ದಿ: 01-04-2006 ರ ನಂತರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸೇವೆಗೆ ಸೇರುವ ನೌಕರರನ್ನು ಹಳೆಯ ಪಿಂಚಣಿ ವ್ಯವಸ್ಥೆಯಿಂದ ಹೊರಗೆ ಇಟ್ಟಿದ್ದು, ಇವರುಗಳಿಗೆ NPS ಎಂಬ ಹೊಸ ಪಿಂಚಣಿ ಪದ್ದತಿಯನ್ನು ಜಾರಿಗೆ ತಂದಿದ್ದು ದಿ: 01-04-2006 ರ ಪೂರ್ವದಲ್ಲಿಯೇ ಸರ್ಕಾರಿ ನೌಕರಿಯಲ್ಲಿದ್ದು ತದನಂತರದಲ್ಲಿ ಬೇರೆ ಇಲಾಖೆಗೆ ಆಯ್ಕೆಯಾಗುವ ನೌಕರರನ್ನು NPS ವ್ಯಾಪ್ತಿಯಲ್ಲಿ ತರಬೇಕೇ ಅಥವಾ ಹಳೆ ಪಿಂಚಣಿ ವ್ಯವಸ್ಥೆಯಲ್ಲಿ ಮುಂದುವರೆಸಬೇಕೇ ಎಂಬ ಪ್ರಶ್ನೆಗೆ ಕರ್ನಾಟಕ ರಾಜ್ಯ ಆರ್ಥಿಕ ಇಲಾಖೆಯು ಒಂದು ಆದೇಶವನ್ನು ಹೊರಡಿಸಿದ್ದು ಅದರ ಪ್ರಕಾರ ದಿ: 01-04-2006 ರ ಪೂರ್ವದಲ್ಲಿಯೇ ಸರ್ಕಾರಿ ನೌಕರಿಯಲ್ಲಿದ್ದು ತದನಂತರದಲ್ಲಿ ಬೇರೆ ಇಲಾಖೆಗೆ ಆಯ್ಕೆಯಾಗುವ ನೌಕರರನ್ನು ಹಳೆ ಪಿಂಚಣಿ ವ್ಯವಸ್ಥೆಯಲ್ಲಿ ಮುಂದುವರೆಸಬೇಕೆಂದು ಆದೇಶ ಮಾಡಿರುತ್ತದೆ. ಈ ಆದೇಶದ ಪ್ರತಿಯನ್ನು ನೋಡಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ