Mind Sharing?

ಅನ್ನ ಭಾಗ್ಯ ಯೋಜನ ವೋಟು ಒತ್ತಕ್ಕೆ ಮುಂಚೆ, ಎಲ್ಲಾ ಹಸಿರಾಗಿತ್ತು ಯೋಜನೆ! ಈಗ ಆಗಿದೆ ಒಂದು ದೊಡ್ಡ ಕರ್ಮಕಾಂಡ!

ಈಗ ಅನ್ನ ಭಾಗ್ಯ ಯೋಜನೆಗೆ ಕವಿತು ಕಾರ್ಮೋಡ.

ಸಗಣಿ ಎಸೆಯೋದಕ್ಕೆ ಶುರು ಮಾಡಿದ್ರು ಕಾಂಗ್ರೆಸ್. ಈಗ ಇವರ ಒಕ್ಕಣೆ ಏನಂದರೆ BJP ಕೊಡ್ತಾ ಇಲ್ಲ ಅಕ್ಕಿ!
ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?

 

ಸಿದ್ದಣ್ಣ ಕರ್ನಾಟಕ ಗವರ್ನಮೆಂಟ್ ಅನ್ನ ಭಾಗ್ಯ ಯೋಜನ ಬಗ್ಗೆ ಪ್ಲೇಟ್ ಚೇಂಜ್ ಮಾಡಿದ್ದು ಯಾಕೆ?

karnataka government anna bhagya yojana

ಇದು ನಮಗೆ ಗೊತ್ತಿರೋ ವಿಷಯನೇ.

ಆದ್ರೂ ಗೊತ್ತಿಲ್ಲದ ಹಂಗೆ ಕಣ್ಣು ಮುಚ್ಚಿಕೊಂಡು ಕೂತಿರ್ತೀವಿ.

ಯಾಕಂದ್ರೆ ನಮ್ಮ ಕರ್ನಾಟಕ ಜನಕ್ಕೆ ಮರೆತ್ಹೋಗೋ ಕಾಯಿಲೆ ಜಾಸ್ತಿ!

ಹಿಂದೆ, 30 ಕೆಜಿ ಅಕ್ಕಿಯನ್ನು ಒಂದು ರೂಪಾಯಿಗೆ ಕೊಡ್ತೀವಿ ಅಂತ ಹೇಳಿ, ಒಮ್ಮೆ ಮೂವತ್ತು ಕೆಜಿ ಅಕ್ಕಿ.

ಮುಂದಿನ ತಿಂಗಳು 15 ಕೆಜಿ ಅಕ್ಕಿ 15 ಕೆಜಿ ರಾಗಿ, ಅದರ ಮುಂದಿನ ತಿಂಗಳು 10 ಕೆಜಿ ಅಕ್ಕಿ, 10 ಕೆಜಿ ರಾಗಿ, 10 ಕೆಜಿ ಗೋಧಿ.

ಅದರ ಮುಂದಿನ ತಿಂಗಳು, ತಿನ್ನಿಸಿದರು ಚಳ್ಳೆಹಣ್ಣು!

4 ತಿಂಗಳಲ್ಲಿ 30 ಕೆಜಿ ಅಕ್ಕಿ ಆಗಿತ್ತು ಸೊನ್ನೆ!

ಈಗ ಬಿಟ್ಟಿ ಭಾಗ್ಯಗಳನ್ನ ತೋರಿಸಿ, ಗೆದ್ದಿರುವ ಕಾಂಗ್ರೆಸ್ ಭಾಗ್ಯಗಳಿಗೆ ಬಾಗಿಲು ತೆಗೆಯಕ್ಕೆ ಆಗುತ್ತಾ ಇಲ್ಲ! 

ಸಿದ್ದಣ್ಣ ಈಗ ಮೋದಿಯವರು ಅಕ್ಕಿ ಕೊಡ್ತಾ ಇಲ್ಲ ಅಂತ ಸಗಣಿ ಎಸೆಯಕ್ಕೆ ಶುರು ಮಾಡಿದ್ದಾರೆ.

ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ 5 ಕೆಜಿ ಅಕ್ಕಿ ಸೆಂಟ್ರಲ್ ಗೌರ್ಮೆಂಟ್ ನಿಂದಾನೆ ಸಿಕ್ತಾ ಇರೋದು.

ಈಗ ಸಿದ್ದಣ್ಣ ಅವರ ತೆವಲು ತೀರಿಸಿಕೊಳ್ಳಕ್ಕೆ, ಬಿಜೆಪಿ ತಲೆಯ ಮೇಲೆ ಇಲ್ಲದ ಗೂಬೆಯನ್ನು ಹಿಡಿದು ತಂದು, ಇಡಕ್ಕೆ ಪ್ರಯತ್ನ ಪಡ್ತಿದ್ದಾರೆ. 

ಅಲ್ಲ ಸ್ವಾಮಿ 10 ಕೆ.ಜಿ ಅಕ್ಕಿಯನ್ನು ಎಲ್ಲರಿಗೂ ಕೊಡೋ ಕಾರ್ಯಕ್ರಮ ಅಂತ ಹೇಳಿ, ಈಗ ಕೇವಲ BPL ಕಾರ್ಡ್ ಹೋಲ್ಡರ್ ಗೆ ಮಾತ್ರ, ಅಕ್ಕಿ ಅಂತ ಬೊಗಳೆ ಬಿಟ್ಟಿದ್ದಾಯ್ತು.

ಅಲ್ಲ ಸ್ವಾಮಿ, ಬಿಟ್ಟಿ ಭಾಗ್ಯ ಉಚಿತ ಅಂತ ಹೇಳಕ್ಕೆ ಮುಂಚೆ, ಹೇಗೆ ಕೊಡಬೇಕು ಅಂತ ಯೋಚನೆ ಇರ್ಲಿಲ್ವ?

ಕೊನೆಗೆ ಸಿದ್ದಣ್ಣ ಏನು ಅಂತ ಪ್ಲೇಟ್ ಚೇಂಜ್ ಮಾಡಿದ್ರು?

ಸಿದ್ದಣ್ಣ ವೋಟು ಹಾಕಿಸಿ ಕೊಳ್ಳುವುದಕ್ಕೆ ಬಿಟ್ಟಿ ಭಾಗ್ಯ ಬಡಬಡ ಅಂತ ಬಾಯಿ ಮಾಡ್ಬಿಟ್ರು!

ಈಗ ಸಿದ್ದಣ್ಣ ಅವರ ನಿದ್ದೆ ಮಾಡಿದಷ್ಟೇ ಸುಲಭವಾಗಿ, ಪ್ಲೇಟ್ ಚೇಂಜ್ ಮಾಡ್ಬಿಟ್ರು!

ನಾವು ಈ ಬಿಟ್ಟಿ ಭಾಗ್ಯ ಐದು ವರ್ಷದಲ್ಲಿ, ಯಾವಾಗ ಬೇಕಾದರೂ ಕೊಡ್ತೀವಿ ಅಂತ ಬೊಗಳೆ ರಾಮಯ್ಯ ಹೇಳ್ತಾ ಇದ್ದಾರೆ!

ನಂಬಿಕೆ ಇಲ್ವಾ, ಈ ವಿಡಿಯೋ ನೋಡಿ

 

ಕೊನೆಗೆ ಕರ್ನಾಟಕ ಗವರ್ನಮೆಂಟ್ ಅನ್ನ ಭಾಗ್ಯ ಯೋಜನ ಅಂದ್ರೆ ಏನು?

anna bhagya

ಎಲೆಕ್ಷನ್ ಮುಂಚೆ ಸಿದ್ದಣ್ಣ ಈ ಬಿಟ್ಟಿ ಭಾಗ್ಯ, ಎಲ್ಲರಿಗೂ 10 ಕೆಜಿ ಅಕ್ಕಿ ಉಚಿತ ಅಂತ ಪುಂಗಿದ್ದರು.

ಈಗ ಅದು ಕೇವಲ BPL ಕಾರ್ಡ್ ದಾರರಿಗೆ ಮಾತ್ರ ಅಂತ ಶುರು ಮಾಡಿದ್ದಾರೆ.

ಇದೇ ರೀತಿ ಎಲ್ಲಾ ಬಿಟ್ಟಿ ಭಾಗ್ಯಗಳು, ತೊಟ್ಟಿ ಸೇರ್ತಾಯಿದೆ!

 

ಹೇಗೆ ಪಡ್ಕೋಬೇಕು ಅನ್ನ ಭಾಗ್ಯ ಯೋಜನ ಕರ್ನಾಟಕ?

ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇದ್ದರೆ ಸಾಕು. ಈ ಬಿಟ್ಟಿ ಭಾಗ್ಯ ಸಿಗುತ್ತದೆ.

ಬಿಪಿಎಲ್ ಕಾರ್ಡ್ ಎಂದರೆ, ಬಿಲೋ ಪಾವರ್ಟಿ ಲೈನ್.

ಈ ಕಾರ್ಡ್ ಅನ್ನ ಪ್ರಕಾರ ನಿಮಗೆ ವರ್ಷಕ್ಕೆ ರೂಪಾಯಿ 12,000 ಗಿಂತ ಕಡಿಮೆ ಆಮದನು ಇರುತ್ತದೆ ಎಂದು ರೇಷನ್ ಕಾರ್ಡ್ ಮಾಡಿಕೊಡುತ್ತಾರೆ.

 

ಅನ್ನ ಭಾಗ್ಯ ಕರ್ನಾಟಕ ಎಲ್ಲಿಗೆ ಬಂದು ನಿಂತಿದೆ?

  1. ಸಿದ್ದಣ್ಣ ಮೊದಲು ಮೋದಿಯವರು ಅಕ್ಕಿ ಕೊಡ್ತಿಲ್ಲ ಅಂತ ಸಗಣಿ ಎತ್ತಿದ್ದು ಆಯ್ತು.
  2. ಈಗ ಪಂಜಾಬ್ ನಿಂದ ಅಕ್ಕಿ ತರಿಸಿಕೊಡ್ತೀವಿ ಅನ್ನೋ ಮಾತು ಆಯ್ತು. ಇದರ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಂತೆ, ಅದಕ್ಕೆ ಇವರಿಗೆ ದುಡ್ಡು ಸಾಕಾಗಲ್ವಂತೆ.
  3. ಈಗ ಬೇರೆ ಕಂಪನಿಗಳಿಂದ ಕೊಟೇಶನ್ ಕೇಳಿದೆ ಕರ್ನಾಟಕ ಸರ್ಕಾರ, ಈ ಅನ್ನ ಭಾಗ್ಯ ಕರ್ನಾಟಕ ಪ್ರಚಲಿತಗೊಳಿಸಕ್ಕೆ!
  4. ಈಗ ಸಿದ್ದಣ್ಣ ತಾವು ನಿದ್ದೆ ಮಾಡಿದಷ್ಟೇ ಸುಲಭವಾಗಿ ನಾವು ಹೇಳಿರೋ ಬಿಟ್ಟಿ ಭಾಗ್ಯಗಳು ಐದು ವರ್ಷದಲ್ಲಿ ಕೊಡುವ ಯೋಜನೆಗಳು ಅಂತ ಪ್ಲೇಟ್ ಚೇಂಜ್ ಮಾಡಿದ್ದು ಆಯ್ತು!

ಒಟ್ಟಿನಲ್ಲಿ ಹೇಳಬೇಕು ಅಂದ್ರೆ ಕರ್ನಾಟಕ ಗವರ್ನಮೆಂಟ್ ಅನ್ನೋ ಭಾಗ್ಯ ಯೋಜನೆ, ಅದು ಎಲ್ಲಿ ಶುರುವಾಯಿತು ಅದು ಅಲ್ಲೇ ನಿಂತಿದೆ!

ಇದು ಒಂದು ರೀತಿ, “ಹೇಳುವುದು ಒಂದು ಮಾಡುವುದು ಇನ್ನೊಂದು” ಅನ್ನುವುದಕ್ಕೆ ಸರಿಯಾಗಿ ಸಿದ್ದಣ್ಣ ಗೌರ್ಮೆಂಟ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ: ತಿರುಮಲ, ತಿರುಪತಿಯಲ್ಲಿ ರೂಮ್ ಬುಕ್ ಮಾಡುವುದು ಹೇಗೆ? How to Book Rooms in Tirumala/Tirupati?
ಇದನ್ನು ಓದಿ: ಪ್ರಾಚೀನ ಭಾರತ-ಮೂಲಾಧಾರಗಳು/Ancient India-Early ಎವಿಡೆನ್ಸ್ಸ್
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ/Kannadada vachanakaaru mattu avara ankithanama
ಇದನ್ನು ಓದಿ: ಕನ್ನಡದ ಮೊದಲುಗಳ ಬಗ್ಗೆ ನಿಮಗೆಷ್ಟು ಗೊತ್ತು/Facts about kannada and karnataka
ಇದನ್ನು ಹಾಡಿಕೊಳ್ಳಿ: ನಗು ನಗುತಾ ನಲಿ ಲಿರಿಕ್ಸ್
ಇದನ್ನು ಹಾಡಿಕೊಳ್ಳಿ: ಅಡವಿದೇವಿಯ ಕಾಡುಜನಗಳ ಈ ಹಾಡು

 

ನಿಮಗೆ ಅನ್ನ ಭಾಗ್ಯ ಯೋಜನ (anna bhagya yojana) ಪೋಸ್ಟ್ ಇಷ್ಟ ಆಗಿದ್ದರೆ, ಎಲ್ಲರಿಗೂ ಶೇರ್ ಮಾಡಿ!

ಸರ್ವೇ ಜನ ಸುಖಿನೋ ಭವಂತು

Mind Sharing?