವಿಗೆ ಅಥವಾ ಪ್ರಾಣಿಗೆ ಅಥವಾ ಸಂಗತಿಗಳಿಗೆ ಭಯಪಡುತ್ತಾನೆ. ಉದಾಹರಣೆಗೆ ಒಬ್ಬ ವ್ಯಕ್ತಿ ವಿಮಾನದಲ್ಲಿ ಹಾರಾಟ ನಡೆಸಲು ಭಯಪಡಬಹುದು, ಮತ್ತೊಬ್ಬ ವ್ಯಕ್ತಿ ಜನಜಂಗುಳಿ ನೋಡಿದರೆ ಭಯ ಪಡಬಹುದು, ಇನ್ನೊಬ್ಬ ವ್ಯಕ್ತಿ ಎತ್ತರದ ಸ್ಥಳಕ್ಕೆ ಹೋಗಲು ಭಯಪಡಬಹುದು. ಹೀಗೆ ಪ್ರತಿಯೊಬ್ಬ ವ್ಯಕ್ತಿಯು ಯಾವುದಾದರೂ ವಿಷಯಕ್ಕೆ ಭಯ ಹೊಂದಿರುತ್ತಾನೆ. ಕೆಲವರಿಗೆ ತಮ್ಮ ಭಯದ ಬಗ್ಗೆ ಅರಿವು ಇರುತ್ತದೆ ಮತ್ತೆ ಕೆಲವರು ತಮ್ಮ ಅಂತರಂಗದಲ್ಲಿ ಯಾವ ರೀತಿಯ ಭಯ ಇದೆ ಎಂಬುದನ್ನು ಅರಿಯಲು ಸಮಯ ತೆಗೆದುಕೊಳ್ಳುತ್ತಾರೆ. ಅಂತಿಮವಾಗಿ ಇವೆಲ್ಲ ವ್ಯಕ್ತಿತ್ವ ಅಸ್ವಸ್ಥತೆಗಳು, ಆತಂಕದ ಕಾಯಿಲೆಗಳು ಮತ್ತು ಸನ್ನಿವೇಶ ತಪ್ಪಿಸುವ ವ್ಯಕ್ತಿತ್ವ ಅಸ್ವಸ್ಥತೆಗಳು ಆಗಿವೆ.
ಫೋಬಿಯ ಅಥವಾ ಭಯವು ಮಾನಸಿಕ ಖಾಯಿಲೆಯಾಗಿದ್ದು ಕೆಲವರಿಗೆ ಕೇವಲ ಕೌಂಸೆಲ್ಲಿಂಗ್ ನಡೆಸಿ ಗುಣಪಡಿಸಬಹುದು ಮತ್ತೆ ಕೆಲವರಿಗೆ ಮಾನಸಿಕ ಚಿಕಿತ್ಸೆಯನ್ನು ನೀಡಿ ಸರಿಪಡಿಸಬಹುದು. ಮತ್ತೆ ಕೆಲವರಲ್ಲಿ ಇದು ಇದ್ದರು ಯಾವುದೇ ರೀತಿಯಲ್ಲಿ ಬಾಹ್ಯ ಲಕ್ಷಣಗಳನ್ನು ತೋರಿಸದಿರುವುದರಿಂದ ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ.
ಪ್ರಪಂಚದಾದ್ಯಂತ ಸಂಶೋಧಕರು ಹಾಗು ವೈದ್ಯರು ನೂರಾರು ರೀತಿಯ ಮಾನಸಿಕ ಭಯ ಅಥವಾ ಫೋಬಿಯ ಗಳನ್ನು ಪಟ್ಟಿಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಕೆಲವೊಂದು ಫೋಬಿಯಾಗಳನ್ನು ತಮಗೆ ಈ ಕೆಳಗೆ ನೀಡಿದ್ದೇನೆ. ಈ ಪಟ್ಟಿಯಲ್ಲಿರುವ ಫೋಬಿಯಾಗಳನ್ನು ನೋಡಿದರೆ ಭೂಮಿ ಮೇಲೆ ಜನಿಸಿರುವ ಪ್ರತಿಯೊಬ್ಬ ವ್ಯಕ್ತಿಯು ಒಂದಿಲ್ಲೊಂದು ಫೋಬಿಯಾವನ್ನು ಹೊಂದಿಯೇ ಇರುತ್ತಾನೆ ಎಂಬುದು ಮನದಟ್ಟಾಗುತ್ತದೆ.

ವಿವಿಧ ಫೋಬಿಯಾಗಳನ್ನು ಅಥವಾ ಭಯಗಳನ್ನು ಸಾಮಾನ್ಯವಾಗಿ ಐದು ಸಾಮಾನ್ಯ ವರ್ಗಗಳಲ್ಲಿ ವಿಂಗಡಿಸಲಾಗಿದೆ

1) ಪ್ರಾಣಿಗಳಿಗೆ ಸಂಬಂಧಿಸಿದ ಭಯಗಳು (ಜೇಡಗಳು, ನಾಯಿಗಳು, ಕೀಟಗಳು)
2) ನೈಸರ್ಗಿಕ ಪರಿಸರಕ್ಕೆ ಸಂಬಂಧಿಸಿದ ಭಯಗಳು (ಎತ್ತರ, ಗುಡುಗು, ಕತ್ತಲೆ)
3) ರಕ್ತ, ಗಾಯ ಅಥವಾ ವೈದ್ಯಕೀಯ ಸಮಸ್ಯೆಗಳಿಗೆ ಸಂಬಂಧಿಸಿದ ಭಯಗಳು (ಚುಚ್ಚುಮದ್ದು, ಮೂಳೆ ಮುರಿಯುವಿಕೆ, ಬೀಳುವಿಕೆ)
4) ನಿರ್ದಿಷ್ಟ ಸಂದರ್ಭಗಳಿಗೆ ಸಂಬಂಧಿಸಿದ ಭಯಗಳು (ವಿಮಾನದಲ್ಲಿ ಹಾರಾಡುವುದು, ಎಲಿವೇಟರ್ ಸವಾರಿ, ವಾಹನ ಚಾಲನೆ)
5) ಇತರೆ (ಉಸಿರುಗಟ್ಟಿಸುವಿಕೆ, ದೊಡ್ಡ ಶಬ್ದಗಳು, ನೀರಿನಲ್ಲಿ ಮುಳುಗುವುದು)

ಕೆಲವು ಸಾಮಾನ್ಯ ಫೋಬಿಯಾಗಳ ಪಟ್ಟಿ

1) ಅಕ್ಲುವೊಫೋಬಿಯಾ (Achluophobia) – ಕತ್ತಲೆಯ ಭಯ
2) ಅಕ್ರೊಫೋಬಿಯಾ (Acrophobia) – ಎತ್ತರಗಳ ಭಯ
3) ಏರೊಫೋಬಿಯಾ (Aerophobia )- ಹಾರಾಟದ ಭಯ
4) ಅಲ್ಗೋಫೋಬಿಯಾ(Algophobia) – ನೋವಿನ ಭಯ
5) ಅಗೋರಾಫೋಬಿಯಾ(Agoraphobia) – ತೆರೆದ ಸ್ಥಳಗಳು ಅಥವಾ ಜನಸಂದಣಿಯ ಭಯ
6) ಐಕ್ಮೋಫೋಬಿಯಾ(Aichmophobia) – ಸೂಜಿಗಳು ಅಥವಾ ಮೊನಚಾದ ವಸ್ತುಗಳ ಭಯ
7) ಅಮಾಕ್ಸೋಫೋಬಿಯಾ(Amaxophobia) – ಕಾರಿನಲ್ಲಿ ಸವಾರಿ ಮಾಡುವ ಭಯ
8) ಆಂಡ್ರೊಫೋಬಿಯಾ(Androphobia) – ಪುರುಷರ ಭಯ
9) ಆಂಜಿನೋಫೋಬಿಯಾ(Anginophobia) – ಆಂಜಿನಾ ಅಥವಾ ಉಸಿರುಗಟ್ಟಿಸುವ ಭಯ
10) ಆಂಥ್ರೊಫೋಬಿಯಾ(Anthrophobia) – ಹೂವುಗಳ ಭಯ
11) ಮಾನವಶಾಸ್ತ್ರ(Anthropophobia) – ಜನರು ಅಥವಾ ಸಮಾಜದ ಭಯ
12) ಅಫೆನ್‌ಫಾಸಮ್ ಫೋಬಿಯಾ(Aphenphosmphobia) – ಯಾರಾದರೂ ಮುಟ್ಟುವ ಭಯ
13) ಅರಾಕಿಬುಟೈರೋಫೋಬಿಯಾ(Arachibutyrophobia) – ಕಡಲೆಕಾಯಿ ಬೆಣ್ಣೆಯ ಭಯ
14) ಅರಾಕ್ನೋಫೋಬಿಯಾ(Arachnophobia) – ಜೇಡಗಳ ಭಯ
15) ಅರಿತ್ಮೋಫೋಬಿಯಾ(Arithmophobia) – ಸಂಖ್ಯೆಗಳ ಭಯ
16) ಅಸ್ಟ್ರಾಫೋಬಿಯಾ(Astraphobia) – ಗುಡುಗು ಮತ್ತು ಮಿಂಚಿನ ಭಯ
17) ಅಟಾಕ್ಸೊಫೋಬಿಯಾ(Ataxophobia) – ಅಸ್ವಸ್ಥತೆ ಅಥವಾ ಅಸಹ್ಯತೆಯ ಭಯ
18) ಅಟೆಲೋಫೋಬಿಯಾ(Atelophobia) – ಅಪೂರ್ಣತೆಯ ಭಯ
19) ಅಟಿಚಿಫೋಬಿಯಾ(Atychiphobia) – ವೈಫಲ್ಯದ ಭಯ
20) ಆಟೊಮ್ಯಾಟೋನೊಫೋಬಿಯಾ(Automatonophobia) – ಮಾನವ-ರೀತಿಯ ವ್ಯಕ್ತಿಗಳ ಭಯ
21) ಆಟೋಫೋಬಿಯಾ(Autophobia) – ಒಬ್ಬಂಟಿಯಾಗಿರುವ ಭಯ
22) ಬ್ಯಾಕ್ಟೀರಿಯೊಫೋಬಿಯಾ(Bacteriophobia) – ಬ್ಯಾಕ್ಟೀರಿಯಾದ ಭಯ
23) ಬಾರೋಫೋಬಿಯಾ(Barophobia) – ಗುರುತ್ವಾಕರ್ಷಣೆಯ ಭಯ
24) ಬಾತ್ಮೋಫೋಬಿಯಾ(Bathmophobia) – ಮೆಟ್ಟಿಲುಗಳು ಅಥವಾ ಕಡಿದಾದ ಇಳಿಜಾರುಗಳ ಭಯ
25) ಬಾಟ್ರಾಕೋಫೋಬಿಯಾ(Batrachophobia) – ಉಭಯವಾಸಿ ಪ್ರಾಣಿಗಳ ಭಯ
26) ಬೆಲೋನೆಫೋಬಿಯಾ(Belonephobia) – ಪಿನ್ನುಗಳು ಮತ್ತು ಸೂಜಿಗಳ ಭಯ
27) ಬಿಬ್ಲಿಯೊಫೋಬಿಯಾ(Bibliophobia) – ಪುಸ್ತಕಗಳ ಭಯ
28) ಬಟಾನೊಫೋಬಿಯಾ(Botanophobia) – ಸಸ್ಯಗಳ ಭಯ
29) ಕ್ಯಾಕೊಫೋಬಿಯಾ(Cacophobia) – ಕೊಳಕು ಭಯ
30) ಕ್ಯಾಟಜೆಲೋಫೋಬಿಯಾ(Catagelophobia) – ಅಪಹಾಸ್ಯಕ್ಕೊಳಗಾಗುವ ಭಯ
31) ಕ್ಯಾಟೊಪ್ಟ್ರೋಫೋಬಿಯಾ(Catoptrophobia) – ಕನ್ನಡಿಗಳ ಭಯ
32) ಶಿಯೋನೋಫೋಬಿಯಾ(Chionophobia) – ಹಿಮದ ಭಯ
33) ಕ್ರೋಮೋಫೋಬಿಯಾ(Chromophobia) – ಬಣ್ಣಗಳ ಭಯ
34) ಕ್ರೊನೊಮೆಂಟ್ರೋಫೋಬಿಯಾ(Chronomentrophobia) – ಗಡಿಯಾರಗಳ ಭಯ
35) ಕ್ರೊನೊಫೋಬಿಯಾ(Chronophobia) – ಸಮಯದ ಭಯ
36) ಕ್ಲಾಸ್ಟ್ರೋಫೋಬಿಯಾ(Claustrophobia) – ಸೀಮಿತ ಸ್ಥಳಗಳ ಭಯ
37) ಕೂಲ್ರೋಫೋಬಿಯಾ(Coulrophobia) – ಕೋಡಂಗಿಗಳ ಭಯ
38) ಸೈಬರ್ ಫೋಬಿಯಾ(Cyberphobia) – ಕಂಪ್ಯೂಟರ್‌ಗಳ ಭಯ
39) ಸೈನೋಫೋಬಿಯಾ(Cynophobia) – ನಾಯಿಗಳ ಭಯ
40) ಡೆಂಡ್ರೊಫೋಬಿಯಾ(Dendrophobia) – ಮರಗಳ ಭಯ
41) ಡೆಂಟೋಫೋಬಿಯಾ(Dentophobia) – ದಂತವೈದ್ಯರ ಭಯ
42) ಡೊಮಾಟೊಫೋಬಿಯಾ(Domatophobia) – ಮನೆಗಳ ಭಯ
43) ಡಿಸ್ಟೈಚಿಫೋಬಿಯಾ(Dystychiphobia) – ಅಪಘಾತಗಳ ಭಯ
44) ಇಕೋಫೋಬಿಯಾ(Ecophobia) – ಮನೆಯ ಭಯ
45) ಎಲುರೊಫೋಬಿಯಾ(Elurophobia) – ಬೆಕ್ಕುಗಳ ಭಯ
46) ಎಂಟೊಮೊಫೋಬಿಯಾ(Entomophobia) – ಕೀಟಗಳ ಭಯ
47) ಎಫೆಬಿಫೋಬಿಯಾ(Ephebiphobia) – ಹದಿಹರೆಯದವರ ಭಯ
48) ಈಕ್ವಿನೋಫೋಬಿಯಾ(Equinophobia) – ಕುದುರೆಗಳ ಭಯ
49) ಗ್ಯಾಮೋಫೋಬಿಯಾ(Gamophobia) – ಮದುವೆಯ ಭಯ
50) ಜೆನುಫೋಬಿಯಾ(Genuphobia) – ಮೊಣಕಾಲುಗಳ ಭಯ
51) ಗ್ಲೋಸೊಫೋಬಿಯಾ(Glossophobia) – ಸಾರ್ವಜನಿಕವಾಗಿ ಮಾತನಾಡುವ ಭಯ
52) ಗೈನೋಫೋಬಿಯಾ(Gynophobia) – ಮಹಿಳೆಯರ ಭಯ
53) ಹ್ಯಾಫೆಫೋಬಿಯಾ(Haphephobia) – ಸ್ಪರ್ಶದ ಭಯ
54) ಹೀಲಿಯೊಫೋಬಿಯಾ(Heliophobia) – ಸೂರ್ಯನ ಭಯ
55) ಹಿಮೋಫೋಬಿಯಾ(Hemophobia) – ರಕ್ತದ ಭಯ
56) ಹರ್ಪೆಟೊಫೋಬಿಯಾ(Herpetophobia) – ಸರೀಸೃಪಗಳ ಭಯ
57) ಹಿಪೋಪಾಟೊಮೊನ್ಸ್ಟ್ರೋಸೆಸ್ಕ್ವಿಪೆಡಾಲಿಯೊಫೋಬಿಯಾ (Hippopotomonstrosesquipedaliophobia ) – ದೀರ್ಘ ಪದಗಳ ಭಯ
58) ಹೈಡ್ರೋಫೋಬಿಯಾ(Hydrophobia) – ನೀರಿನ ಭಯ
59) ಹೈಪೋಕಾಂಡ್ರಿಯಾ(Hypochondria) – ಅನಾರೋಗ್ಯದ ಭಯ
60) ಐಟ್ರೊಫೋಬಿಯಾ(Iatrophobia) – ವೈದ್ಯರ ಭಯ
70) ಇನ್ಸೆಕ್ಟೋಫೋಬಿಯ(Insectophobia) – ಕೀಟಗಳ ಭಯ
71) ಕೊಯೊನಿಫೋಬಿಯಾ(Koinoniphobia) – ಕೊಠಡಿಗಳ ಭಯ
72) ಕೌಂಪೌನೋಫೋಬಿಯಾ(Koumpounophobia) – ಗುಂಡಿಗಳ ಭಯ
73) ಲ್ಯುಕೋಫೋಬಿಯಾ(Leukophobia) – ಬಿಳಿ ಬಣ್ಣದ ಭಯ
74) ಲಿಲಾಪ್ಸೋಫೋಬಿಯಾ(Lilapsophobia) – ಸುಂಟರಗಾಳಿ ಮತ್ತು ಚಂಡಮಾರುತಗಳ ಭಯ
75) ಲಾಕಿಯೋಫೋಬಿಯಾ(Lockiophobia) – ಹೆರಿಗೆ ಭಯ
76) ಮ್ಯಾಗೈರೋಕೊಫೋಬಿಯಾ(Mageirocophobia) – ಅಡುಗೆಯ ಭಯ
77) ಮೆಗಾಲೋಫೋಬಿಯಾ(Megalophobia) – ದೊಡ್ಡ ವಸ್ತುಗಳ ಭಯ
78) ಮೆಲನೊಫೋಬಿಯಾ(Melanophobia) – ಕಪ್ಪು ಬಣ್ಣದ ಭಯ
79) ಮೈಕ್ರೋಫೋಬಿಯಾ(Microphobia) – ಸಣ್ಣ ವಸ್ತುಗಳ ಭಯ
80) ಮೈಸೊಫೋಬಿಯಾ(Mysophobia) – ಕೊಳಕು ಮತ್ತು ಸೂಕ್ಷ್ಮಜೀವಿಗಳ ಭಯ
81) ನೆಕ್ರೋಫೋಬಿಯಾ(Necrophobia) – ಸಾವಿನ ಭಯ ಅಥವಾ ಸತ್ತ ಪ್ರಾಣಿಪಕ್ಷಿಗಳ ಭಯ
82) ನೋಕ್ಟಿಫೋಬಿಯಾ(Noctiphobia) – ರಾತ್ರಿಯ ಭಯ
83) ನೊಸೊಕೊಮ್ ಫೋಬಿಯ(Nosocomephobia) – ಆಸ್ಪತ್ರೆಗಳ ಭಯ
84) ನೈಕ್ಟೋಫೋಬಿಯಾ(Nyctophobia) – ಕತ್ತಲೆಯ ಭಯ
85) ಒಬೆಸೊಫೋಬಿಯಾ(Obesophobia) – ತೂಕ ಹೆಚ್ಚಾಗುವ ಭಯ
86) ಆಕ್ಟೊಫೋಬಿಯಾ(Octophobia) – 8 ಸಂಖ್ಯೆಯ ರೀತಿ ಇರುವ ವಸ್ತುಗಳ ಭಯ
87) ಒಂಬ್ರೋಫೋಬಿಯಾ(Ombrophobia) – ಮಳೆಯ ಭಯ
88) ಒಫಿಡಿಯೋಫೋಬಿಯಾ(Ophidiophobia) – ಹಾವುಗಳ ಭಯ
89) ಆರ್ನಿಥೋಫೋಬಿಯಾ(Ornithophobia) – ಪಕ್ಷಿಗಳ ಭಯ
90) ಪ್ಯಾಪಿರೋಫೋಬಿಯಾ(Papyrophobia) – ಕಾಗದದ ಭಯ
91) ಪ್ಯಾಥೋಫೋಬಿಯಾ(Pathophobia) – ರೋಗದ ಭಯ
92) ಪೆಡೊಫೋಬಿಯಾ(Pedophobia) – ಮಕ್ಕಳ ಭಯ
93) ಫಿಲೆಮಾಟೊಫೋಬಿಯಾ(Philematophobia) – ಚುಂಬನದ ಭಯ
94) ಫಿಲೋಫೋಬಿಯಾ(Philophobia) – ಪ್ರೀತಿಯ ಭಯ
95) ಫೋಬೊಫೋಬಿಯಾ(Phobophobia) – ಫೋಬಿಯಾಗಳ ಭಯ
96) ಪೊಡೊಫೋಬಿಯಾ(Podophobia) – ಪಾದಗಳ ಭಯ
97) ಪೋರ್ಫೈರೋಫೋಬಿಯಾ(Porphyrophobia) – ನೇರಳೆ ಬಣ್ಣದ ಭಯ
98) ಪ್ಟೆರಿಡೋಫೋಬಿಯಾ(Pteridophobia) – ಜರೀಗಿಡಗಳ ಭಯ
99) ಟೆರೊಮೆರ್ಹನೋಫೋಬಿಯ(Pteromerhanophobia) – ಹಾರುವ ಭಯ
100) ಪೈರೋಫೋಬಿಯಾ(Pyrophobia) – ಬೆಂಕಿಯ ಭಯ
101) ಸಂಹೈನೋಫೋಬಿಯಾ(samhainophobia) – ಹ್ಯಾಲೋವೀನ್ ಭಯ
102) ಸ್ಕೋಲಿಯೊನೋಫೋಬಿಯಾ(Scolionophobia) – ಶಾಲೆಯ ಭಯ
103) ಸ್ಕೋಪ್ಟೋಫೋಬಿಯಾ(Scoptophobia) – ದುರುಗುಟ್ಟಿ ನೋಡುವ ಭಯ
104) ಸೆಲೆನೋಫೋಬಿಯಾ(Selenophobia) – ಚಂದ್ರನ ಭಯ
105) ಸೊಶಿಯೊಫೋಬಿಯಾ(Sociophobia) – ಸಾಮಾಜಿಕ ಮೌಲ್ಯಮಾಪನದ ಭಯ
106) ಸೋಮ್ನಿಫೋಬಿಯಾ(Somniphobia) – ನಿದ್ರೆಯ ಭಯ
107) ಟ್ಯಾಕೋಫೋಬಿಯಾ(Tachophobia) – ವೇಗದ ಭಯ
108) ಟೆಕ್ನೋಫೋಬಿಯಾ(Technophobia) – ತಂತ್ರಜ್ಞಾನದ ಭಯ
109) ಟೋನಿಟ್ರೊಫೋಬಿಯಾ(Tonitrophobia) – ಗುಡುಗಿನ ಭಯ
110) ಟ್ರಿಪನೋಫೋಬಿಯಾ(Trypanophobia) – ಸೂಜಿಗಳು / ಚುಚ್ಚುಮದ್ದಿನ ಭಯ
111) ಟ್ರಿಪೊಫೋಬಿಯಾ(Trypophobia) – ರಂಧ್ರಗಳ ಭಯ
112) ವೆನುಸ್ಟ್ರಾಫೊಬಿಯಾ(Venustraphobia) – ಸುಂದರ ಮಹಿಳೆಯರ ಭಯ
113) ವರ್ಮಿನೋಫೋಬಿಯಾ(Verminophobia) – ರೋಗಾಣುಗಳ ಭಯ
114) ವಿಕ್ಕಾಫೋಬಿಯಾ(Wiccaphobia) – ಮಾಟಗಾರರ ಮತ್ತು ವಾಮಾಚಾರದ ಭಯ
115) ಝೆನೋಫೋಬಿಯಾ(Xenophobia) – ಅಪರಿಚಿತರು ಅಥವಾ ವಿದೇಶಿಯರ ಭಯ
116) ಝುಫೋಬಿಯಾ(Zoophobia) – ಪ್ರಾಣಿಗಳ ಭಯ
117) ಟಾಕ್ಸಿಫೋಬಿಯಾ(Toxiphobia)- ವಿಷದ ಭಯ
118) ಝೆಲೊಫೋಬಿಯಾ (Zelophobia)- ಅಸೂಯೆ ಭಯ
119) ಯುರೇನೋಫೋಬಿಯಾ(Uranophobia)- ಸ್ವರ್ಗದ ಭಯ
120) ಥಾನಟೊಫೋಬಿಯಾ(Thanatophobia)- ಸಾವಿನ ಭಯ
121) ಟ್ಯಾಫೆಫೋಬಿಯಾ(Taphephobia)- ಜೀವಂತವಾಗಿ ಸಮಾಧಿ ಮಾಡಲಾಗುವುದು ಎಂಬ ಭಯ
122) ಸಟಾನೋಫೋಬಿಯಾ(Satanophobia)- ದೆವ್ವದ ಭಯ
Mind Sharing?