I’ll outline the best Kannada books to read and get your lost moments in your life back!
ಕನ್ನಡದಲ್ಲಿ ಇಂತಹ ಲೇಖನಗಳಿವೆ ಎಂದರೆ, ಜೀವನದಲ್ಲಿ ನಾನವು ಏನೆಲ್ಲಾ ಕಳ್ಕೊಂಡಿದ್ದೇವೆ ಅಂತ ನಮಗೆ ಅನ್ನಿಸುವಂತಾಗತ್ತೆ!
ಜೀವನದ ಅತಿ ಉತ್ಸಾಹ, ಸಂತೋಷ, ಜ್ಞಾನ ಮತ್ತು ನಮ್ಮ ಚಾತುರ್ಯತೆ ಮೆರೆಸುವಂತದ್ದು ಪುಸ್ತಕಗಳು!
ಇಂತಹ ಅತ್ಯುತ್ಸಾಹ ಹುಟ್ಟಿಸುವಂತೆ ಮಾಡುವ ಕೆಲವು ಪುಸ್ತಕಗಳನ್ನು ಇಲ್ಲಿ ನಾನು ತೋರಿಸಿ ಉಲ್ಲಖ ಬರೆದಿದ್ದೇನೆ! ಈ ಎಲ್ಲ ಪುಸ್ತಕಗಳನ್ನು ನಾನು ಓದಿ ಇಲ್ಲಿ ಉಲ್ಲೇಖ ಬರೆದಿದ್ದೇನೆ.
ಓದಲೇ ಬೇಕಾದ ನನ್ನ ಪುಸ್ತಕ: ದಿ ಬೇಸಿಕ್ಸ್ ಒಫ್ ಸ್ಟಾಕ್ ಮಾರ್ಕೆಟ್ ಫಾರ್ ಬಿಗಿನರ್ಸ್
ಕನ್ನಡಲ್ಲಿ ಓದಲೇ ಬೇಕಾದ ಪುಸ್ತಕಗಳು | Best Books To Read In Kannada:
ಹಣ ಗಳಿಸುವಿಕೆ, ಉಳಿಸುವಿಕೆ, ಹಾಗೆ ಬೆಳೆಸುವಿಕೆ, ಹಾಗೂ ತಿಳುವಳಿಕೆ ಬಗೆಗಿನ ಪುಸ್ತಕಗಳು:
1) ಹಣದ ಮನೋವಿಜ್ಞಾನ:
- ಈ ಪುಸ್ತಕ ಬರೆದಿರುವವರು ಮಾರ್ಗನ್ ಹೌಸೆಲ್.
- ತಮ್ಮ 6 ವರ್ಷಗಳ ವಿವರವಾದ ರಿಸರ್ಚ್ ಇಟ್ಟುಕೊಂಡು ಬರುತ್ತಿರುವ ಪುಸ್ತಕ ಹಣದ ಮನೋವಿಜ್ಞಾನ.
- ಈ ಪುಸ್ತಕದಲ್ಲಿ ಹಣದ ವಿವರತೆಗಳನ್ನ ಪುಂಖಾನುಪುಂಖ ವಾಗಿ ವಿವರಿಸಿದ್ದಾರೆ.
- ಕೊನೆಗೆ ಬಿಲ್ ಗೇಟ್ಸ್, ವಾರೆನ್ ಬಫೆಟ್ ಅಂತಹ ಬಿಲಿಯನೇರ್ ಗಳ ಬಗ್ಗೆ,
- ಅವರು ಹೇಗೆ ಹಣ ಗಳಿಸಿದರು, ಅವರು ಹೇಗೆ ಹಣವನ್ನು ಬೆಳೆಸಿದರು ಎನ್ನುವ ವಿವರಗಳನ್ನು ಅತಿಯುತ್ತಮವಾಗಿ ಲೇಖಕರು ಬರೆದಿದ್ದಾರೆ.
ನೀವು ಹಣದ ಬಗ್ಗೆ ಗಳಿಸುವುದನ್ನು ಏನಾದರೂ ತಿಳಿಯಬೇಕಾದರೆ, ಈ ಪುಸ್ತಕ, ಅತಿ ಅವಶ್ಯಕ.
ಆದ್ದರಿಂದ ಈ ಪುಸ್ತಕವನ್ನು ನಿಮ್ಮ ಓದುವ ಬತ್ತಳಿಕೆಗೆ ಸೇರಿಸಿಕೊಳ್ಳಿ.
ಹಣದ ಮನೋವಿಜ್ಞಾನ ಪುಸ್ತಕವನ್ನು ನೀವು ಅಮೆಜಾನ್ನಲ್ಲಿ ಓದಬಹುದು.
2) ರಿಚ್ ಡ್ಯಾಡ್ ಪೂರ್ ಡ್ಯಾಡ್ ಬರೆದಿರುವವರು ರಾಬರ್ಟ್ ಕಿಯೋಸಾಕಿ:
- ರಿಚ್ ಡ್ಯಾಡ್ ಪುರ್ ಡ್ಯಾಡ್ ಒಂದು ಅತ್ಯುತ್ತಮ ಪುಸ್ತಕವಾಗಿದೆ.
- ರಾಬರ್ಟ್ ಕೀಯೋ ಸಾಕಿ ತಮ್ಮ ಜೀವನದ ಹಣಗಳಿಸುವಿಕೆಯ ಅನುಭವವನ್ನು ಪುಸ್ತಕದ ರೂಪದಲ್ಲಿ ಹಂಚಿಕೊಂಡಿದ್ದಾರೆ.
- ಅವರು ಹಣದ ಬಗ್ಗೆ ಕಲಿತ ಅತಿ ಉತ್ತಮ ವಿವರಗಳನ್ನು ಇಲ್ಲಿ ತಿಳಿಸಿದ್ದಾರೆ.
- ಹಣ ಗಳಿಸುವುದು ಹೇಗೆ?
- ಹಣ ಉಳಿಸುವುದು ಹೇಗೆ?
- ಹಣ ಬೆಳೆಸುವುದು ಹೇಗೆ?
- ಎಲ್ಲದರ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖವಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಹಣದ ಎಲ್ಲ ವಿವರಗಳನ್ನು ಈ ಪುಸ್ತಕ ಮೈಗೊಂಡಿದೆ.
- ನಿಮ್ಮ ಹಣವನ್ನು ಹೇಗೆ ಬೆಳೆಸಬೇಕು ಎಂಬುದನ್ನು ಈ ಪುಸ್ತಕ ರಿಚ್ ಡ್ಯಾಡ್ ಪುರ್ ಡ್ಯಾಡ್ ಬಿಡಿಬಿಡಿಯಾಗಿ ತೆರೆದಿಡುತ್ತದೆ.
ಈಗಲೇ ರಿಚ್ ಡ್ಯಾಡ್ ಪುರ್ ಡ್ಯಾಡ್ ಅಮೆಜಾನ್ ನಲ್ಲಿ ಓದಿರಿ.
3) ಯೋಚಿಸಿ ಮತ್ತು ಶ್ರೀಮಂತರಾಗಿ ಬರೆದಿರುವವರು ನೆಪೋಲಿಯನ್ ಹಿಲ್:
ಈ ಪುಸ್ತಕ ಬರೆದಿರುವವರು ನೆಪೋಲಿಯನ್ ಹಿಲ್.
1935 ರಲ್ಲಿ ಬರೆದಿರುವ ಈ ಪುಸ್ತಕ, ಇಂದಿನ 21ನೇ ಶತಮಾನಕ್ಕೆ ಒಗ್ಗುತ್ತದೆಯೇ ಎಂದು ಯೋಚನೆ ಮಾಡುತ್ತಿದ್ದೀರಾ?
ಯೋಚಿಸಲು ಅಸಾಧ್ಯವಾದ ಜ್ಞಾನ ಭಂಡಾರ ಈ ಪುಸ್ತಕ ಯೋಚಿಸಿ ಮತ್ತು ಶ್ರೀಮಂತರಾಗಿ ನಲ್ಲಿ ತುಂಬಿಕೊಂಡಿದೆ.
ಇಂತಹ ಪುಸ್ತಕ ಹಿಂದೆ ಬರೆದಿಲ್ಲ ಮುಂದೆ ಬರೆಯಲು ಸಾಧ್ಯವಿಲ್ಲ!
ನಿಮ್ಮ ಯೋಚನೆ ಶಕ್ತಿಯಿಂದ ಮಾತ್ರವೇ ಕೇವಲ ನೀವು ಶ್ರೀಮಂತರಾಗಬಹುದು ಎಂದು ನೀವು ಊಹೆ ಕೂಡ ಮಾಡಲು ಸಾಧ್ಯವಿಲ್ಲ.
ಇಂತಹ ಜ್ಞಾನಾರ್ಜನೆ ಸಿಕ್ಕಿದಾಗ ನಿಮ್ಮ ಯೋಚನಾ ಶಕ್ತಿಯೊಂದಿಗೆ ನಿಮ್ಮ ಮನಸ್ಸಿನ ಗಟ್ಟಿ ಗಡಿತ ಶಕ್ತಿಯನ್ನು ಸೇರಿಸಿದರೆ ಶ್ರೀಮಂತರಾಗುವುದು ಅತಿ ಸುಲಭ ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ.
ನೆಪೋಲಿಯನ್ ಹಿಲ್ ಅವರು ಸಾಕಷ್ಟು ಹಣಗಳಿಸಿರುವ ದೊಡ್ಡ ದೊಡ್ಡ ಶಕ್ತಿಗಳನ್ನು ನೋಡಿ ಅವರ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ.
ಈ ಪುಸ್ತಕ ಯೋಚಿಸಿ ಹಾಗೂ ಶ್ರೀಮಂತರಾಗಿ ಓದಿದ ಮೇಲೆ ನಿಮ್ಮ ಒಳಗೆ ಶ್ರೀಮಂತರಾಗುವ ಹುಮ್ಮಸ್ಸು ಅತಿ ಹೆಚ್ಚು ಆಗುತ್ತದೆ.
ಈ ಪುಸ್ತಕ ಯೋಚಿಸಿ ಹಾಗೂ ಶ್ರೀಮಂತರಾಗಿ ಈಗಲೇ ಅಮೆಜಾನ್ ನಲ್ಲಿ ಓದಿರಿ.
Poornachandra Tejaswi Kannada Books | ಕುವೆಂಪುರವರ ಮಗ ಪೂರ್ಣ ಚಂದ್ರ ತೇಜಸ್ವಿ ಅವರ ಪುಸ್ತಕಗಳು:
ಪೂರ್ಣಚಂದ್ರ ತೇಜಸ್ವಿಗೆ ಅವರು ತಮ್ಮ ತಂದೆಯ ಹಾಗೆ ಬಹಳ ಯಶಸ್ವಿ ಲೇಖಕ.
ಅವರ ಪುಸ್ತಕಗಳು ಕಥೆ ಆಧಾರಿತ ಪುಸ್ತಕಗಳಾಗಿರುತ್ತವೆ. ಅಬಚೂರಿನ ಪೋಸ್ಟ್ ಆಫೀಸ್ ಎಂಬ ಅವರ ಪುಸ್ತಕ, ಡೇರ್ ಡೆವಿಲ್ ಮುಸ್ತಫಾ ಎಂಬ ಚಿತ್ರವಾಗಿ ಬಿಡುಗಡೆಯಾಗಿದೆ.
ಅಷ್ಟೇ ಅಲ್ಲ ಇನ್ನು ಎಷ್ಟೋ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳು ಚಿತ್ರಗಳಾಗಿ ಬಿಡುಗಡೆಯಾಗಿದೆ.
ಅವರ ಅತ್ಯುತ್ತಮ ಲೇಖನಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖ ಮಾಡಿದ್ದೇನೆ.
- ಈ ಕಥಾನಕದಲ್ಲಿ, ಅಬಚೂರು ಎಂಬ ಚಿಕ್ಕ ಗ್ರಾಮದಲ್ಲಿ 1975 ರಲ್ಲಿ, ಹಿಂದೂ ಮುಸ್ಲಿಂ ಗಲಾಟೆ, ಸಿಕ್ಕಾಪಟ್ಟೆ ಇದ್ದ ಸಮಯ.
- ಅಂತಹ ಸಮಯದಲ್ಲಿ ಅಬಚೂರಿನ ಕಾಲೇಜಿಗೆ ಒಬ್ಬ ಮುಸಲ್ಮಾನ ಹುಡುಗ ಬಂದು ಸೇರುತ್ತಾನೆ.
- ಕಾಲೇಜಿನ ಎಲ್ಲಾ ಹಿಂದೂ ಮಕ್ಕಳು, ಈ ಮುಸಲ್ಮಾನ ಹುಡುಗನಿಗೆ ಒಗ್ಗಿ ಕೊಳ್ಳಲು ಸಾಧ್ಯವಾಗದೆ ಇರುವುದನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ.
- ಕಾಲೇಜಿನ ಮಕ್ಕಳು ಹೇಗೆ ಈ ಮುಸಲ್ಮಾನ ಹುಡುಗನ ಬಗ್ಗೆ ಇರಿಸು ಮೂರುಸುತ್ತಾರೆ, ಎಂದು ಈ ಕಥೆಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ.
ಕನ್ನಡದಲ್ಲಿ ಅತ್ಯುತ್ತಮವಾದ ಕಥೆಗಳಲ್ಲಿ, ಈ ಅಬಚೂರಿನ ಪೋಸ್ಟ್ ಆಫೀಸ್ ಗ್ರಂಥ ಅಗ್ರಸ್ಥಾನದಲ್ಲಿ ಕಾಣಿಸುತ್ತದೆ.
ಈಗಲೇ ಅಬಚೂರಿನ ಪೋಸ್ಟ್ ಆಫೀಸ್ ಪುಸ್ತಕ ಅಮೆಜಾನ್ ನಲ್ಲಿ ಓದಬಹುದು.
2) ಚಿದಂಬರ ರಹಸ್ಯ:
- ಈ ಪುಸ್ತಕ ಒಂದು ಹಳ್ಳಿಯ ಕಥೆಯಾಗಿರುತ್ತದೆ.
- ಹಳ್ಳಿಯಲ್ಲಿ ಹೇಗೆ ಜಾತಿಯತೆ ಬಗ್ಗೆ ವಿವಾದಗಳು ನಡೆಯುತ್ತವೆ ಎಂದು ಈ ಪುಸ್ತಕದಲ್ಲಿ ಬಿಡುಪಿಸಾಗಿ ಬರೆದಿದ್ದಾರೆ
- ಹಳ್ಳಿಯಲ್ಲಿ ನಡೆಯುವ ಪಾಲಿಟಿಕ್ಸ್, ಗಲಾಟೆಗಳು ಹಾಗೂ ಮೋಸಗಳು ಎಲ್ಲವನ್ನು ಚೆನ್ನಾಗಿ ವಿವರಿಸಿದ್ದಾರೆ ಪೂರ್ಣಚಂದ್ರ ತೇಜಸ್ವಿ ಅವರು.
- ನಂತರ ಈ ಚಿದಂಬರ ರಹಸ್ಯ ಎಂದರೆ ಒಬ್ಬ ಸೈಂಟಿಸ್ಟ್ ಕೊಲೆಯಾಗುತ್ತದೆ.
- ಈ ಕೊಲೆ ಮಾಡಿದವರು ಯಾರು ಎಂದು ಕಂಡುಹಿಡಿಯುವುದು ಈ ಚಿದಂಬರ ರಹಸ್ಯ.
ನೀವು ಕನ್ನಡ ಪುಸ್ತಕಗಳ ಅಭಿಮಾನಿ ಆಗಿದ್ದರೆ ಈ ಪುಸ್ತಕವನ್ನು ಖಂಡಿತ ಓದಲೇಬೇಕು.
ಚಿದಂಬರ ರಹಸ್ಯ ಪುಸ್ತಕ ಈಗಲೇ ಅಮೆಜಾನ್ನಲ್ಲಿ ಓದಬಹುದು.
- ಈ ಪುಸ್ತಕವು ಇತ್ತೀಚಿಗಷ್ಟೇ ಇದೇ ಟೈಟಲ್ ನಲ್ಲಿ ಚಿತ್ರವಾಗಿ ಬಿಡುಗಡೆಯಾಗಿದೆ.
- ಕಿರುಗೂರಿನಲ್ಲಿ ಹೆಂಗಸರೆಲ್ಲ ಒಂದಾಗಿ, ತಮ್ಮ ಎಲ್ಲ ಕೆಲಸಗಳನ್ನು ಮಾಡುತ್ತಿರುತ್ತಾರೆ.
- ಮುಂದೆ ಹಣ ಹಾಗೂ ಜಮೀನಿನ ಆಸೆಗೆ ಜನರಲ್ಲಿ ಒಡಕು ಮೂಡಿಸಿ ಗಂಡಸರಲ್ಲಿ ತಂದಿಡುತ್ತಾರೆ.
- ಹೇಗೆ ಕಿರಗೂರಿನ ಹೆಂಗಸರು ಎಲ್ಲಾ ಸೇರಿ ಮೋಸಗಾರರಿಗೆ ಬುದ್ಧಿ ಕಲಿಸುತ್ತಾರೆ ಎನ್ನುವುದೇ ಈ ಕಥಾನಕ.
- ಈ ಕತೆಯಲ್ಲಿ ಸಲೀಸಾದ ಕನ್ನಡದಲ್ಲಿ ಅಚ್ಚ ಕನ್ನಡ ಸ್ವಚ್ಛಂದವಾಗಿ ಓದಬಹುದು.
ಪೂರ್ಣಚಂದ್ರ ತೇಜಸ್ವಿಗೆ ಅವರ ಅತ್ಯುತ್ತಮ ಬರಹ ಕಿರಗೂರಿನ ಗಯ್ಯಾಳಿಗಳು ಪುಸ್ತಕ ಈಗಲೇ ಅಮೆಜಾನ್ ನಲ್ಲಿ ಓದಬಹುದು.
Kannada Famous Books to Read | ಕನ್ನಡದ ಮಿಕ್ಕ ಅತ್ಯುತ್ತಮ ಬರಹಗಳು:
1) ಮೂಕಜ್ಜಿಯ ಕನಸುಗಳು ಬರೆದಿರುವವರು ಡಾ.ಶಿವರಾಮ ಕಾರಂತ:
- ಡಾ ಶಿವರಾಮ ಕಾರಂತರು ಜ್ಞಾನಪೀಠ ಪ್ರಶಸ್ತಿ ವಿಜೇತರು.
- ಮೂಕಜ್ಜಿಯ ಕನಸುಗಳು ಒಬ್ಬ 80 ವರ್ಷದ ಅಜ್ಜಿ ಮೂಕಾಂಬಿಕೆ ಹಾಗೂ ಅವರ ಮೊಮ್ಮಗ ಸುಬ್ಬರಾಯ ಇವರ ಮಧ್ಯೆ ನಡೆಯುವ ಸಂಭಾಷಣೆಗಳು ತೋರಿಸುವ ಪುಸ್ತಕವಾಗಿದೆ.
- ಹಿಂದೆ ನಡೆದದ್ದು ಹಾಗೂ ಮುಂದೆ ನಡೆಯುವ ಎಲ್ಲಾ ವಿಷಯಗಳ ಬಗ್ಗೆ ಈ ಅಜ್ಜಿಗೆ ಕರಾರುವಕ್ಕಾಗಿ ಹೇಳುವ ಮಾಯಾ ಶಕ್ತಿ ಇರುತ್ತದೆ.
- ಶಿವರಾಮ ಕಾರಂತರು ದೇವರು, ಹಾಗೂ ನಮ್ಮ ಸಂಸ್ಕೃತಿ ಬಗ್ಗೆ ಅಜ್ಜಿಯವರ ಮೂಲಕ ನಮಗೆ ಹೇಳಿರುವ ಕಥೆ ಅತ್ಯುನ್ನತವಾಗಿದೆ.
ಕನ್ನಡದಲ್ಲಿ ಓದಲೇಬೇಕಾದ ಕೆಲವೇ ಪುಸ್ತಕಗಳಲ್ಲಿ ಮೂಕಜ್ಜಿಯ ಕನಸುಗಳು ಅಗ್ರಸ್ಥಾನ ಪಡೆದಿದೆ.
ಈಗಲೇ ಮೂಕಜ್ಜಿಯ ಕನಸುಗಳು ಪುಸ್ತಕ amazon ನಲ್ಲಿ ಓದಬಹುದು.
2) ನಾಯಿ ನೆರಳು ಬರೆದಿರುವವರು ಡಾ. ಎಸ್ ಎಲ್ ಭೈರಪ್ಪ:
- ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಈ ಪುಸ್ತಕ ಕೂಡ ಚಲನಚಿತ್ರದ ರೂಪದಲ್ಲಿ ಬಿಡುಗಡೆಯಾಗಿದೆ.
- ಈ ಪುಸ್ತಕದಲ್ಲಿ ಡಾಕ್ಟರ್ ಎಸ್ ಎಲ್ ಭೈರಪ್ಪ ಅವರು, ನಮ್ಮ ಕರ್ಮಗಳನ್ನು ಮುಗಿಸಲು ಎಷ್ಟು ಬಾರಿಯಾದರೂ ಮತ್ತೆ ಮನುಷ್ಯನಾಗಿ ಹುಟ್ಟಬೇಕು ಎಂದು ವಿವರಿಸಿದ್ದಾರೆ.
- ಇದು ಕಾಲ್ಪನಿಕವಾದರು, ಕಲ್ಪನೆಯಿಂದ ನಿಜ ರೂಪಕ್ಕೆ ತರುವ ಪ್ರಯತ್ನ ತುಂಬಾ ಚೆನ್ನಾಗಿ ಕವಿಗಳು ಮಾಡಿದ್ದಾರೆ.
- ನಾಯಿ ನೆರಳು ಎಂದರೆ ಒಂದು ಮೂರು ವರ್ಷದ ಮಗು ತನಗೆ ಮದುವೆಯಾಗಿದೆ ಒಂದು ಮಗುವಿದೆ ಎಂದು ಹೇಳಿಕೊಳ್ಳುತ್ತಾ, ನಾನು ನನ್ನ ಹಿಂದಿನ ಜನ್ಮದಲ್ಲಿ 18 ವರ್ಷಕ್ಕೆ ಸತ್ತಿದ್ದೆ.
- ಈ ಹಿಂದಿನ ಜನ್ಮದ ವಿಶ್ವೇಶ್ವರ ಎಂಬುವವರಿಗೆ ಒಂದು ನಾಯಿ ಇತ್ತು.
- ಈ ನಾಯಿ ಈಗಿನ ಜನ್ಮದ ಕ್ಷೇತ್ರಪಾಲ ನನ್ನು ಎಲ್ಲಿ ಹೋದರು ಹಿಂದೆ ಹೋಗುತ್ತಿತ್ತು.
- ಈ ಕ್ಷೇತ್ರಪಾಲ ಅಂದರೆ ಹಿಂದಿನ ಜನ್ಮದ ವಿಶ್ವೇಶ್ವರ, ತನ್ನ ಹಿಂದಿನ ಜನ್ಮದ ತಂದೆಯ ಮನೆಗೆ ಕಾಲಿಟ್ಟಾಗ, ತನ್ನ ತಂದೆ ಒಬ್ಬ ಸನ್ಯಾಸಿಗೆ ಮೋಸ ಮಾಡಿದ್ದದ್ದು ನೆನಪಿಗೆ ಬರುತ್ತದೆ.
- ಈ ಕಥೆಯಲ್ಲಿ ವಿಶ್ವೇಶ್ವರ, ಅಂದರೆ ಈಗಿನ ಕ್ಷೇತ್ರ ಪಾಲ, ತನ್ನ ಹಿಂದಿನ ಜನ್ಮದಲ್ಲಿ ಆ ಮೋಸಗೊಂಡ ಸನ್ಯಾಸಿಯಾಗಿ ಹುಟ್ಟಿದದ್ದು ಎಂದು ತಿಳಿಯುತ್ತದೆ.
- ಧರ್ಮರಾಯನನ್ನು ಒಂದು ನಾಯಿ ಹಿಂಬಾಲಿಸುತ್ತಿದ್ದು ಎಂದ ಆದ್ದರಿಂದ, ನಾಯಿಯ ನೆರಳು ಎಂದರೆ ನಮ್ಮ ಕರ್ಮಗಳು, ಎಲ್ಲಿ ಹೋದರು ನಮ್ಮ ಹಿಂದೆ ಬರುತ್ತದೆ ಎಂದು ಅರ್ಥೈಸಿ ಈ ಕಥೆ ಬರೆದಿದ್ದಾರೆ, ಭೈರಪ್ಪನವರು.
ನಾನು ಈ ಕಥೆಯ ಒಂದು ಚಿಕ್ಕ ತುಣುಕನ್ನು ತಿಳಿಸಿದ್ದೇನೆ.
ಈಗಲೇ ನಾಯಿ ನೆರಳು ಕಥಾನಕ ಅಮೆಜಾನ್ ನಲ್ಲಿ ಓದಬಹುದು.
3) ಮೂರು ಹೆಣ್ಣು ಐದು ಜಡೆ ಬರೆದಿರುವವರು ಬೀಚಿ:
- ಬೀಚಿಯವರ ಪುಸ್ತಕಗಳು ಹಾಸ್ಯಕ್ಕೆ ಹೆಸರು ಮಾಡಿರುವ ಪುಸ್ತಕಗಳಾಗಿವೆ.
- ಆದರೆ ಈ ಮೂರು ಹೆಣ್ಣು ಐದು ಜಡೆ ಕಾದಂಬರಿಯಲ್ಲಿ ಬೀಚಿಯವರ ಹಾಸ್ಯ, ಪ್ರಾಧಾನ್ಯತೆ ಪಡೆದಿಲ್ಲ.
- ಈ ಕಾದಂಬರಿಯಲ್ಲಿ, ಹೊನ್ನಯ್ಯ ಎಂಬ ತಂದೆ ಹಾಗೂ ಅವನ ಮೂರು ಹೆಣ್ಣು ಮಕ್ಕಳ ಬಗೆಗಿನ ಕಾದಂಬರಿಯಾಗಿದೆ.
- ಜನರು ಕೇವಲ ಹೆಣ್ಣು ಮಕ್ಕಳ ಬಟ್ಟೆ ಹಾಗೂ ಮಾತನ್ನು ಕೇಳಿ ಹೇಗೆ ಹೆಣ್ಣು ಮಕ್ಕಳನ್ನು, ಒಂದು ಹೆಸರು ಕೊಟ್ಟು ಕೂಡಿಸುತ್ತಾರೆ ಎಂದು ಈ ಕಾದಂಬರಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ.
- ಬೀಚಿಗೆ ಇವರ ಹಾಸ್ಯ ಇಲ್ಲದಿದ್ದರೂ, ತುಂಬಾ ಅಚ್ಚರಿಪಡುವ ಘಟನೆಗಳು, ಈ ಕಥಾನಕದಲ್ಲಿ ಎತ್ತಿ ಕಾಣುತ್ತದೆ.
ಈಗಲೇ ಬಿಜಿಯವರ ಮೂರು ಹೆಣ್ಣು ಐದು ಜಡೆ ಕಾದಂಬರಿ, ಅಮೆಜಾನ್ನಲ್ಲಿ ಓದಬಹುದು.
ಇನ್ನು ನಿಮಗೆ ಕನ್ನಡದಲ್ಲಿ ಓದುವ ಅತ್ಯುತ್ತಮ ಪುಸ್ತಕಗಳ, ಅಥವಾ ಹೆಚ್ಚಿನ ಪುಸ್ತಕಗಳ ಅಂಕಣ ಬೇಕಿದ್ದರೆ, ಕಮೆಂಟ್ ಮಾಡೋದು ಮರಿಬೇಡಿ.
ನಿಮಗೆ ಈ ಅಂಕಣ ಇಷ್ಟವಾಗಿದ್ದರೆ, ನಿಮ್ಮ ಸೋಶಿಯಲ್ ಮೀಡಿಯಾ ನಲ್ಲಿ ಶೇರ್ ಮಾಡುವುದು ಮರಿಬೇಡಿ.
ನಮ್ಮ ಇತರೆ ಓದಲು ಅತ್ಯುತ್ತಮ ಅಂಕಣಗಳು:
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ
ಇದನ್ನು ಓದಿ: ಪ್ರಾಚೀನ ಭಾರತ-ಮೂಲಾಧಾರಗಳು
ಇದನ್ನು ಓದಿ: ಅನ್ನ ಭಾಗ್ಯ ಯೋಜನ: ಭಾಗ್ಯಕ್ಕೆ ಹೊಡಿತು ಸ್ಟ್ರೋಕ್
ಇದನ್ನು ಹಾಡಿಕೊಳ್ಳಿ: ನಗು ನಗುತಾ ನಲಿ ಸಾಹಿತ್ಯ ಕನ್ನಡದಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ
ಇದನ್ನು ಹಾಡಿಕೊಳ್ಳಿ: ವಿಶ್ವ ವಿನೂತನ ಸಾಹಿತ್ಯ ಕನ್ನಡದಲ್ಲಿ
Disclaimer: When you click one of the links to Amazon, we’ll get a minute commission. We thank you in advance for your support by buying from our links 🙏.
ಡಿಸ್ಪ್ಲೇಮರ್: ನೀವು ಅಮೆಜಾನ್ನ ಯಾವುದಾದರೂ ಲಿಂಕ್ ಒತ್ತಿ ಪುಸ್ತಕಗಳನ್ನು ಕೊಂಡರೆ, ನಮಗೆ ಅಮೆಜಾನ್ ನಿಂದ ಸಣ್ಣದಾದ ಕಮಿಷನ್ ಸಿಗುತ್ತದೆ. ನಮ್ಮ ಲಿಂಕ್ಸ್ ನಿಂದ ಕೊಂಡಿದ್ದಕ್ಕಾಗಿ, ನಿಮಗೆ ನಾವು ಚಿರಋಣಿಗಳು 🙏.
ಸರ್ವೇ ಜನ ಸುಖಿನೋ ಭವಂತು 🙏.