Mind Sharing?

“ಮಾನ್ಯ ಉಚ್ಚ ನ್ಯಾಯಾಲಯದಿಂದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೆ ಒಂದು ವಾರ ತನ್ನ ಪೊಲೀಸ್ ಠಾಣೆಯ ರಸ್ತೆಯ ಕಸ ಗುಡಿಸಿ ಸ್ವಚ್ಛ ಮಾಡಿ ಸಮುದಾಯ ಸೇವೆ ಮಾಡುವಂತೆ ಆದೇಶ”. ಈ ಸುದ್ದಿಯು ಎಲ್ಲ ದಿನಪತ್ರಿಕೆಗಳಲ್ಲಿ ಬಂದಿದ್ದೆ ತಡ ಆ ಇನ್ಸ್ಪೆಕ್ಟರ್ ನಿಂದ ಕಾನೂನು ಕ್ರಮಕ್ಕೆ ಒಳಗಾಗಿ ಜೈಲು ಸೇರಿದ್ದ ಸಮಾಜ ವಿರೋಧಿಗಳು ಮತ್ತು ಕಳ್ಳಕಾಕರು, ಆತನಿಂದ ಒದೆ ತಿಂದಿದ್ದ ಆ ಏರಿಯಾದ ರೌಡಿಗಳು ಹಾಗು ಇತರೆ ಕೆಲವು ಪೊಲೀಸ್ ವಿರೋಧಿ ಮನಸ್ಥಿತಿಯ ಜನರಿಗೆ ಅತೀವ ಆನಂದವಾಗಿರುದಂತೂ ಸತ್ಯ. ಮಾನ್ಯ ಉಚ್ಚ ನ್ಯಾಯಾಲಯ ಕಲಬುರ್ಗಿ ಪೀಠದ ರಿಟ್ ಪಿಟಿಷನ್ ಹೇಬಿಯಸ್ ಕಾರ್ಪಸ್ ನಂ 200012 /2020 ರಲ್ಲಿ ಮಾನ್ಯ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಆದರೆ ಒಬ್ಬ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ ಮಾನ್ಯ ನ್ಯಾಯಾಲಯದಲ್ಲಿ ನಿಂತು ದಂಡನೆಗೆ ಒಳಗಾದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡರೆ ಆತ ಎಡವಿದ್ದು ಎಲ್ಲಿ?, ಯಾಕೆ ಪದೇ ಪದೇ ಪೊಲೀಸರು ನ್ಯಾಯಾಲಯಗಳಿಂದ ದಂಡನೆಗೆ ಒಳಗಾಗುತ್ತಿದ್ದಾರೆ?, ಪೊಲೀಸ್ ಅಧಿಕಾರಿಗಳ ಶಾಸನಬದ್ಧ ಕರ್ತವ್ಯಗಳು ಏನು? ಎಂಬ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಪೊಲೀಸ್ ಅಧಿಕಾರಿಗಳು ವಿಫಲರಾಗಿರುವುದು ಕಂಡುಬರುತ್ತದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳಲ್ಲಿ ವೃತ್ತಿಪರತೆ ಮೂಡುವಂತೆ ಮಾಡುವುದು ಇಂದಿನ ಅತ್ಯಗತ್ಯವಾಗಿದೆ.

ಪೋಲೀಸರ ಅಧಿಕಾರಗಳು, ಕರ್ತವ್ಯಗಳು ಏನೆಂದು ತಿಳಿಸಿಕೊಡುವ ಒಂದು ಗ್ರಂಥವೆಂದರೆ ಅದು code of criminal procedure 1973. ಕಲಂ 154 (1) CrPC ಪ್ರಕಾರ ಒಬ್ಬ ಠಾಣಾಧಿಕಾರಿಗೆ ಸಂಜ್ಞೆಯ ಅಪರಾಧದ ಬಗ್ಗೆ ಮಾಹಿತಿ ಬಂದ ಕೂಡಲೇ ಆತ ಅದನ್ನು ದಾಖಲಿಸಲೇಬೇಕು. ಅದರಲ್ಲೂ ದೂರುದಾರ ಆತನ ಠಾಣೆಗೆ ಹಾಜರಾಗಿ ಲಿಖಿತವಾಗಿ ನೀಡಿದಂಥ ದೂರನ್ನು ಠಾಣಾಧಿಕಾರಿಯು ಪ್ರಕರಣ ದಾಖಲಿಸಲೇಬೇಕು. ಆತನಿಗೆ ಬೇರೆ ಮಾರ್ಗವಿಲ್ಲ. ಠಾಣಾಧಿಕಾರಿಯು ಪ್ರಕರಣ ದಾಖಲಿಸಲು ನಿರಾಕರಿಸಿದಲ್ಲಿ ದೂರುದಾರನು ಪೊಲೀಸ್ ಅಧೀಕ್ಷಕರಿಗೆ ದೂರನ್ನು ಸಲ್ಲಿಸಿ ಪ್ರಕರಣ ದಾಖಲಾಗುವಂತೆ ನೋಡಿಕೊಳ್ಳಬಹುದು. ನ್ಯಾಯಾಲಯಗಳು ಸಹ ಕಲಂ 200 CrPC ಪ್ರಕಾರ ಪ್ರಕರಣವನ್ನು ದಾಖಲಿಸಿಕೊಳ್ಳಬಹುದು. ದೂರುದಾರ ನೀಡುವ ದೂರಿನಲ್ಲಿ ಅಪರಾಧ ತನ್ನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂಬುದು ಖಚಿವಾದರೂ ಸಹ ಠಾಣಾಧಿಕಾರಿಯು ಪ್ರಕರಣವನ್ನು ದಾಖಲಿಸಿ, ಕೃತ್ಯ ನಡೆದ ಸ್ಥಳದ ಮಹಜರನ್ನು ನಡೆಸಿ ಕೃತ್ಯ ನಡೆದ ಸ್ಥಳವು ತನ್ನ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಬೇರೊಂದು ಪೊಲೀಸ್ ಠಾಣೆಗೆ ವರ್ಗಾವಣೆ ನೀಡಬಹುದು. ಕೃತ್ಯ ನಡೆದ ಸ್ಥಳ ತನ್ನ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದಿಲ್ಲ ಅಥವಾ ದೂರುದಾರ ನೀಡುವ ದೂರನ್ನು ದಾಖಲಿಸುವುದಿಲ್ಲ ಎಂದು ಉದ್ದಟತನ ತೋರುವ ಹಾಗಿಲ್ಲ.

 ಜಸ್ಟಿಸ್ ವರ್ಮ ಸಮಿತಿ ಶಿಫಾರಸಿನ ಪ್ರಕಾರ Zero FIR ಎಂಬ ಪದವನ್ನು New Criminal Law (Amendment) Act, 2013 ರಲ್ಲಿ ಅಡಕಗೊಳಿಸಲಾಯಿತು. Zero FIR ಎಂದರೆ ಯಾವುದೇ ದೂರುದಾರ ಪೊಲೀಸ್ ಠಾಣೆಯಲ್ಲಿ ನೀಡುವ ದೂರಿನಲ್ಲಿ ಹೆಸರಿಸಿರುವ ಕೃತ್ಯ ನಡೆದ ಸ್ಥಳವು ಬೇರೆ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದಾಗಿ ಠಾಣಾಧಿಕಾರಿಗೆ ಮನವರಿಕೆ ಆದರೂ ಸಹ ಆತ ಪ್ರಕರಣ ದಾಖಲಿಸಲು ನಿರಾಕರಿಸಬಾರದು ಬದಲಿಗೆ ತನ್ನ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಬೇರೆ ಪೊಲೀಸ್ ಠಾಣೆಗೆ ವರ್ಗಾವಣೆ ನೀಡಬೇಕು. ದೆಹಲಿಯಲ್ಲಿ ಸಂಭವಿಸಿದ ನಿರ್ಭಯ ಗುಂಪು ಅತ್ಯಾಚಾರ ಮತ್ತು ಕೊಲೆ ಘಟನೆಯ ನಂತರ ಈ Zero FIR ಎಂಬ ಪದವು ಚಾಲ್ತಿಗೆ ಬಂದಿತು.

ಮಾನ್ಯ ಉಚ್ಚ ನ್ಯಾಯಾಲಯ ಕಲಬುರ್ಗಿ ಪೀಠದ ರಿಟ್ ಪಿಟಿಷನ್ ಹೇಬಿಯಸ್ ಕಾರ್ಪಸ್ ನಂ 200012 /2020 ರಲ್ಲಿ ಮಾನ್ಯ ನ್ಯಾಯಾಲಯವು KIRTI VASHISHT Vs STATE & OTHERS ಮತ್ತು RHEA CHAKRABORTY Vs STATE OF BIHAR ಎಂಬ ಎರಡು ಪ್ರಕರಣಗಳಲ್ಲಿ ನೀಡಲಾಗಿರುವ ತೀರ್ಪಿನ ಅಂಶಗಳನ್ನು ಉಲ್ಲೇಖಿಸಿದೆ. ಈ ಎರಡೂ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಗಳು ಸಂಜ್ಞೆಯ ದೂರುಗಳಲ್ಲಿ ಪ್ರಕರಣವನ್ನು ದಾಖಲು ಮಾಡುವುದು ಠಾಣಾಧಿಕಾರಿಯಾ ಅಧ್ಯ ಕರ್ತವ್ಯವೆಂದು ಸ್ಪಷ್ಟವಾಗಿ ಹೇಳಿದೆ. ಈ ಎರಡೂ ಪ್ರಕರಣಗಳ ಕೆಲವು ಅಂಶಗಳನ್ನು ಈ ಕೆಳಗೆ ತಿಳಿಸಿದೆ.

KIRTI VASHISHT Vs STATE & OTHERS

16. Learned APP has fairly conceded that as per the contents of the complaint, cognizable offence is made out. Thus, even on the first complaint made to Police Station, Najafgarh, the FIR was supposed to be registered. As per section 154 Cr.P.C., if any information relating to the commission of a cognizable offence is received by any Police Station, the said Police Station is duty bound to register the FIR. However, if the crime is not occurred in the jurisdiction of the said Police Station, then after registering the „Zero FIR’, the same has to be transferred to the concerned Police Station for investigation, where the offence has been committed. However, neither this happened in the Police Station Najafgarh nor thereafter in Police Station Baba Hari Das Nagar and also nor in Police Station Kapashera as well.

17. It is not in dispute that the provision of „Zero FIR‟ came up as a recommendation in the Justice Verma Committee Report, in the new Criminal Law (Amendment) Act, 2013 after the heinous „Nirbhaya Case’ of December, 2012. The provision says: “A Zero FIR can be filed in any police station by the victim, irrespective of their residence or the place of occurrence of crime.”

18. It is also not in dispute that the practice of „Zero FIR‟ is prevalent throughout India from the last many years. Thus, the Police Station of Kapashera, Najafgarh and Baba Hari Das Nagar were also aware about the said practice but none of the Police Stations till date have registered the case on the complaint of respondent no.7 whereas admittedly, cognizable offence has been committed as per the complaint of respondent no.7. Thus, the complainant/respondent no.7 was compelled to run from pillar to post due to inaction of the Police Stations mentioned above.

19. There is clear provision in Section 154 Cr.P.C. for registration of FIR. Case of Lalita Kumari vs. Govt. of U.P. & Ors.: AIR 2014 SC 187 is very relevant in the facts and circumstances of the case in hand, whereby the constitution bench of the Hon‟ble Supreme Court has held as under:

“100) The registration of FIR under Section 154 of the Code and arrest of an accused person under Section 41 are                                    two entirely different things. It is not correct to say that just because FIR is registered, the accused person can                                be arrested immediately. It is the imaginary fear that “merely because FIR has been registered, it would require                                arrest of the accused and thereby leading to loss of his reputation” and it should not be allowed by this Court to                              hold that registration of FIR is not mandatory to avoid such inconvenience to some persons. The remedy lies in                              strictly enforcing the safeguards available against arbitrary arrests made by the police and not in allowing the                                police to avoid mandatory registration of FIR when the information discloses commission of a cognizable                                        offence.”

20. Accordingly, I hereby direct the Commissioner of Police, Delhi to take action as per law against the then SHO of the aforementioned Police Stations, including the IO‟s who handled the complaint of respondent no.7. Since the cognizable offence admittedly has been committed by the petitioner herein, therefore, SHO Baba Hari Das Nagar is directed to take action forthwith on the complaint of respondent no.7.

RHEA CHAKRABORTY Vs STATE OF BIHAR

23. Registration of FIR is mandated when information on cognizable offence is received by the police. Precedents suggest that at the stage of investigation, it cannot be said that the concerned police station does not have territorial jurisdiction to investigate the case. On this aspect the ratio in Lalita Kumari Vs. Govt. of UP (2014) 2 SCC 1 is relevant where on behalf of the Constitution Bench, Chief Justice P Sathasivam, pronounced as under:-

“120.1. The registration of FIR is mandatory under Section 154 of the Code, if the information discloses                                              commission of a cognizable offence and no preliminary inquiry is permissible in such a situation.

120.2. If the information received does not disclose a cognizable offence but indicates the necessity for an                                     inquiry, a preliminary inquiry may be conducted only to ascertain whether cognizable offence is disclosed or not.”

28. Once again, in Rasiklala Dalpatram Thakkar Vs. State of Gujarat (2010) 1 SCC 1, while approving the earlier decisions in Satvinder Kaur(supra) in the judgment rendered by Justice Altamas Kabir as he was then, the Supreme Court made it very clear that a police officer cannot refrain from investigating a matter on territorial ground and the issue can be decided after conclusion of the investigation. It was thus held:-

“27. In our view, both the trial court as well as the Bombay High Court had correctly interpreted the provisions of Section 156 CrPC to hold that it was not within the jurisdiction of the investigating agency to refrain itself from holding a proper and complete investigation merely upon arriving at a conclusion that the offences had been committed beyond its territorial jurisdiction.”

ಈ ಮೇಲ್ಕಂಡ ಎರಡೂ ತೀರ್ಪುಗಳ ಸಾರಾಂಶವೇನೆಂದರೆ, ಪೊಲೀಸ್ ಠಾಣೆಯ ಠಾಣಾಧಿಕಾರಿ ಕೃತ್ಯ ನಡೆದ ಸ್ಥಳವು ಯಾವುದೇ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರೂ ಸರಹದ್ದಿನ ಕಾರಣದ ಮೇಲೆ FIR ದಾಖಲಿಸಲು ನಿರಾಕರಿಸುವಂತಿಲ್ಲ.

ಆದಾಗ್ಯೂ ಕೆಲವು ವಿಶೇಷ ಸಂದರ್ಭಗಳಲ್ಲಿ ಠಾಣಾಧಿಕಾರಿಯು ದೂರನ್ನು ಸ್ವೀಕರಿಸಿದ ನಂತರ ಪ್ರಾಥಮಿಕ ವಿಚಾರಣೆಯ ಸಲುವಾಗಿ ಕಾಯ್ದಿರಿಸಬಹುದು. ಆ ಸಂದರ್ಭಗಳು ಯಾವುದೆಂದು ಮಾನ್ಯ ಸರ್ವೋಚ್ಛ ನ್ಯಾಯಾಲಯದ WRIT PETITION (CRIMINAL) NO. 68 OF 2008 ರಲ್ಲಿ ಮುಖ್ಯ ನ್ಯಾಯಮೂರ್ತಿ ಶ್ರೀ ಸದಾಶಿವಂ ನೇತೃತ್ವದ ನ್ಯಾಯಮೂರ್ತಿಗಳಾದ ಶ್ರೀ ಬಿ.ಎಸ್. ಚೌಹಾಣ್ , ಶ್ರೀ ರಂಜನ ಪ್ರಕಾಶ್ ದೇಸಾಯಿ , ಶ್ರೀ ರಂಜನ್ ಗೊಗೋಯ್ , ಶ್ರೀ ಎಸ್.ಎ. ಬೋಬಡೆ ರವರ ಪೀಠದಲ್ಲಿ Lalithakumari Vs Govt of Uttarpradesh ಪ್ರಕರಣದಲ್ಲಿ ಠಾಣಾಧಿಕಾರಿ ಅಥವಾ ತನಿಖಾಧಿಕಾರಿ ಯಾವ ಸಂದರ್ಭಗಳಲ್ಲಿ ಪ್ರಕರಣ ದಾಖಲು ಮಾಡಲು ವಿಳಂಬ ಮಾಡಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ.

111) In view of the aforesaid discussion, we hold:

i) Registration of FIR is mandatory under Section 154 of the Code, if the information discloses commission of a cognizable offence and no preliminary inquiry is permissible in such a situation.
ii) If the information received does not disclose a cognizable offence but indicates the necessity for an inquiry, a preliminary inquiry may be conducted only to ascertain whether cognizable offence is disclosed or not.
iii) If the inquiry discloses the commission of a cognizable offence, the FIR must be registered. In cases where preliminary inquiry ends in closing the complaint, a copy of the entry of such closure must be supplied to the first informant forthwith and not later than one week. It must disclose reasons in brief for closing the complaint and not proceeding further.

iv) The police officer cannot avoid his duty of registering offence if cognizable offence is disclosed. Action must be taken against erring officers who do not register the FIR if information received by him discloses a cognizable offence.

v) The scope of preliminary inquiry is not to verify the veracity or otherwise of the information received but only to ascertain whether the information reveals any cognizable offence.

vi) As to what type and in which cases preliminary inquiry is to be conducted will depend on the facts and circumstances of each case. The category of cases in which preliminary inquiry may be made are as under:

a) Matrimonial disputes/ family disputes

b) Commercial offences

c) Medical negligence cases

d) Corruption cases

e) Cases where there is abnormal delay/laches in initiating criminal prosecution, for example, over 3 months delay in reporting the matter without satisfactorily explaining the reasons for delay.

The aforesaid are only illustrations and not exhaustive of all conditions which may warrant preliminary inquiry.

vii) While ensuring and protecting the rights of the accused and the complainant, a preliminary inquiry should be made time bound and in any case it should not exceed 7 days. The fact of such delay and the causes of it must be reflected in the General Diary entry.

viii) Since the General Diary/Station Diary/Daily Diary is the record of all information received in a police station, we direct that all information relating to cognizable offences, whether resulting in registration of FIR or leading to an inquiry, must be mandatorily and meticulously reflected in the said Diary and the decision to conduct a preliminary inquiry must also be reflected, as mentioned above.

ಮೇಲ್ಕಂಡ ತೀರ್ಪಿನ ಸಾರಾಂಶವೇನೆಂದರೆ, ವೈವಾಹಿಕ ವಿವಾದಗಳು / ಕುಟುಂಬ ವಿವಾದಗಳು, ವಾಣಿಜ್ಯ ಅಪರಾಧಗಳು, ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು, ಭ್ರಷ್ಟಾಚಾರ ಪ್ರಕರಣಗಳು, ದೂರನ್ನು ದಾಖಲಿಸುವಲ್ಲಿ ಅಸಹಜ ವಿಳಂಬವಾಗಿರುವ ಪ್ರಕರಣಗಳು, ಉದಾಹರಣೆಗೆ, ವಿಳಂಬದ ಕಾರಣಗಳನ್ನು ತೃಪ್ತಿಕರವಾಗಿ ವಿವರಿಸದೆ ಘಟನೆಯನ್ನು ವರದಿ ಮಾಡಲು 3 ತಿಂಗಳ ವಿಳಂಬವಾಗಿರುವ ಸಂದರ್ಭಗಳ ಹೊರತಾಗಿ ಬೇರೆ ಯಾವುದೇ ಸಂದರ್ಭಗಳಲ್ಲಿ ಠಾಣಾಧಿಕಾರಿಯು FIR ದಾಖಲಿಸಲೇಬೇಕು. ಪ್ರಾಥಮಿಕ ವಿಚಾರಣೆಗಾಗಿ ಬಾಕಿ ಉಳಿಸಿಕೊಂಡಿರುವ ಬಗ್ಗೆ SHD ಯಲ್ಲಿ ಕಡ್ಡಾಯವಾಗಿ ನಮೂದು ಮಾಡಬೇಕು ಹಾಗು ದೂರುದಾರರಿಗೆ ಹಿಂಬರಹವನ್ನು ನೀಡಬೇಕು ಹಾಗು ಗರಿಷ್ಟ 7 ದಿನಗಳ ಒಳಗೆ ಪ್ರಾಥಮಿಕ ವಿಚಾರಣೆಯನ್ನು ಮುಗಿಸಿ FIR ದಾಖಲಿಸಬೇಕು ಅಥವಾ ಪ್ರಕರಣ ದಾಖಲಿಸಲು ತಕ್ಕುದಲ್ಲವೆಂದು ಹಿಂಬರಹವನ್ನು ನೀಡಬೇಕು.

ಈ ಮೇಲ್ಕಂಡ ಎಲ್ಲ ಅಂಶಗಳನ್ನು ಎಲ್ಲ ಠಾಣಾಧಿಕಾರಿಗಳು ಪಾಲಿಸಿದ್ದೇ ಆದರೆ ಪದೇ ಪದೇ ಮಾನ್ಯ ನ್ಯಾಯಾಲಯಗಳಿಂದ ದಂಡನೆಗೆ ಒಳಗಾಗುವುದನ್ನು ತಡೆಗಟ್ಟಬಹುದು ಹಾಗು ಪೊಲೀಸ್ ಇಲಾಖೆಯ ಗೌರವವನ್ನು ಎತ್ತಿ ಹಿಡಿಯಬಹುದು

Mind Sharing?