Mind Sharing?

ಚಲನಚಿತ್ರ: ಭಕ್ತ ಪ್ರಹ್ಲಾದ(1983)
ಗಾಯಕರು: ಡಾ: ರಾಜಕುಮಾರ್, ವಾಣಿ ಜಯರಾಮ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ.ಜಿ. ಲಿಂಗಪ್ಪ

**********************************************************************************************************************************

ಹೆಣ್ಣು: ಆ…. ಆ ಆ ಆ ಆ ಆ
ಓ ಓ ಓ…. ಒ ಒ ಒ ಒ ಓ ಓ ಓ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಲಾಲಿ ಲಾಲಿ ಸುಕುಮಾರ
ಲಾಲಿ ಮುದ್ದು ಬಂಗಾರ
ಲಾಲಿ ಲಾಲಿ ಸುಕುಮಾರ
ಲಾಲಿ ಮುದ್ದು ಬಂಗಾರ
ಅಮ್ಮನ ಬಾಳಿನ ನೆಮ್ಮದಿಗೆ
ಕಂದ ನೀನೇ ಆಧಾರ
ಅಮ್ಮನ ಬಾಳಿನ ನೆಮ್ಮದಿಗೆ
ಕಂದ ನೀನೇ ಆಧಾರ
ಲಾಲಿ ಲಾಲಿ ಸುಕುಮಾರ
ಲಾಲಿ ಮುದ್ದು ಬಂಗಾರ
ಹತ್ತು ಜನುಮಗಳ ಪುಣ್ಯದ ಫಲವೋ
ಮುತ್ತಂತೆ ಬಂದೆ
ಹತ್ತು ಜನುಮಗಳ ಪುಣ್ಯದ ಫಲವೋ
ಮುತ್ತಂತೆ ಬಂದೆ
ಹೆತ್ತ ತಾಯಿಗೆ ಎಂದೂ ಕಾಣದ
ಆನಂದ ತಂದೆ
ಹೆತ್ತ ತಾಯಿಗೆ ಎಂದೂ ಕಾಣದ
ಆನಂದ ತಂದೆ
ಆನಂದ ತಂದೆ
ಆನಂದ ತಂದೆ
ಲಾಲಿ ಲಾಲಿ ಸುಕುಮಾರ
ಲಾಲಿ ಮುದ್ದು ಬಂಗಾರ
ಲಾಲಿ ಲಾಲಿ ಸುಕುಮಾರ
ಲಾಲಿ ಮುದ್ದು ಬಂಗಾರ
ಗಂಡು: ಮೂರು ಲೋಕವು ನಿನ್ನ
ಪಾದಗಳ ಕೆಳಗೆ
ಬಿದ್ದಿರೇ ಎ ಎ ಎ ಏ ಎ ಎ ಎ ಎ ಎ
ಆ ಆ ಆ ಆ ಆ ಆ ಆ ಆ ಆ
ಯಕ್ಷ ರಾಕ್ಷಸ ಕಿನ್ನರರೆಲ್ಲಾ
ಗಡಗಡ ನಡುಗಿರೇ
ಇಂದ್ರ, ಅಗ್ನಿ, ವಾಯು, ವರುಣ
ನಿನ್ನ ಸೇವೆಯ ಮಾಡಿರೇ
ದರ್ಪದಿಂದ ದಾನವ ರಾಜ್ಯವ
ಕಂದಾ ನೀನಾಳು
ಕಂದಾ ನೀನಾಳು
ಹೆಣ್ಣು: ಹರನ ಕರುಣೆ ಎಂದು ನಿನ್ನ
ರಕ್ಷಿಸಲಿ ಮಗುವೇ
ಹರನ ಕರುಣೆ ಎಂದು ನಿನ್ನ
ರಕ್ಷಿಸಲಿ ಮಗುವೇ
ಗಂಡು: ಹರಿಯೇ ವೈರಿ ದಾನವ ಕುಲಕೆ
ಮರೆಯದಿರು ಶಿಶುವೇ
ಹರಿಯೇ ವೈರಿ ದಾನವ ಕುಲಕೆ
ಮರೆಯದಿರು ಶಿಶುವೇ
ಮರೆಯದಿರು ಶಿಶುವೇ
ಹೆಣ್ಣು/ಗಂಡು: ಲಾಲಿ ಲಾಲಿ ಸುಕುಮಾರ
ಲಾಲಿ ಮುದ್ದು ಬಂಗಾರ
ಲಾಲಿ ಲಾಲಿ ಸುಕುಮಾರ
ಲಾಲಿ ಮುದ್ದು ಬಂಗಾರ
ಗಂಡು: ಚೆಲುವೆ ನೀನು ನನ್ನ ಬಾಳಿಗೆ ಸೌಭಾಗ್ಯ ತಂದೆ
ಮಡದಿ ನಿನ್ನ ಕೈಯ ಹಿಡಿದು ಸಂತೋಷ ಕಂಡೆ
ಹೆಣ್ಣು: ನಿಮ್ಮ ಪ್ರೇಮದ ನುಡಿಗೆ ಸ್ವಾಮಿ ಎಂದೋ ನಾ ಸೋತೆ
ನಿಮ್ಮ ಪ್ರೀತಿಯ ಕಾಣಿಕೆ ಕಂಡು ಇಂದು ಬೆರಗಾದೆ
ಇಂದು ಬೆರಗಾದೆ
ಇಂದು ಬೆರಗಾದೆ
ಗಂಡು: ಬಾರೇ ಬಾರೇ ಸುಕುಮಾರಿ
ಬಾರೇ ನನ್ನ ಬಂಗಾರಿ
ಬಾರೇ ಬಾರೇ ಸುಕುಮಾರಿ
ಬಾರೇ ನನ್ನ ಬಂಗಾರಿ
ಆ…. ಆ ಆ ಆ ಆ ಆ
ಆ…. ಆ ಆ ಆ ಆ ಆ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್

ನಿಮಗೆ ಇಷ್ಟ ಆಗಬಹುದಾದ ಇತರ ಅಂಕಣಗಳು: 

ಓದಲೇ ಬೇಕಾದ ಪುಸ್ತಕಗಳು: ಈ ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಓದಿಲ್ಲವೆಂದರೆ ನೀವು ಸಾಕಷ್ಟು ಕಳೆದುಕೊಂಡಿದ್ದೀರಿ
ಇದನ್ನು ಓದಿ: ಕನ್ನಡದ ಮೊದಲುಗಳ ಬಗ್ಗೆ ಸವಿವರ ಪರಿಚಯ ಈಗಲೇ ಓದಿ
ಇದನ್ನು ಓದಿ: ಮಾನವ ಹಕ್ಕುಗಳು-ಪರಿಕಲ್ಪನೆ, ಉಗಮ ಮತ್ತು ಬೆಳವಣಿಗೆ
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ
ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?
ಇದನ್ನು ಓದಿ: ಆಕಳಿಕೆ ಬರಲು ಕಾರಣಗಳು ಮತ್ತು ಆಕಳಿಕೆ ಬಗ್ಗೆ ಕೆಲವು ಆಸಕ್ತಿದಾಯಕ ವಿಶೇಷಗಳು

Mind Sharing?