Mind Sharing?

Nagu Nagutha Nali Lyrics are significantly a Rajanna classic, showing the best of Dr.Rajkumar in happy songs.

ನಗುನಗುತಾ ನಲಿ ನಲಿ ಹಾಡನ್ನು ಕೇಳಿದರೆ ಸಾಕು, ನಮ್ಮ ಮುಖದಲ್ಲಿ ನಗು ಉಕ್ಕಿ ಹರಿದು ಬರುತ್ತದೆ.

 

Nagu Nagutha Nali Lyrics Details | ನಗು ನಗುತಾ ನಲಿ ವಿವರಗಳು:

ಚಿತ್ರ: ಬಂಗಾರದ ಮನುಷ್ಯ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ
ಸಂಗೀತ : ಜಿ.ಕೆ.ವಂಕಟೇಶ್
ಗಾಯನ : ಪಿ.ಬಿ.ಶ್ರೀನಿವಾಸ್
ನಟರು: ರಾಜ್ ಕುಮಾರ್, ಭಾರತಿ

 

Nagu Nagutha Nali Lyrics in Kannada | ನಗು ನಗುತಾ ನಲಿ ಸಾಹಿತ್ಯ ಕನ್ನಡದಲ್ಲಿ:

ಆಹಹಾ.. ಆಹ.ಹಾ.ಆಹ.ಹ..ಹಹಾ

ನಗು ನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ

ನಗು ನಗುತಾ ನಲಿ ನಲಿ ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ ಮದುವೆ ಬ೦ಧನ
ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿ ನೋಡ

ನಗು ನಗುತಾ ನಲೀ ನಲೀ ಏನೇ ಆಗಲಿ

ಇದನ್ನು ಓದಿ: ಅನ್ನ ಭಾಗ್ಯ ಯೋಜನ: ಭಾಗ್ಯಕ್ಕೆ ಹೊಡಿತು ಸ್ಟ್ರೋಕ್
ಇದನ್ನು ಓದಿ: ತಿರುಮಲ, ತಿರುಪತಿಯಲ್ಲಿ ರೂಮ್ ಬುಕ್ ಮಾಡುವುದು ಹೇಗೆ?
ಇದನ್ನು ಓದಿ: ಪ್ರಾಚೀನ ಭಾರತ-ಮೂಲಾಧಾರಗಳು
ಸಾಹಿತ್ಯ ಹಾಡಿಕೊಳ್ಳಿ: ನೋಡು ನೋಡು ಕಣ್ಣಾರ ಕನ್ನಡ ಸಾಹಿತ್ಯ

Nagu Nagutha Nali Lyrics in English | ನಗು ನಗುತಾ ನಲಿ ಸಾಹಿತ್ಯ ಆಂಗ್ಲ ಭಾಷೆಯಲ್ಲಿ:

Nagu Naguta Nali Nali Yene Aagali
Ella Devana Kale Ende Nee Tili
Adarinda Nee Kali.

Nagu Naguta Nali Nali Ene Aagali

Jagavidu Jaana Cheluvina Taana
Ellellu Rasadoutana Ninagellellu Rasadoutana
Lategalu Kunidaaga Hoogalu Biridaaga.
|| Nagu Naguta Nali Nali ||

|| Taayi Odalina Kudiyaagi Jeevana || 2 ||
|| Moodi Bandu Chetana Taalalendu Anudina || 2 ||
Avalede Anuraaga Kudiyuta Beledaaga
|| Nagu Naguta Nali Nali ||

|| Geleyara Joteyali Kuni Kunidu ||
|| Beleyuva Sogasina Kaalavidu || 2 ||

|| Munde Youvana Maduve Bandhana ||
|| Ellellu Hosa Jeevana Aha Ellellu Hosa Jeevana ||
|| Joteyadu Doretaaga || 2 ||
Maimana Maretaaga
|| Nagu Naguta Nali Nali ||

|| Eruperina Gatiyalli Jeevana || 2 ||
|| Saagi Maagi Hiritana Tanditayya Muditana || 2 ||
Adarolu Hosadaada Ruchi Ide Savi Noda
|| Nagu Naguta Nali Nali ||

 

Kannada Old Song Lyrics on Namkannada360:

Sing These: Adavi Deviya Kaadu Janagala Song Lyrics
Sing These: Nee Mudida Mallige Hoovina Male Song Lyrics
Sing These: Surya Chandra Aakaashake Song Lyrics
Sing These: Nee Meetida Nenapellavu Song Lyrics

ನಗು ನಗುತಾ ನಲಿ ಸಾಹಿತ್ಯ ಕನ್ನಡದಲ್ಲಿ ಬಹಳ ಸುಂದರ ಹಾಡು.
ರಾಜಕುಮಾರ್ ಅವರ ಉತ್ತಮ ಹಾಡುಗಳಲ್ಲಿ ನಗು ನಗುತ ನಲಿ ನಲಿ ಒಂದು.
ಸಂತೋಷವನ್ನು ಎತ್ತಿ ಹಿಡಿಯುವ ಹಾಡು ನಮ್ಮ ಅತಿ ಉನ್ನತ ನಟ ಸಾರ್ವಭೌಮರ ನಟನೆ ಈ ಹಾಡಿನಲ್ಲಿ ಕಾಣ ಸಿಗುತ್ತದೆ.
ಪಿಬಿ.ಶ್ರೀನಿವಾಸ್ ಅವರ ಮಧುರ ಕಂಠ ಹಾಗು ಜಿ.ಕೆ.ವಂಕಟೇಶ್ ಅವರ ಸಂಗೀತ ಈ ಹಾಡನ್ನು ಕೇಳಲು ಅತ್ಯುತ್ತಮ ಹಾಡಾಗಿಸಿದೆ.
ನಗು ನಗುತ ನಲಿ ಹಾಡನ್ನ ಈ ವಿಡಿಯೋ ನಲ್ಲಿ ನೋಡಬಹುದು.
ನಿಮಗೆ ನಗು ನಗುತ ನಲಿ ಸಾಹಿತ್ಯ ಇಷ್ಟವಾಗಿದ್ದರೆ, ದಯವಿಟ್ಟು ಶೇರ್ ಮಾಡಿ.

Mind Sharing?