ಕನ್ನಡದ ಮೊದಲುಗಳ ಬಗ್ಗೆ ನಿಮಗೆಷ್ಟು ಗೊತ್ತು? Facts about Kannada Language you din’t Think You would Ever Know!
ಸಾಹಿತ್ಯ
೧) ಕನ್ನಡದ ಆದಿಕವಿ, ಮೊದಲನೇ ಐತಿಹಾಸಿಕ ನಾಟಕಕಾರ, ಮೊದಲನೇ ಬಾರಿಗೆ ಕಾವ್ಯದಲ್ಲಿ ರಗಳೆ ಬಳಸಿದವರು ಯಾರು?
ಉತ್ತರ: ಪಂಪ
೨) ಕನ್ನಡದ ಮೊದಲ ಮುಸ್ಲಿಂ ಕವಿ ಯಾರು?
ಉತ್ತರ: ಸಂತ ಶಿಶುನಾಳ ಷರೀಫ
೩) ಕನ್ನಡದ ಮೊದಲ ವಚನಕಾರ ಯಾರು?
ಉತ್ತರ: ದೇವರ ದಾಸಿಮಯ್ಯ
೪) ಕನ್ನಡದ ಮೊದಲ ಕೀರ್ತನಕಾರ ಯಾರು?
ಉತ್ತರ: ನರಹರಿ ತೀರ್ಥ
೫) ಕನ್ನಡದ ಮೊದಲ ಮೂಕನಾಟಕ ಬರೆದವರು ಯಾರು?
ಉತ್ತರ: ಜಿ. ಶ್ರೀನಿವಾಸರಾಜು
೬) ಕನ್ನಡದ ಮೊದಲ ಶೃಂಗಾರ ಕಾದಂಬರಿ ಬರೆದವರು ಯಾರು?
ಉತ್ತರ: ಗುಬ್ಬಿ ಮರಿಗ್ಯಾರಾಧ್ಯ
೭) ಕನ್ನಡದ ಮೊದಲ ಕಥನಕವನ ಬರೆದವರು ಯಾರು?
ಉತ್ತರ: ಪಂಜೆ ಮಂಗೇಶರಾಯ
ಓದಲೇ ಬೇಕಾದ ಪುಸ್ತಕಗಳು: ಈ ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಓದಿಲ್ಲವೆಂದರೆ ನೀವು ಸಾಕಷ್ಟು ಕಳೆದುಕೊಂಡಿದ್ದೀರಿ
೮) ಕನ್ನಡದಲ್ಲಿ ಮೊದಲು ಪ್ರಗಾಥಶಬ್ದರೂಪ ಬಳಸಿದವರು ಯಾರು?
ಉತ್ತರ: ಬಿ.ಎಂ. ಶ್ರೀಕಂಠಯ್ಯ
೯) ಪರ್ಷಿಯನ್ ಕೃತಿಯನ್ನು ಮೊದಲು ಕನ್ನಡಕ್ಕೆ ಅನುವಾದಿಸಿದವರು ಯಾರು?
ಉತ್ತರ: ಎಂ. ಗೋವಿಂದ ಪೈ (ಉಮ್ಮರ್ ಕಯ್ಯಮ್)
೧೦) ಕನ್ನಡದ ಮೊದಲ ಸಾಂಗತ್ಯ ಬಳಸಿದವರು ಯಾರು?
ಉತ್ತರ: ಜೇಡರ ದಾಸಿಮಯ್ಯ
೧೧) ಕನ್ನಡದ ಗಣಿತ ಶಾಸ್ತ್ರಜ್ಞ ಯಾರು?
ಉತ್ತರ: ಮಹಾವೀರಾಚಾರ್ಯ
೧೨) ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಯಾವುದು?
ಉತ್ತರ: ಇಂದಿರಾಬಾಯಿ
೧೩) ಕನ್ನಡದ ಮೊದಲ ವ್ಯಾಕರಣ ಪುಸ್ತಕ ಯಾವುದು ಮತ್ತು ಅದನ್ನು ಬರೆದವರು ಯಾರು?
ಉತ್ತರ: ಶಬ್ದಮಣಿದರ್ಪಣ. ಬರೆದವರು- ಕೇಶಿರಾಜ @ ಎರಡನೇ ನಾಗವರ್ಮ
೧೪) ಕನ್ನಡದ ಮೊದಲ ಮಹಾಕಾವ್ಯ ಯಾವುದು?
ಉತ್ತರ: ಆದಿಪುರಾಣ ಬರೆದವರು: ಪಂಪ
೧೫) ಕನ್ನಡದ ಮೊದಲ ಕವಯಿತ್ರಿ ಯಾರು?
ಉತ್ತರ: ಅಕ್ಕ ಮಹಾದೇವಿ
೧೬) ಕನ್ನಡದ ಮೊದಲ ಕೃತಿ ಯಾವುದು?
ಉತ್ತರ: ಕವಿರಾಜಮಾರ್ಗ. ಇದು ಕನ್ನಡದ ಮೊದಲ ಲಕ್ಷಣ ಗ್ರಂಥವೂ ಹೌದು
೧೭) ಕನ್ನಡದ ಮೊದಲ ಗದ್ಯಕೃತಿ ಯಾವುದು
ಉತ್ತರ: ವಡ್ಡಾರಾಧನೆ . ಬರೆದವರು- ಶಿವಕೋಟ್ಯಾಚಾರ್ಯ
೧೮) ಕನ್ನಡದ ಮೊದಲ ನಾಟಕ ಯಾವುದು?
ಉತ್ತರ: ಮಿತ್ರವಿಂದಾ ಗೋವಿಂದ. ಬರೆದವರು- ಸಿಂಗರಾರ್ಯ
೧೯) ಕನ್ನಡದಲ್ಲಿ ಅಚ್ಚಾದ ಮೊದಲ ಕೃತಿ ಯಾವುದು?
ಉತ್ತರ: ದಿ ಗ್ರಾಮರ್ ಆಫ್ ಕರ್ನಾಟಕ ಲ್ಯಾಂಗ್ವೇಜ್
೨೦) ಕನ್ನಡ ಅಕ್ಷರದ ಅಚ್ಚಿನ ಮೊಳೆಗಳ ವಿನ್ಯಾಸಕಾರ ಯಾರು?
ಉತ್ತರ: ಅತ್ತಾವರ ಅನಂತಾಚಾರಿ
೨೧) ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ ಯಾವುದು?
ಉತ್ತರ: ಚೋರ ಗ್ರಹಣ ತಂತ್ರ ಲೇಖಕರು: ಎಂ. ವೆಂಕಟಕೃಷ್ಣಯ್ಯ
೨೨) ಕನ್ನಡದ ಮೊದಲ ವಿಮರ್ಶಾತ್ಮಕ ಕೃತಿ ಯಾವುದು?
ಉತ್ತರ: ಕವಿಚಕ್ರವರ್ತಿ ರನ್ನ ಲೇಖಕರು: ದೊರೆಸ್ವಾಮಿ ಅಯ್ಯಂಗಾರ್
೨೩) ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
ಉತ್ತರ: ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
೨೪) ಕನ್ನಡದ ಮೊದಲ ಛಂದೋಗ್ರಂಥ ಯಾವುದು?
ಉತ್ತರ: ಛಂದೋಬುಧಿ. ಬರೆದವರು: ಒಂದನೇ ನಾಗವರ್ಮ
೨೫) ಆಧುನಿಕ ಕನ್ನಡದ ಮೊದಲ ಮಹಾಕಾವ್ಯ ಯಾವುದು?
ಉತ್ತರ: ಶ್ರೀ ರಾಮಾಯಣದರ್ಶನಂ. ಲೇಖಕರು: ಕುವೆಂಪು
೨೬) ಕನ್ನಡದ ಮೊದಲ ಪ್ರೇಮಗೀತೆ ಸಂಕಲನ ಯಾವುದು?
ಉತ್ತರ: ಒಲುಮೆ. ಲೇಖಕರು: ತಿ.ನಂ.ಶ್ರೀ
೨೭) ಕನ್ನಡದ ಮೊದಲ ಅಭಿನಂದನಾ ಗ್ರಂಥ ಯಾವುದು?
ಉತ್ತರ: ಸಂಭಾವನೆ. ಲೇಖಕರು: ಬಿ.ಎಂ.ಶ್ರೀ
೨೮) ಕನ್ನಡದ ಮೊದಲ ಮೊದಲ ಪ್ರಬಂಧ ಸಂಕಲನ ಯಾವುದು?
ಉತ್ತರ: ಲೋಕರಹಸ್ಯ. ಲೇಖಕರು- ಬಿ. ವೆಂಕಟಾಚಾರ್ಯ
೨೯) ಕನ್ನಡದ ಮೊದಲ ಪತ್ರಿಕೆ ಯಾವುದು?
ಉತ್ತರ: ಮಂಗಳೂರು ಸಮಾಚಾರ. ಸಂಪಾದಕರು: ಹರ್ಮನ್ ಮೊಗ್ಲಿಂಗ್
೩೦) ಕನ್ನಡದ ಮೊದಲ ಸಂಕಲನ ಗ್ರಂಥ ಯಾವುದು?
ಉತ್ತರ: ಸೂಕ್ತಿ ಸುಧಾರ್ಣವ. ಲೇಖಕರು: ಮಲ್ಲಿಕಾರ್ಜುನ
೩೧) ಕನ್ನಡದ ಮೊದಲ ಪ್ರವಾಸ ಕಥನ ಯಾವುದು?
ಉತ್ತರ: ಪಂಪಯ. ಲೇಖಕರು: ವಿ. ಸೀತಾರಾಮಯ್ಯ
೩೨) ಕನ್ನಡದ ಮೊದಲ ವೈದ್ಯಗ್ರಂಥ ಯಾವುದು?
ಉತ್ತರ: ಗೋವೈದ್ಯ
೩೩) ಕನ್ನಡದ ಮೊದಲ ಶತಕ ಕೃತಿ ಯಾವುದು?
ಉತ್ತರ: ಚಂದ್ರಚೂಡಮಣಿ. ಬರೆದವರು: ನಾಗವರ್ಮಾಚಾರ್ಯ
೩೪) ಹಿಂದಿಯಲ್ಲಿ ಪ್ರಕಟಗೊಂಡ ಮತ್ತು ಪ್ರದರ್ಶನಗೊಂಡ ಕನ್ನಡದ ಮೊದಲ ನಾಟಕ ಯಾವುದು?
ಉತ್ತರ: ಕೇಳುಜನಮೇಜಯ
೩೫) ಕನ್ನಡದ ಮೊದಲ ತಾಂತ್ರಿಕ ಪದಕೋಶ ಯಾವುದು?
ಉತ್ತರ: ಔದ್ಯಮಿಕ ನಿಘಂಟು.
೩೬) ಕನ್ನಡದ ಮೊದಲ ಜೀವನ ಚರಿತ್ರೆಯ ಕೃತಿ ಯಾವುದು?
ಉತ್ತರ: ಕುಣಿಗಲ್ ರಾಮಶಾಸ್ತ್ರಿ
೩೭) ಕನ್ನಡದ ಮೊದಲ ಸಾಹಿತ್ಯದ ನಿಘಂಟು ಯಾವುದು?
ಉತ್ತರ: ರನ್ನಕಂದ
೩೮) ಕನ್ನಡದ ಮೊದಲ ಆಯುರ್ವೇದ ಗ್ರಂಥ ಯಾವುದು?
ಉತ್ತರ: ಕರ್ನಾಟಕ ಕಲ್ಯಾಣಕಾರಕ
೩೯) ಕನ್ನಡದ ಮೊದಲ ಪ್ರವಾಸ ಕಥನ ಯಾವುದು?
ಉತ್ತರ: ದಕ್ಷಿಣ ಭಾರತಯಾತ್ರೆ
೪೦) ಕನ್ನಡದ ಮೊದಲ ಗದ್ಯ ನಿಘಂಟು ಯಾವುದು?
ಉತ್ತರ: ಕರ್ನಾಟಕ ಶಬ್ದಸಾರ
೪೧) ಕನ್ನಡದ ಮೊದಲ ವಿಷಯ ವಿಶ್ವಕೋಶ ಯಾವುದು?
ಉತ್ತರ: ವಿವೇಕ ಚಿಂತಾಮಣಿ
೪೨) ಕನ್ನಡದ ಮೊದಲ ಗಣಿತಶಾಸ್ತ್ರ ಕೃತಿ ಯಾವುದು?
ಉತ್ತರ: ವ್ಯವಹಾರ ಗಣಿತ
೪೩) ಕನ್ನಡದ ಮೊದಲ ಜ್ಯೋತಿಷ್ಯಗ್ರಂಥ ಯಾವುದು?
ಉತ್ತರ: ಜಾತಕ ತಿಲಕ
೪೪) ಕನ್ನಡದ ಮೊದಲ ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಕಾದಂಬರಿ ಯಾವುದು?
ಉತ್ತರ: ಕುಮುದಿನಿ. ಲೇಖಕರು: ಗಳಗನಾಥ
೪೫) ಕನ್ನಡದ ಮೊದಲ ಐತಿಹಾಸಿಕ ಸ್ವತಂತ್ರ ಕಾದಂಬರಿ ಯಾವುದು?
ಉತ್ತರ: ಸೂರ್ಯಕಾಂತ್ (ಗದಗಕರ್-೧೮೯೨)
೪೬) ಕನ್ನಡದಲ್ಲಿ ಮೊದಲ ಬಾರಿಗೆ ತ್ರಿಪದಿ ಛಂದಸ್ಸಿನ ಬಳಕೆಯಾದದ್ದು ಎಲ್ಲಿ?
ಉತ್ತರ: ಬಾದಾಮಿಯ ಕಪ್ಪೆ ಅರೆಭಟ್ಟನ ಶಾಸನ
೪೭) ಕನ್ನಡದ ಮೊದಲ ಮಕ್ಕಳ ವಿಶ್ವಕೋಶ ಯಾವುದು?
ಉತ್ತರ: ಬಾಲಪ್ರಪಂಚ ಲೇಖಕರು: ಕಾರಂತ
ಚಲನಚಿತ್ರ
೪೮) ಕನ್ನಡದ ಮೊದಲ ಚಲನಚಿತ್ರ ಯಾವುದು?
ಉತ್ತರ: ಸತಿ ಸುಲೋಚನಾ. ನಿರ್ದೇಶನ: ವೈ.ವಿ. ರಾವ್ . ೧೯೩೪ ರಲ್ಲಿ ಬಿಡುಗಡೆಗೊಂಡಿತು
೪೯) ಕನ್ನಡದ ಮೊದಲ ಮೂಕಿ ಚಲನಚಿತ್ರ ಯಾವುದು?
ಉತ್ತರ: ವಸಂತಸೇನ. ೧೯೩೧ ರಲ್ಲಿ ಬಿಡುಗಡೆಯಾಗಿದ್ದು ಮೃಚ್ಛಕಟಿಕ ಕಾದಂಬರಿ ಆಧಾರಿತ ಚಲನಚಿತ್ರ
೫೦) ಕನ್ನಡದ ಮೊದಲ ಕಾದಂಬರಿ ಆಧಾರಿತ ಚಲನಚಿತ್ರ ಯಾವುದು?
ಉತ್ತರ: ಕರುಣೆಯೇ ಕುಟುಂಬದ ಕಣ್ಣು
೫೧) ಕನ್ನಡದ ಮೊದಲ ವರ್ಣರಂಜಿತ ಚಲನಚಿತ್ರ ಯಾವುದು?
ಉತ್ತರ: ಅಮರಶಿಲ್ಪಿ ಜಕಣಾಚಾರಿ
೫೨) ಸ್ವರ್ಣಕಮಲ ಪ್ರಶಸ್ತಿ ಗಳಿಸಿದ ಕನ್ನಡದ ಮೊದಲ ಚಲನಚಿತ್ರ ಯಾವುದು?
ಉತ್ತರ: ಸಂಸ್ಕಾರ
೫೩) ಕನ್ನಡದ ಮೊದಲ ಚಲನಚಿತ್ರ ಸಂಗೀತ ನಿರ್ದೇಶಕಿ ಯಾರು?
ಉತ್ತರ: ಅನುಸೂಯಾದೇವಿ
೫೪) ಕನ್ನಡದ ಮೊದಲ ಚಲನಚಿತ್ರ ನಿರ್ಮಾಪಕಿ ಯಾರು?
ಉತ್ತರ: ಎಂ.ವಿ. ರಾಜಮ್ಮ
೫೫) ಕರ್ನಾಟಕದ ಮೊದಲ ಚಿತ್ರಮಂದಿರ ಯಾವುದು?
ಉತ್ತರ: ಪ್ಯಾರಮೌಂಟ್
೫೬) ಕನ್ನಡದ ಮೊದಲ ಚಲನಚಿತ್ರ ಛಾಯಾಗ್ರಾಹಕಿ ಯಾರು?
ಉತ್ತರ: ವಿಜಯಲಕ್ಷ್ಮಿ
೫೭) ಕನ್ನಡದ ಮೊದಲ ಚಲನಚಿತ್ರ ನಿರ್ದೇಶಕಿ ಯಾರು?
ಉತ್ತರ: ಲಕ್ಷ್ಮಿ ಚಿತ್ರ: ಮಕ್ಕಳ ಸೈನ್ಯ
೫೮) ಕನ್ನಡದ ಮೊದಲ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕಿ ಯಾರು?
ಉತ್ತರ: ಪ್ರೇಮ ಕಾರಂತ್
೫೯) ಗಿನ್ನಿಸ್ ದಾಖಲೆ ಬರೆದ ಕನ್ನಡದ ಚಲನಚಿತ್ರ ಯಾವುದು?
ಉತ್ತರ: ಶಾಂತಿ. ಇದು ೨೦೦೫ ರಲ್ಲಿ ಬಿಡುಗಡೆಯಾಗಿದ್ದು ಏಕ ವ್ಯಕ್ತಿ ನಟನೆಯ ಹಾಗು ಇತರೆಯವರ ಧ್ವನಿಯಿಂದ ಕೂಡಿರುವ ಚಿತ್ರ. ಇದು ೧ ಗಂಟೆ ೧೫ ನಿಮಿಷಗಳ ಚಲನಚಿತ್ರವಾಗಿದ್ದು ನಟಿ ಭವನ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ
೬೦) ಬೇರೆ ಭಾಷೆಗಳಿಗೆ ರಿಮೇಕ್ ಆದ ಕನ್ನಡದ ಮೊದಲ ಚಲನಚಿತ್ರ ಯಾವುದು?
ಉತ್ತರ: ಅನುರಾಗ ಅರಳಿತು. ೧೯೮೬ ರಲ್ಲಿ ಬಿಡುಗಡೆಯಾದ ಈ ಚಲನಚಿತ್ರ ೬ ಭಾರತೀಯ ಭಾಷೆಗಳಿಗೆ ರಿಮೇಕ್ ಆಗಿತ್ತು
ಇತಿಹಾಸ
೬೧) ಕನ್ನಡದ ಮೊದಲ ಶಾಸನ ಯಾವುದು?
ಉತ್ತರ: ಹಲ್ಮಿಡಿ ಶಾಸನ
೬೨) ಕನ್ನಡದ ಮೊದಲ ರಾಜವಂಶ ಯಾವುದು?
ಉತ್ತರ: ಕದಂಬರು
೬೩) ಕನ್ನಡದ ಮೊದಲನೇ ಸಾಹಿತ್ಯ ಸಮ್ಮೇಳನ ಜರುಗಿದ ಸ್ಥಳ ಯಾವುದು?
ಉತ್ತರ: ಬೆಂಗಳೂರು
೬೪) ಮೊಟ್ಟಮೊದಲ ಬಾರಿಗೆ ಶಾಸನ ಸಂಗ್ರಹಣೆ ಪ್ರಾರಂಭಿಸಿದವರು ಯಾರು?
ಉತ್ತರ: ಆರ್. ನರಸಿಂಹಾಚಾರ್ಯ
ವಿದೇಶಿಗರು
೬೫) ಮೊದಲ ಕನ್ನಡ ಇಂಗ್ಲಿಷ್ ನಿಘಂಟು ಬರೆದವರು ಯಾರು?
ಉತ್ತರ: ರೆವರೆಂಡ್ ಫರ್ಡಿನಾಂಡ್ ಕಿಟೆಲ್
೬೬) ಎಪಿಗ್ರಾಫಿಯ ಕರ್ನಾಟಕವನ್ನು ಮೊದಲು ಸಂಗ್ರಹಿಸಿ ಪ್ರಕಟಿಸಿದವರು ಯಾರು?
ಉತ್ತರ: ಬಿ.ಎಲ್. ರೈಸ್
೬೭) ಕನ್ನಡ ವ್ಯಾಕರಣವನ್ನು ಮೊದಲು ಪ್ರಕಟಿಸಿದವರು ಯಾರು?
ಉತ್ತರ: ವಿಲಿಯಮ್ ಕೇರಿ. ಇವರು ೧೮೭೧ ರಲ್ಲಿ ಎ ಗ್ರಾಮರ್ ಆಫ್ ದಿ ಕರ್ನಾಟ ಲ್ಯಾಂಗ್ವೇಜ್
೬೮) ಕನ್ನಡಕ್ಕೆ ಮೊದಲ ಡಾಕ್ಟರೇಟ್ ಗಳಿಸಿದವರು ಯಾರು?
ಉತ್ತರ: ರೆವರೆಂಡ್ ಫರ್ಡಿನಾಂಡ್ ಕಿಟೆಲ್
೬೯) ಬೈಬಲ್ ಅನ್ನು ಕನ್ನಡಕ್ಕೆ ಅನುವಾದಿಸಿದವರು ಯಾರು?
ಉತ್ತರ: ಜಾನ್ ಹ್ಯಾಂಡ್ಸ್
ಪ್ರಶಸ್ತಿಗಳು
೭೦) ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ ಯಾರು?
ಉತ್ತರ: ಶಿವಮೊಗ್ಗ ಸುಬ್ಬಣ್ಣ
೭೧) ಕನ್ನಡ ಭಾಷೆಯ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ಪ್ರಶಸ್ತಿ ಪಡೆದ ಮೊದಲ ಕನ್ನಡದ ಕವಿ ಯಾರು?
ಉತ್ತರ: ಕುವೆಂಪು
೭೨) ಮೂರ್ತಿದೇವಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಉತ್ತರ: ಸಿ.ಕೆ. ನಾಗರಾಜರಾವ್
೭೩) ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಉತ್ತರ: ಗೋಪಾಲಕೃಷ್ಣ ಅಡಿಗ
೭೪) ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಸಂಗೀತಕಾರ ಯಾರು?
ಉತ್ತರ: ಮಲ್ಲಿಕಾರ್ಜುನ ಮನ್ಸೂರ್
೭೫) ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಮೊದಲ ನಟ ಯಾರು?
ಉತ್ತರ: ಡಾ: ರಾಜಕುಮಾರ್
೭೬) ದಾದಾಸಾಹೇಬ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಉತ್ತರ: ಡಾ: ರಾಜಕುಮಾರ್
೭೭) ಅಂಕಣ ಬರಹಕ್ಕೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಕವಿ ಯಾರು?
ಉತ್ತರ: ಡಾ: ಹಾ.ಮಾ. ನಾಯಕ್ ೧೯೮೯ ರಲ್ಲಿ ಸಂಪ್ರತಿ
೭೮) ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಕನ್ನಡಿಗರು ಯಾರು?
ಉತ್ತರ: ಡಾ: ಯು.ಆರ್. ಅನಂತಮೂರ್ತಿ
೭೯) ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಉತ್ತರ: ಜಿ.ಬಿ. ಜೋಶಿ
೮೦) ಕರ್ನಾಟಕ ಸರ್ಕಾರದ ಅತ್ತಿಮಬ್ಬೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಯಾರು?
ಉತ್ತರ: ಟಿ. ಸುನಂದಮ್ಮ
೮೧) ನಾಟಕ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಉತ್ತರ: ಕೆ.ವಿ. ಸುಬ್ಬಣ್ಣ
೮೨) ವಿಶ್ವ ಆಹಾರ ಸಂಸ್ಥೆಯ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಪ್ರಗತಿಪರ ರೈತ ಯಾರು?
ಉತ್ತರ: ದೇವಂಗಿ ಪ್ರಫುಲ್ಲ ಚಂದ್ರ
೮೩) ಮೊದಲ ಬಾರಿಗೆ ಪಂಪ ಪ್ರಶಸ್ತಿಯನ್ನು ಪಡೆದವರು ಯಾರು?
ಉತ್ತರ: ಕುವೆಂಪು
ಬಿರುದುಗಳು
೮೪) ಕನ್ನಡದ ಕಣ್ವ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಬಿ.ಎಂ. ಶ್ರೀ
೮೫) ಕನ್ನಡದ ಆಸ್ತಿ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಮಾಸ್ತಿ ವೆಂಕಟೇಶ ಅಯ್ಯಂಗಾರ್
೮೬) ಕನ್ನಡದ ಅಶ್ವಿನಿ ದೇವತೆಗಳು ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಎ.ಆರ್. ಕೃಷ್ಣಮೂರ್ತಿ ಮತ್ತು ಟಿ.ಎಸ್. ವೆಂಕಣ್ಣಯ್ಯ. ಟಿ.ಎಸ್. ವೆಂಕಣ್ಣಯ್ಯರವರು ಕುವೆಂಪುರವರ ಗುರುಗಳಾಗಿದ್ದರು
೮೭) ಕನ್ನಡದ ರತ್ನತ್ರಯರು ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಪಂಪ, ರನ್ನ, ಪೊನ್ನ
೮೮) ಕನ್ನಡದ ವರಕವಿ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ದ.ರಾ. ಬೇಂದ್ರೆ
೮೯) ಕನ್ನಡದ ಮೊದಲ ಶಿಲ್ಪಿ ಯಾರು?
ಉತ್ತರ: ತಿನಕ
೯೦) ಕನ್ನಡದ ದಾಸಯ್ಯ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಶಾಂತಕವಿ
೯೧) ಕನ್ನಡದ ದೇಶೀಯಕವಿ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಆಂಡಯ್ಯ
೯೨) ಕನ್ನಡದ ನವ್ಯಕಾವ್ಯದ ನೇತಾರ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಗಿರೀಶ್ ಕಾರ್ನಾಡ್
ಕ್ರೀಡೆ
೯೩) ಕರ್ನಾಟಕದ ಮೊದಲ ಟೆಸ್ಟ್ ಆಟಗಾರ ಯಾರು?
ಉತ್ತರ: ಪಿ.ಇ. ಪಾಲಿಯ
೯೪) ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಕ್ರಿಕೆಟ್ ಪಟು ಯಾರು?
ಉತ್ತರ: ಇ.ಎ.ಎಸ್. ಪ್ರಸನ್ನ
೯೫) ಭಾರತೀಯ ಕ್ರಿಕೆಟ್ ತಂಡದ ನಾಯಕಿಯಾದ ಪ್ರಥಮ ಕನ್ನಡತಿ ಯಾರು?
ಉತ್ತರ: ಶಾಂತ ರಂಗಸ್ವಾಮಿ
ಇತರೆ
೯೬) ಕನ್ನಡ ಭಾವಗೀತಗಳ ಮೊದಲ ಕ್ಯಾಸೆಟ್ ಯಾವುದು?
ಉತ್ತರ: ನಿತ್ಯೋತ್ಸವ
೯೭) ಕರ್ನಾಟಕದ ಮೊದಲ ಕಾಲೇಜು ಯಾವುದು?
ಉತ್ತರ: ಮಂಗಳೂರು ಸರ್ಕಾರೀ ಕಾಲೇಜು
೯೮) ಕರ್ನಾಟಕದ ಮೊದಲ ಮೆಡಿಕಲ್ ಕಾಲೇಜು ಯಾವುದು?
ಉತ್ತರ: ಬೆಂಗಳೂರು ಮೆಡಿಕಲ್ ಕಾಲೇಜು
೯೯) ಕನ್ನಡದ ಮೊದಲ ಬೆರಳಚ್ಚು ಯಂತ್ರದ ಲಿಪಿಯನ್ನು ಸಿದ್ಧಪಡಿಸಿದವರು ಯಾರು?
ಉತ್ತರ: ಅನಂತ ಸುಬ್ಬರಾವ್
೧೦೦) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
ಉತ್ತರ: ಮೈಸೂರು ವಿಶ್ವವಿದ್ಯಾನಿಲಯ
೧೦೧) ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೊದಲ ಮಹಿಳೆ ಯಾರು?
ಉತ್ತರ: ಜಯದೇವಿತಾಯಿ ಲಿಗಾಡೆ
೧೦೨) ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದದ್ದು ಎಲ್ಲಿ?
ಉತ್ತರ: ಬೆಂಗಳೂರು, ೧೯೧೫ ರಲ್ಲಿ
೧೦೩) ಕನ್ನಡ ನಾಡಿನ ಮೊದಲ ಕೋಟೆ ಯಾವುದು?
ಉತ್ತರ: ಬಾದಾಮಿ ಕೋಟೆ
೧೦೪) ಸಾವಿರ ಕಂಬಗಳ ಬಸದಿ ಇರುವ ಸ್ಥಳ ಯಾವುದು?
ಉತ್ತರ: ಮೂಡಬಿದರೆ
ನಿಮಗೆ ಇಷ್ಟವಾಗಬಹುದಾದ ಇತರೆ ಅಂಕಣಗಳು:
ಇದನ್ನು ಓದಿ: ಈ ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಓದಿಲ್ಲವೆಂದರೆ ನೀವು ಸಾಕಷ್ಟು ಕಳೆದುಕೊಂಡಿದ್ದೀರಿ
ಇದನ್ನು ಓದಿ: ಮಾನವ ಹಕ್ಕುಗಳು-ಪರಿಕಲ್ಪನೆ, ಉಗಮ ಮತ್ತು ಬೆಳವಣಿಗೆ
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ
ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?
ಇದನ್ನು ಓದಿ: ಆಕಳಿಕೆ ಬರಲು ಕಾರಣಗಳು ಮತ್ತು ಆಕಳಿಕೆ ಬಗ್ಗೆ ಕೆಲವು ಆಸಕ್ತಿದಾಯಕ ವಿಶೇಷಗಳು
ನಿಮಗೆ ಈ ಅಂಕಣ ಇಷ್ಟವಾಗಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದು ಮರಿಬೇಡಿ.
Disclaimer: When you click one of the links to Amazon, we’ll get a minute commission. We thank you in advance for your support by buying from our links 🙏.
ಡಿಸ್ಪ್ಲೇಮರ್: ನೀವು ಅಮೆಜಾನ್ನ ಯಾವುದಾದರೂ ಲಿಂಕ್ ಒತ್ತಿ ಪುಸ್ತಕಗಳನ್ನು ಕೊಂಡರೆ, ನಮಗೆ ಅಮೆಜಾನ್ ನಿಂದ ಸಣ್ಣದಾದ ಕಮಿಷನ್ ಸಿಗುತ್ತದೆ. ನಮ್ಮ ಲಿಂಕ್ಸ್ ನಿಂದ ಕೊಂಡಿದ್ದಕ್ಕಾಗಿ, ನಿಮಗೆ ನಾವು ಚಿರಋಣಿಗಳು 🙏.
ಸರ್ವೇ ಜನ ಸುಖಿನೋ ಭವಂತು 🙏