Mind Sharing?

ನೀವು Online Business Ideas In Kannada ಅಂತ ಆನ್ಲೈನ್ ನಲ್ಲಿ ಹುಡುಕ್ತಾ ಇದ್ರೆ, ನಾನು ನಿಮಗೆ ಖಾತ್ರಿಯಾಗಿ ಹಣ ಗಳಿಸುವ ಬಿಸಿನೆಸ್ ವಿಚಾರಗಳನ್ನು ತಿಳಿಸುತ್ತೇನೆ.

ನೋಡಿ ಗುರು ನಾನು ಆನ್ಲೈನ್ ದುಡಿಮೆ ಮಾಡಕ್ಕೆ ಶುರು ಮಾಡಿದ್ದು 2013ರಲ್ಲಿ.

ಆನ್ಲೈನ್ ಉದ್ಯಮ ಎಷ್ಟು ಮುಂದುವರೆದಿರುವಾಗ, ಹಣ ಮಾಡಕ್ಕೆ ಗೊತ್ತಿಲ್ಲ ಅಂತ ಹೇಳೋದು, ಪೆದ್ದತನ.

ನೀವು ಆನ್ಲೈನ್ ನಲ್ಲಿ ಹೇಗೆ ದುಡಿಮೆ ಮಾಡಬಹುದು, ಹಾಗೆ ಖಾತರಿಯಾಗಿ ಹಣ ಗಳಿಸಬಹುದು, ನಿಮಗೆ ಇದು ಪ್ರಸ್ತುತ.
ಹಣ ಮಾಡುವ ವಿಧಾನ: ಆನ್ಲೈನ್ ಹಣ ಹೇಗೆ ಗಳಿಸುವುದು?

 

Online Business Ideas In Kannada | ಆನ್ಲೈನ್ ನಲ್ಲಿ ಯಾವ ರೀತಿ ಬಿಸಿನೆಸ್ ಮಾಡಬಹುದು?

ದುಡಿಮೆ ಮಾಡಕ್ಕೆ ಆನ್ಲೈನ್ ನಲ್ಲಿ ಎರಡು ರೀತಿಯ ಇನ್ಕಮ್ ಕ್ಯಾಟಗರಿ ಇದೆ.

  1. ಆಕ್ಟಿವ್ ಇನ್ಕಮ್
  2. ಪ್ಯಾಸಿವ್ ಇನ್ಕಮ್

ಇದನ್ನು ಓದಲೇ ಬೇಕು: ಓದಲೇ ಬೇಕಾದ ಕನ್ನಡ ಬೆಸ್ಟ್ ಬುಕ್ಸ್ ಕನ್ನಡದಲ್ಲಿ

 

ಆಕ್ಟಿವ್ ಇನ್ಕಮ್ ಅಂದರೇನು? What Is Active Income?

ನಿಮ್ಮ ಸಮಯವನ್ನು ಕೊಟ್ಟು ಹಣ ಗಳಿಸುವ ಮಾರ್ಗ ನಿಮ್ಮ ಕೆಲಸವಾದರೆ ಅದಕ್ಕೆ ಆಕ್ಟಿವ್ ಇನ್ಕಮ್ ಎಂದು ಹೇಳುತ್ತೇವೆ.

ಉದಾಹರಣೆಗೆ: ನೀವೀಗ ಟೀಚರ್. ನೀವು ಪ್ರತಿದಿನ ಸ್ಕೂಲ್ ಗೆ ಹೋಗಬೇಕು, ನಿಮ್ಮ ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು, ನಿಮ್ಮ ಪೂರ್ಣ ಸಮಯ ಅಲ್ಲಿ ಕಳೆಯಬೇಕು. ನೀವು ಹೋಗದಿದ್ದ ದಿನಕ್ಕೆ ಸಂಬಳ ಇರುವುದಿಲ್ಲ, ನಿಮ್ಮ ಸಮಯವನ್ನು ಕೊಟ್ಟು ಹಣ ಗಳಿಸುವುದಕ್ಕೆ, ಇದಕ್ಕೆ ಆಕ್ಟಿವ್ ಇನ್ಕಮ್ ಎನ್ನುವುದು.

ಪ್ಯಾಸಿವ್ ಇನ್ಕಮ್ ಎಂದರೇನು? Passive Income Meaning In Kannada:

ಪ್ಯಾಸಿವ್ ಇನ್ಕಮ್ ಎಂದರೆ ನೀವು ಮಾಡಿದ ಸ್ವಲ್ಪ ಸಮಯದ ಕೆಲಸಕ್ಕೆ, ಮತ್ತೆ ಕೆಲಸ ಮಾಡದೆ ಹಣ ಗಳಿಸುವುದು ಎಂದು ಅರ್ಥ.

ಉದಾಹರಣೆಗೆ: ಶೇರುಗಳಲ್ಲಿ ಹೂಡಿಕೆ, ಬ್ಲಾಗ್ ಮಾಡುವುದು, ವಿಡಿಯೋಗಳನ್ನು ಮಾಡಿ ಯೌಟ್ಯೂಬ್ ನಲ್ಲಿ ಹಣ ಗಳಿಸುವುದು, ನಿಮ್ಮದೇ ಪುಸ್ತಕ ಬರೆದು ಅದರ ರಾಯಲ್ಟಿ ಪಡೆಯುವುದು. ಇವೆಲ್ಲವೂ ನೀವು ಮತ್ತೆ ಅದಕ್ಕೆ ಕೆಲಸ ಮಾಡದೆ, ಹಣ ಗಳಿಸುತ್ತವೆ. ಇದಕ್ಕೆ ಪ್ಯಾಸಿವ್ ಇನ್ಕಮ್ ಎನ್ನುವುದು.
ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?

 

ಆಕ್ಟಿವ ಇನ್ಕಮ್ ನಿಂದ ಹಣ ಗಳಿಸುವ ಮಾರ್ಗಗಳು ಯಾವುವು? Active Income Ideas in Kannada:

ನಿಮ್ಮ ಸಮಯ ಕೊಟ್ಟು ಹಣ ಗಳಿಸುವ ಮಾರ್ಗಗಳು ಆನ್ಲೈನ್ ನಲ್ಲಿ ಸಾಕಷ್ಟಿವೆ.

  1. Fiverr ನಲ್ಲಿ ನಿಮ್ಮದೇ ಸರ್ವಿಸ್ ಕೊಡುವುದು: ನೀವು ಯಾವ ಸರ್ವಿಸ್ ಕೊಡಬೇಕು, Fiverr ನಲ್ಲಿ ಹುಡುಕಿರಿ. 4000 ಕ್ಕಿಂತ ಕಮ್ಮಿ ಇರುವ ಸರ್ವಿಸ್ ನೀವು ಆಯ್ಕೆ ಮಾಡಿಕೊಂಡರೆ, ನಿಮಗೆ ಬೇಗ ಆರ್ಡರ್ಗಳು ಸಿಗಬಹುದು.
  2. ಆನ್ಲೈನ್ ಟ್ಯೂಟರ್ ಆಗಿ ಕೆಲಸ ಮಾಡುವುದು: guruq, gharpeshiksha, urbanpro ಇಂತಹ ವೆಬ್ಸೈಟ್ಗಳಲ್ಲಿ, ನೀವು ಟ್ಯೂಟರ್ ಕೆಲಸ ಮಾಡಿ ಸಂಪಾದನೆ ಮಾಡಬಹುದು.
  3. ನೀವು ಫೀಲಾನ್ಸಿಂಗ್ ಮಾಡಬಹುದು: ನಿಮಗೆ ಗೊತ್ತಿರುವ ಯಾವುದಾದರೂ ಬುದ್ಧಿ ಚಾಕಚಕ್ಯತೆ ಉಪಯೋಗಿಸಿ, ಪ್ರಾಜೆಕ್ಟ್ ತೆಗೆದುಕೊಂಡು ರಿಲ್ಯಾನ್ಸಿಂಗ್ ಮಾಡಬಹುದು. ಆದಾಯ ಕೊಡುವ ಫೀಲಾನ್ಸಿಂಗ್ ವೆಬ್ಸೈಟ್ಗಳು, Fiverr, Freelancer, ಹಾಗೂ Upwork.
  4. ನೀವು ಆರ್ಟಿಕಲ್ ಬರೆಯಬಹುದು: ಆರ್ಟಿಕಲ್ ಬರೆದರೆ 30 ರಿಂದ 50 ಡಾಲರ್ ಆದಾಯ ಬರಬಹುದು. ಆದಾಯ ಕೊಡುವ ಬ್ಲಾಗಗಳು Digital Ocean, Siteground, Kinsta Hosting, ಹಾಗೂ Medium – Where good ideas find you.
  5. ಸ್ಟಾಕ್ ಟ್ರೇಡಿಂಗ್ ಮಾಡುವುದು: ಟೆಕ್ನಿಕಲ್ ಅನಾಲಿಸಿಸ್ ಕಲಿತುಕೊಂಡು, ಸ್ಟಾಕ್ ಟ್ರೇಡಿಂಗ್ ಮಾಡಲು ಶುರು ಮಾಡಬಹುದು. ಇದಕ್ಕೆ ಸಾಕಷ್ಟು ಬುದ್ಧಿ ಚಾಕಚಕ್ಯತೆ ಹಾಗೂ ಸಮಯ ಬೇಕಾಗುತ್ತದೆ ಕಲಿಯಲು. ಬೇಕೆಂದರೆ ನನ್ನ ಪುಸ್ತಕ ಓದಬಹುದು.

 

ಪ್ಯಾಸಿವ್ ಇನ್ಕಮ್ ಗಳಿಸುವ ಮಾರ್ಗಗಳು ಯಾವುವು? Passive Income Ideas In Kannada:

ಆಸಿಫ್ ಇನ್ಕಮ್ ನೀವು ಕೆಲಸ ಮಾಡದೆ ನೀವು ನಿದ್ದೆ ಮಾಡ್ತಿರುವಾಗಲು ದುಡ್ಡು ಕೊಡುತ್ತೆ.

ಜಗತ್ತಿನ ಶ್ರೀಮಂತ ವ್ಯಕ್ತಿ Warren Buffet ಹೇಳಿರೋದು ಅಂದ್ರೆ:

If you don’t earn income while you sleep, you will have to work for the whole of your life. 

ನಾನು ನನ್ನ ಹಿಂದಿನ ಅಂಕಣದಲ್ಲಿ ಬ್ಲಾಗ್ ತೆರೆಯುವುದು ಹೇಗೆ, ಹಾಗೆ ಯೂಟ್ಯೂಬ್ ಚಾನೆಲ್ ಶುರು ಮಾಡುವುದು ಹೇಗೆ ಅಂತ ಹೇಳಿ ಕೊಟ್ಟಿದ್ದೀನಿ. ಇನ್ನೂ ಓದಿಲ್ಲ ಅಂದ್ರೆ ಈಗಲೇ ಹೋಗಿ ಓದಿ.

ಈ ಅಂಕಣದಲ್ಲಿ ಇನ್ನೂ ಹೆಚ್ಚಿನ ಪ್ಯಾಸಿವ್ ಇನ್ಕಮ್ ಐಡಿಯಾಗಳನ್ನ, ಕೊಡ್ತೀನಿ.

  1. ನಿಮ್ಮದೇ ಬ್ಲಾಗ್ ಶುರು ಮಾಡುವುದು: ಇದನ್ನು ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ನಿಮ್ಮದೇ ಡೊಮಿನ್ ಪೋಸ್ಟಿಂಗ್ ತೆಗೆದುಕೊಂಡು ಒಂದು wordpress ಬ್ಲಾಗ್ ಶುರು ಮಾಡಿ. ಪ್ರತಿದಿನ ಆರ್ಟಿಕಲ್ ಬರೆದು, ಆಡ್ಸೆನ್ಸ್ ಗೆ ಅಪ್ಲೈ ಮಾಡಿ. 20 ಆರ್ಟಿಕಲ್ ಬರೆದ ಮೇಲೆ ಆಡ್ಸೆನ್ಸ್ approval ಸಿಗುತ್ತದೆ. ಆನಂತರ ನೀವು ದುಡಿಯಲು ಶುರು ಮಾಡುತ್ತೀರಾ.
  2. ನಿಮ್ಮದೇ ಯೂಟ್ಯೂಬ್ ಚಾನೆಲ್ ಶುರು ಮಾಡುವುದು: ನಿಮಗೆ ಏನು ಗೊತ್ತು ಅದರ ಮೇಲೆ ವಿಡಿಯೋಗಳನ್ನು ಮಾಡುವುದು. ಮುಂದಿನ 30 ದಿನಗಳು, ಪ್ರತಿದಿನ ವಿಡಿಯೋ ಅಪ್ಲೋಡ್ ಮಾಡಿ. ಇದರಿಂದ ಯೂಟ್ಯೂಬ್ ಯಾವುದಾದರೂ ಒಂದು ವಿಡಿಯೋವನ್ನು ಹೆಚ್ಚು ಜನರಿಗೆ ತಲುಪಿಸುತ್ತದೆ. ಆ ರೀತಿಯ ವಿಡಿಯೋ ಹೆಚ್ಚು ಮಾಡಿ. ಯೂಟ್ಯೂಬ್ನಿಂದ ಸ್ಪೋನ್ಸರ್ಶಿಪ್, ಗೂಗಲ್ ಆಡ್ಸೆನ್ಸ್, ಹಾಗೂ ನಿಮ್ಮದೇ ಬ್ರಾಂಡ್ ಟಿ-ಶರ್ಟ್ ಗಳನ್ನು ಮಾರಿ, ಹಣ ಸಂಪಾದಿಸಬಹುದು.
  3. ನಿಮ್ಮದೇ ಸ್ವಂತ ಪುಸ್ತಕ ಬರೆಯುವುದು: ಪುಸ್ತಕ ಬರೆಯುವುದು ದೊಡ್ಡ ವಿಷಯವೇನಲ್ಲ. ನೀವು ಕೇವಲ 80 ಪುಟಗಳ ಪುಸ್ತಕ ಬರೆದರು ಅದನ್ನು ಓದುವವರು ಸಾಕಷ್ಟು ಜನರಿದ್ದಾರೆ. ಈಗ ನೀವು ಡಾ. ಬಳಿ ಹೋಗಿ, ನಾನು ಹಣ ಕೊಟ್ಟಿದ್ದಕ್ಕಾಗಿ ಜಾಸ್ತಿ ಹೊತ್ತು ಟ್ರೀಟ್ಮೆಂಟ್ ಕೊಡಿ ಅಂತ ಕೇಳ್ತೀರಾ, ಇಲ್ಲ ನನ್ನ ತೊಂದರೆ ಬೇಗ ಹೋಗಿಸಿ ಅಂತ ಕೇಳ್ತೀರಾ? ಅದೇ ರೀತಿ ಪುಸ್ತಕ ಕೂಡ. ಚಿಕ್ಕದಿದ್ದರೂ ಚೊಕ್ಕದಾಗಿ ಬರೆದಿದ್ದರೆ, ಓದುವವರು ಸಾಕಷ್ಟು ಮಂದಿ ಇದ್ದಾರೆ. ಪ್ರತಿದಿನ 2,000 ಪದಗಳನ್ನು ಬರೆಯುವುದಕ್ಕೆ ಶುರು ಮಾಡಿ. 15 ದಿನಗಳಲ್ಲಿ, ನಿಮ್ಮ ಪುಸ್ತಕ ರೆಡಿ ಆಗುತ್ತೆ. ಅದನ್ನು Grammarly ಉಪಯೋಗಿಸಿ ಚೆನ್ನಾಗಿ ಎಡಿಟ್ ಮಾಡಿ. ಅಮೆಜಾನ್ ಕೆಡಿಪಿಯಲ್ಲಿ ಅಕೌಂಟ್ ತೆರೆದು ಈಗಲೇ ನಿಮ್ಮ ಪುಸ್ತಕ ಬಿಡುಗಡೆ ಮಾಡಿ. ಇನ್ನೂ ಹೆಚ್ಚು ಐಡಿಯಾ ಬೇಕಿದ್ದರೆ ಈ ಪುಸ್ತಕ Financial Independence for Women ಓದಬಹುದು.
  4. Affiliate ಮಾರ್ಕೆಟಿಂಗ್ ಮಾಡಿ: ಅಂದರೆ ನಿಮ್ಮ ಬ್ಲಾಗ್, ಇಲ್ಲವೇ ಯೂಟ್ಯೂಬ್ ಚಾನೆಲ್, ಇಲ್ಲವೇ ಇನ್ಸ್ಟಾಗ್ರಾಂ, ಎಲ್ಲಿ ನಿಮ್ಮ ಫಾಲೋವರ್ಸ್ ಇದ್ದಾರೋ, ಅವರಿಗೆ ನೀವು ಉಪಯೋಗಿಸುವ ವಸ್ತುಗಳ ಅಮೆಜಾನ್ ಲಿಂಕ್ ಕೊಡಿ. ಅವರಿಗೆ ಬೇಕಾದರೆ ಕೊಂಡುಕೊಳ್ಳುತ್ತಾರೆ. ಇಲ್ಲವೇ ನೀವು ಯೂಸ್ ಮಾಡುವ ಪೋಸ್ಟಿಂಗ್ ವಿವರ ಕೊಟ್ಟು ನಿಮ್ಮ Affiliate ಲಿಂಕ್ ಹಾಕಿ. ಬೇಕಾದರೆ ಕೊಂಡುಕೊಳ್ಳುತ್ತಾರೆ. ಅದರಿಂದ ನಿಮಗೆ ಕಮಿಷನ್ ಸಿಗುತ್ತದೆ. ಅಮೆಜಾನ್ Affiliate ಪ್ರೋಗ್ರಾಮ್ ಗೆ ಈಗಲೇ ಅಪ್ಲೈ ಮಾಡಿ.

ಇಷ್ಟು ಸಾಕು ಅನ್ಸುತ್ತೆ, ನಿಮ್ಮ ಆನ್ಲೈನ್ ಬಿಸಿನೆಸ್ ಐಡಿಯಾಸ್ ಬಾಯಾರಿಕೆ ತಣಿಸೋದಿಕ್ಕೆ.

ನಿಮ್ಮ ಲ್ಯಾಪ್ಟಾಪ್ ದೂಳು ಕಟ್ಟಿಕೊಂಡು ಕೂತಿರೋದರ ಬದಲು ಇದರಲ್ಲಿ ಯಾವುದಾದರೂ ಒಂದು ಶುರು ಮಾಡಿ. ಪ್ರತಿದಿನ ಇದನ್ನು ಮುಂದುವರೆಸಿಕೊಂಡು ಹೋದರೆ ನೀವು ಹಣ ಮಾಡುವುದು ಖಚಿತ.

ಇನ್ನೂ ಹೆಚ್ಚಿನ ಐಡಿಯಾಗಳು ಬೇಕು ಅಂದರೆ, ನಮ್ಮ ಕನ್ನಡ 360 ಅಂಕಣಗಳನ್ನು ಫಾಲೋ ಮಾಡ್ತಾ ಇರಿ.

 

ನಮ್ಮ ಇತರೆ ಓದಲು ಅತ್ಯುತ್ತಮ ಅಂಕಣಗಳು: 

ಇದನ್ನು ಓದಲೇ ಬೇಕು: ಓದಲೇ ಬೇಕಾದ ಕನ್ನಡ ಬೆಸ್ಟ್ ಬುಕ್ಸ್ ಕನ್ನಡದಲ್ಲಿ
ಇದನ್ನು ಓದಿ: ಮ್ಯೂಚುವಲ್ ಫಂಡ್ ನಿಜವಾಗ್ಲೂ ಹಣ ದುಪ್ಪಟ್ಟು ಮಾಡುತ್ತ?
ಇದನ್ನು ಓದಿ: ಕನ್ನಡದ ವಚನಕಾರರು ಮತ್ತು ಅವರ ಅಂಕಿತನಾಮ

ಇದನ್ನು ಓದಿ: ಪ್ರಾಚೀನ ಭಾರತ-ಮೂಲಾಧಾರಗಳು
ಇದನ್ನು ಓದಿ: ಅನ್ನ ಭಾಗ್ಯ ಯೋಜನ: ಭಾಗ್ಯಕ್ಕೆ ಹೊಡಿತು ಸ್ಟ್ರೋಕ್
ಹಣ ಮಾಡುವ ವಿಧಾನ: ಆನ್ಲೈನ್ ಹಣ ಹೇಗೆ ಗಳಿಸುವುದು?

ನಿಮಗೆ ಈ Online Business Ideas In Kannada Language ಅಂಕಣ ಇಷ್ಟವಾಗಿದ್ದರೆ, ಸೋಶಿಯಲ್ ಮೀಡಿಯಾ ನಲ್ಲಿ ಶೇರ್ ಮಾಡಲು ಮರಿಬೇಡಿ.

ಸರ್ವೇ ಜನ ಸುಖಿನೋ ಭವಂತು 🙏

Mind Sharing?