Mind Sharing?

ನೋಡು ನೋಡು ಕಣ್ಣಾರ ಕನ್ನಡ ಸಾಹಿತ್ಯ ಕೇಳಿದರೆ ರೋಮಾಂಚನ ಹಾಗೂ ಪುಳಕವಾಗುತ್ತದೆ.

ಚಾಮುಂಡಿ ದೇವಿಯ ಮೇಲೆ ಆಧಾರಿತ ಈ ಹಾಡು ಭಕ್ತಿಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಈಗ ಕೇಳೋಣ ನೋಡಿ ನೋಡು ಕಣ್ಣಾರ ಕನ್ನಡ ಸಾಹಿತ್ಯ ನಿಮಗಾಗಿ.

 

ನೋಡಿ ನೋಡು ಕಣ್ಣಾರ ಸಾಹಿತ್ಯ:

 

|| ನೋಡು ನೋಡು ಕಣ್ಣಾರ ನಿಂತಿಹಳು ||
|| ನಗು ನಗುತ ಚಾಮುಂಡಿ ನಿಂತಿಹಳು ||

ತಾಯಿ ಹೃದಯ ತಂದ
ತುಂಬು ಮಮತೆ ಇಂದ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರದಿಹಳು…

|| ನೋಡು ನೋಡು ಕಣ್ಣಾರ ನಿಂತಿಹಳು ||
|| ನಗು ನಗುತ ಚಾಮುಂಡಿ ನಿಂತಿಹಳು ||

ಮೈಸೂರು ನಗರದ ಬೆಟ್ಟದ ಮೇಲೆ
ಮಹಿಸಾಸುರ ಸೂಧನಿಯ ವೈಭವ ಲೀಲೆ
ಮೈಸೂರು ನಗರದ ಬೆಟ್ಟದ ಮೇಲೆ
ಮಹಿಸಾಸುರ ಸೂಧನಿಯ ವೈಭವ ಲೀಲೆ
ಧನುಜ ಸಂಹಾರಿಣಿ ತ್ರಿಭುವನ ಪೋಷಣೆ
ಶಂಕರನ ರಾಣಿಗಿವ ಹೂಗಳ ಮಾಲಾ

|| ನೋಡು ನೋಡು ಕಣ್ಣಾರ ನಿಂತಿಹಳು ||
|| ನಗು ನಗುತ ಚಾಮುಂಡಿ ನಿಂತಿಹಳು ||

ನಂಬಿರುವ ಭಕ್ತರ ರಕ್ಷೆಗಾಗಿ
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಂಬಿರುವ ಭಕ್ತರ ರಕ್ಷೆಗಾಗಿ
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳು ಹಿರಿ ದೈವವಾಗಿ

|| ನೋಡು ನೋಡು ಕಣ್ಣಾರ ನಿಂತಿಹಳು ||
|| ನಗು ನಗುತ ಚಾಮುಂಡಿ ನಿಂತಿಹಳು ||

ಉಕ್ಕಿ ಬಹ ನದಿಯಲ್ಲಿ ಅವಳ ನಗೆ
ಬೀಸಿಬಹ ಗಾಳಿಯಲಿ ಅವಳುಸಿರ
ಹಸಿ ಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವು ಹಲವು ಬಗೆ

|| ನೋಡು ನೋಡು ಕಣ್ಣಾರ ನಿಂತಿಹಳು ||
|| ನಗು ನಗುತ ಚಾಮುಂಡಿ ನಿಂತಿಹಳು ||

ತಾಯಿ ಹೃದಯ ತಂದ
ತುಂಬು ಮಮತೆ ಇಂದ
ಬಾ ಇಲ್ಲಿ ಓ ಕಂದ ಎನುತಿಹಳು
ಕೈ ಬೀಸಿ ಬಳಿಗೆ ನಮ್ಮ ಕರದಿಹಳು…

|| ನೋಡು ನೋಡು ಕಣ್ಣಾರ ನಿಂತಿಹಳು ||
|| ನಗು ನಗುತ ಚಾಮುಂಡಿ ನಿಂತಿಹಳು ||

 

ಈ ಸಾಹಿತ್ಯ ಹಾಡಿಕೊಳ್ಳಿ: ಸೂರ್ಯ ಚಂದ್ರ ಆಕಾಶಕೆ-ನೀ ಬರೆದ ಕಾದಂಬರಿ
ಈ ಸಾಹಿತ್ಯ ಹಾಡಿಕೊಳ್ಳಿ: ನಗು ನಗುತಾ ನಲಿ ಲಿರಿಕ್ಸ್
ಈ ಸಾಹಿತ್ಯ ಹಾಡಿಕೊಳ್ಳಿ: ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ-ಗಾಂಧಿನಗರ
ಈ ಸಾಹಿತ್ಯ ಹಾಡಿಕೊಳ್ಳಿ: ನೀ ಮೀಟಿದ ನೆನಪೆಲ್ಲವು-ನೀ ಬರೆದ ಕಾದಂಬರಿ

ಈ ಸಾಹಿತ್ಯ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಶೇರ್ ಮಾಡೋದನ್ನ ಮರಿಬೇಡಿ.

ನಿಮಗೆ ಒಳಿತಾಗಲಿ.

ಸರ್ವೇ ಜನ ಸುಖಿನೋ ಭವಂತು

Mind Sharing?